ಡ್ರಗ್ಸ್ ಪ್ರಚೋದನೆ ಹಾಡು : ವಿಜಯ್ ಚಿತ್ರತಂಡಕ್ಕೆ ನೀಡಿದ ಖಡಕ್ ಸೂಚನೆ ಏನು?

By
2 Min Read

ಮಿಳಿನ ಖ್ಯಾತ ನಟ ದಳಪತಿ ವಿಜಯ್, ಸದಾ ಸಮಾಜಮುಖಿ ಚಿಂತೆಗಳಲ್ಲಿ ತೊಡಗಿಕೊಂಡವರು. ಸಿನಿಮಾ ಮೂಲಕ ಮಾತ್ರವಲ್ಲ, ವೈಯಕ್ತಿಕ ಜೀವನವನ್ನು ಅಷ್ಟೇ ಹಸನಾಗಿ ಇಟ್ಟುಕೊಂಡವರು. ಮೊನ್ನೆಯಷ್ಟೇ ಅವರ ನಟನೆಯ ಲಿಯೋ ಸಿನಿಮಾದ ‘ನಾ ರೆಡಿದಾ ವರವಾ’ ಹಾಡು ರಿಲೀಸ್ ಆಗಿತ್ತು. ಈ ಹಾಡಿನ ಕುರಿತಾಗಿ ಸಾಕಷ್ಟು ಟೀಕೆ ಕೇಳಿ ಬಂದಿದ್ದವು.

‘ನಾ ರೆಡಿದಾ ವರವಾ’ ಹಾಡಿನಲ್ಲಿ ಡ್ರಗ್‌ ಮತ್ತು ಮಾದಕ ವಸ್ತುಗಳನ್ನು ಪ್ರಚೋದಿಸುವಂತಹ ಅಂಶಗಳು ಇವೆ. ಇವು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಆರೋಪಿಸಿ ಸೆಲ್ವಂ ಅನ್ನುವವರು ದೂರು ನೀಡಿದ್ದರು. ಮಾದಕ ಕ್ರಮ ನಿಯಂತ್ರಣ ತಡೆ ಕಾಯ್ದೆ ಅನ್ವಯ ಚಿತ್ರತಂಡದ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ. ಸೆಲ್ವಂ ನಡೆಗೆ ಸ್ವತಃ ವಿಜಯ್ ಅಭಿನಂದಿಸಿದ್ದಾರೆ. ಹಾಡಿನಲ್ಲಿ ಮಾರ್ಪಾಡು ಮಾಡುವಂತೆ ನಿರ್ದೇಶಕರಿಗೆ ವಿಜಯ್ ಸೂಚಿಸಿದ್ದಾರೆ.

ವಿಜಯ್ ಸೂಚನೆಯಂತೆ ಹಾಡಿನಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದು, ಮಾದಕ ವಸ್ತು ಪ್ರಚೋದಿಸುವಂತಹ ಎಲ್ಲ ಅಂಶಗಳನ್ನು ತೆಗೆದಿರುವುದಾಗಿ ಚಿತ್ರತಂಡ ಹೇಳಿದೆ. ವಿಜಯ್ ಅವರ ಸಾಮಾಜಿಕ ಕಳಕಳಿಗೆ ಚಿತ್ರತಂಡ ಜೊತೆಯಾಗಿ ಗೌರವಿಸಿದೆ. ಈ ನಡೆಗೆ ಭಾರೀ ಪ್ರಶಂಸೆ ಕೂಡ ವ್ಯಕ್ತವಾಗಿದೆ.

ಕಳೆದ ಜೂನ್ 22 ರಂದು ವಿಜಯ್​ (Dalpati Vijay) ಹುಟ್ಟುಹಬ್ಬದ ಪ್ರಯುಕ್ತ ‘ಲಿಯೋ’ (Leo) ಚಿತ್ರತಂಡದವರು ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ವಿಜಯ್​ ಅವರಿಗೆ ಶುಭಾಶಯ ಕೋರಿದ್ದರು. ಜೊತೆಗೆ ಸಿನಿಮಾದ ಮೊದಲ ಲಿರಿಕಲ್​ ಹಾಡು (Song) ಬಿಡುಗಡೆ ಮಾಡಿದ್ದರು. ಇದನ್ನೂ ಓದಿ:ಆಸ್ಕರ್ ಜ್ಯೂರಿಯಾಗುವ ಅವಕಾಶ ಪಡೆದ ರಾಮ್‌ಚರಣ್- ಜ್ಯೂ.ಎನ್‌ಟಿಆರ್

