ಬೆಂಗ್ಳೂರಿನ ಮೂರು ಕಡೆ ಮಾದಕ ವಸ್ತು ಫ್ಯಾಕ್ಟರಿ ಪತ್ತೆ ಕೇಸ್ – ಮೂವರು ಪೊಲೀಸ್ ಇನ್ಸ್‌ಪೆಕ್ಟರ್‌ ಸಸ್ಪೆಂಡ್

2 Min Read

ಬೆಂಗಳೂರು: ನಗರದಲ್ಲಿ ಮಹಾರಾಷ್ಟ್ರ ಪೊಲೀಸರಿಂದ (Maharashtra Police) ಡ್ರಗ್ಸ್ ಫ್ಯಾಕ್ಟರಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ಅಮಾನತು ಮಾಡಲಾಗಿದೆ.

ಈ ಕುರಿತು ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್ (Seemant Kumar Singh) ಅವರು, ಕೊತ್ತನೂರು, ಬಾಗಲೂರು, ಅವಲಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ಅಮಾನತು ಮಾಡಿ, ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ನಾಯಿ ಕಚ್ಚಿದ್ದ ಎಮ್ಮೆಯ ಹಾಲು ಬಳಸಿ `ರಾಯ್ತಾ’ ತಯಾರಿ – ಸೇವಿಸಿದ್ದ 200 ಜನಕ್ಕೆ ರೇಬೀಸ್ ಲಸಿಕೆ

ಇತ್ತೀಚಿಗೆ ಮಹಾರಾಷ್ಟ್ರ ಎಎನ್‌ಟಿಎಫ್‌ನಿಂದ ಬೆಂಗಳೂರಲ್ಲಿ ಮೂರು ಡ್ರಗ್ಸ್ ಫ್ಯಾಕ್ಟರಿ ಸೀಜ್ ಮಾಡಿ, ಬರೋಬ್ಬರಿ 55.88 ಕೋಟಿ ರೂ. ಮೌಲ್ಯದ ಎಂಡಿ ಸಿಂಥೆಟಿಕ್ ಡ್ರಗ್ಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಇದೇ ವೇಳೆ ನಾಲ್ವರು ಆರೋಪಿಗಳನ್ನು ಕೂಡ ಅರೆಸ್ಟ್ ಮಾಡಿದ್ದರು.

ಮುಂಬೈನಲ್ಲಿ ಇತ್ತೀಚೆಗೆ 1.5 ಕೋಟಿ ರೂ. ಮೌಲ್ಯದ ಡ್ರಗ್ಸ ಸೀಜ್ ಆಗಿತ್ತು. ಅಲ್ಲಿ ಅಬ್ದುಲ್ಲ ಖಾದರ್ ಶೇಕ್ ಎಂಬಾತನ ಬಂಧನವಾಗಿತ್ತು. ವಿಚಾರಣೆ ನಂತರ ಬೆಳಗಾವಿಯ ಪ್ರಶಾಂತ್ ಯಲ್ಲಪ್ಪ ಪಾಟೀಲ್ ಬಂಧಿಸಲಾಗಿತ್ತು. ಪಾಟೀಲ್ ಮಾಹಿತಿ ಮೇರೆಗೆ ಬೆಂಗಳೂರಿನ ಮೂರು ಕಡೆ ದಾಳಿ ನಡೆಸಲಾಗಿತ್ತು. ಈ ವೇಳೆ ರಾಜಸ್ಥಾನದ ಸೂರಜ್ ರಮೇಶ್ ಯಾದವ್ ಮತ್ತು ಮಲ್ಖಾನ್ ರಾಮಲಾಲ್ ಬಿಷ್ಣೋಯ್ ಬಂಧನವಾಗಿದೆ.

ಆರ್‌ಜೆ ಇವೆಂಟ್ ಹೆಸರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿರುವುದು ಪತ್ತೆಯಾಗಿದೆ. ಹೊರಮಾವು, ಯರಪ್ಪನಹಳ್ಳಿ, ಕಣ್ಣೂರು ಬಳಿ ಡ್ರಗ್ಸ್ ಫ್ಯಾಕ್ಟರಿ ಪತ್ತೆಹಚ್ಚಲಾಗಿದೆ. ದಾಳಿಗಳ ವೇಳೆ 4.1 ಕೆಜಿ ಘನ ಎಂಡಿ ಮತ್ತು 17 ಕೆಜಿ ದ್ರವ ಎಂಡಿ ಸೇರಿದಂತೆ ಒಟ್ಟು 21.4 ಕೆಜಿ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಡ್ರಗ್ಸ್ ತಯಾರಿಸುವ ಯಂತ್ರೋಪಕರಣಗಳು ಮತ್ತು ರಾಸಾಯನಿಕ ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಫ್ಯಾಕ್ಟರಿಗಳಿಂದ ದೇಶದ ಅನೇಕ ರಾಜ್ಯಗಳಿಗೆ ಡ್ರಗ್ಸ್ ಸಪ್ಲೈ ಆಗುತ್ತಿದ್ದ ಶಂಕೆ ವ್ಯಕ್ತವಾಗಿದೆ. ಸದ್ಯ ಬಂಧಿತರನ್ನ ಮಹಾರಾಷ್ಟ್ರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಡಿ.25, 26 ರಂದು ಮಹಾರಾಷ್ಟ್ರ ಎಎನ್‌ಟಿಎಫ್ ಕಾರ್ಯಾಚರಣೆ ನಡೆಸಿತ್ತು. ರಾಜಸ್ಥಾನ ಮೂಲದ ಕಿಂಗ್‌ಪಿನ್‌ಗಳಿಂದ ಡ್ರಗ್ಸ್ ಫ್ಯಾಕ್ಟರಿ ನಡೆಯುತ್ತಿತ್ತು. ಇಬ್ಬರು ಬೆಂಗಳೂರಿನ ಮೂರು ಕಡೆ ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿದ್ದರು. ಯೋಗಿರಾಜ್ ಕುಮಾರ್, ನಯನ್ ಪವರ್ ಇಡೀ ದಂಧೆಯ ಕಿಂಗ್‌ಪಿನ್‌ಗಳು. ಮೂಲತಃ ರಾಜಸ್ಥಾನದ ಇಬ್ಬರು ಡ್ರಗ್ಸ್ ಬ್ಯುಸಿನೆಸ್‌ಮೆನ್‌ಗಳು. ದೇಶದ ಅನೇಕ ಕಡೆ ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿದ್ದಾರೆ. ಸದ್ಯ ನಾಲ್ವರನ್ನ ಬಂಧಿಸಿ ಕಿಂಗ್‌ಪಿನ್‌ಗಳಿಗೆ ಹುಡುಕಾಟ ನಡೆಸಲಾಗಿದೆ.ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಚಿಕ್ಕಮಗಳೂರಿಗೆ ಪ್ರವಾಸಿಗರ ದಂಡು – 22 ಪ್ರವಾಸಿ ತಾಣಗಳಿಗೆ ತಾತ್ಕಾಲಿಕ ನಿರ್ಬಂಧ

Share This Article