‘ನಾ ರೆಡಿದಾ ವರವಾ’ (Na Redida Varava) ಎಂಬ ಲಿರಿಕಲ್​ ಹಾಡು ಅಂದು ಬಿಡುಗಡೆ ಆಗಿತ್ತು. ಅದೇ ಹಾಡು ವಿವಾದಕ್ಕೂ ಕಾರಣವಾಗಿತ್ತು. ಈಗಾಗಲೇ ತೆಲುಗು ಸಿನಿಮಾ ರಂಗದಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿದೆ. ಕೆಲವರ ವಿಚಾರಣೆ ಹಾಗೂ ಬಂಧನ ಕೂಡ ನಡೆದಿದೆ. ಈ ಹೊತ್ತಿನಲ್ಲಿ ಹಾಡಿನಲ್ಲಿ ಡ್ರಗ್ಸ್ (Drugs) ಪ್ರಚೋದಿಸುವಂತಹ ಸನ್ನಿವೇಶಗಳು ಇದ್ದವು. ಹಾಗಾಗಿ ಈ ಹಾಡಿನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೆಲ್ವಂ ಅನ್ನುವವರು ದೂರು (Complaint) ನೀಡಿದ್ದರು.

ನಾ ರೆಡಿದಾ ವರವಾ ಹಾಡಿಗೆ ವಿಜಯ್​ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್​ ರವಿಚಂದರ್​ ಧ್ವನಿಯಾಗಿರುವುದು ವಿಶೇಷ. ಈ ಹಾಡಿಗೆ ವಿಷ್ಣು ಎಡವನ್​ ಸಾಹಿತ್ಯ ರಚಿಸಿದ್ದು, ವಿಜಯ್​ ಸಖತ್​ ಸ್ಟೆಪ್​ ಹಾಕಿದ್ದಾರೆ. ಈ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮೂರು ಮಿಲಿಯನ್​ಗಳಿಗೂ ಹೆಚ್ಚು ವೀಕ್ಷಣೆ ಕಂಡಿತ್ತು.

‘ಮಾಸ್ಟರ್’ ನಂತರ ನಿರ್ದೇಶಕ ಲೋಕೇಶ್​ ಕನಕರಾಜ್​ (Lokesh Kanakaraj) ಮತ್ತು ವಿಜಯ್ ಜೊತೆಯಾಗಿ ಕೆಲಸ ಮಾಡುತ್ತಿರುವ ‘ಲಿಯೋ’ ಚಿತ್ರವನ್ನು ಸೆವೆನ್​ ಸ್ಕ್ರೀನ್​ ಸ್ಟುಡಿಯೋಸ್​ ಬ್ಯಾನರ್​ನಲ್ಲಿ ಲಲಿತ್​ ಕುಮಾರ್​ ನಿರ್ಮಿಸುತ್ತಿದ್ದಾರೆ. ಇನ್ನು, ನಿರ್ದೇಶನದ ಜೊತೆಗೆ ಕಥೆ ಮತ್ತು ಚಿತ್ರಕಥೆಯನ್ನೂ ರಚಿಸಿದ್ದಾರೆ ವಿಜಯ್​.

 

‘ಲಿಯೋ’ ಒಂದು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಅಕ್ಟೋಬರ್​ 19ರಂದು ಐದು ಭಾಷೆಗಳಲ್ಲಿ  ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಬಾಲಿವುಡ್​ ನಟ ಸಂಜಯ್​ ದತ್​ ಈ ಚಿತ್ರದ ಮೂಲಕ ಕಾಲಿವುಡ್​ಗೆ ಎಂಟ್ರಿ ಕೊಡುತ್ತಿದ್ದು, ವಿಜಯ್​ ಮತ್ತು ಸಂಜಯ್​ ದತ್​ ಜೊತೆಗೆ ತ್ರಿಷಾ, ಅರ್ಜುನ್‌ ಸರ್ಜಾ, ಪ್ರಿಯಾ ಆನಂದ್, ಮನ್ಸೂರ್‌ ಅಲಿ ಖಾನ್‌, ಗೌತಮ್​ ಮೆನನ್​, ಮಿಸ್ಕಿನ್​ ಮುಂತಾದವರು ಅಭಿನಯಿಸುತ್ತಿದ್ದಾರೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್