ನನ್ನ ಹೆಸರು ಕೆಡಿಸಿದ್ದಕ್ಕೆ ಬರಗಾಲ ಬಂದಿದೆ: ರಮೇಶ್ ಜಾರಕಿಹೊಳಿ

Public TV
2 Min Read

– ಡಿಕೆಶಿ ಸಿಡಿ ಫ್ಯಾಕ್ಟರಿ ಬಂದ್ ಆಗಬೇಕು ಅಂದ್ರೆ ಸಿಬಿಐಗೆ ವಹಿಸಬೇಕು

ಬೆಳಗಾವಿ: ನಾನು 4 ವರ್ಷಗಳಿಂದ ಅಪಮಾನ ಸಹಿಸಿಕೊಂಡಿದ್ದೇನೆ. ಪದೇ ಪದೇ ನನ್ನ ಹೆಸರು ಕೆಡಿಸಿದ್ದಕ್ಕೆ ಇದೀಗ ರಾಜ್ಯದಲ್ಲಿ ಬರಗಾಲ ಬಂದಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಹೇಳಿಕೆ ನೀಡಿದ್ದಾರೆ.

ಬೆಳಗಾವಿ (Belagavi) ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಮೇಶ್ ಜಾರಕಿಹೊಳಿ, ಸಿಡಿ ಕೇಸ್‌ನಲ್ಲಿ (CD Case) ಡಿಕೆ ಶಿವಕುಮಾರ್ (DK Shivakumar) ಕಾರ್ ಚಾಲಕ ಪರಶಿವಮೂರ್ತಿಯನ್ನು ಯಾಕೆ ವಿಚಾರಣೆಗೆ ಒಳಪಡಿಲ್ಲ? ಬಿಜೆಪಿ ಸರ್ಕಾರ ಇದ್ದಾಗ ಯಾಕೆ ವಿಚಾರಣೆ ಮಾಡಲಿಲ್ಲ? ಅಲ್ಲೇ ಇರೋದು ಟ್ವಿಸ್ಟ್. ನನ್ನ ಮಾತಿನಿಂದ ಬಿಜೆಪಿಗೆ ಮುಜುಗರ ಆಗೋದು ಬೇಡ ಎನ್ನುವ ಮೂಲಕ ಪರೋಕ್ಷವಾಗಿ ಬಿಜೆಪಿ ನಾಯಕರು ಸಿಡಿ ಕೇಸ್‌ನಲ್ಲಿ ಇದ್ದಾರೆ ಎಂದು ಜಾರಕಿಹೊಳಿ ತಿಳಿಸಿದ್ದಾರೆ.

ನಾನು 4 ವರ್ಷಗಳಿಂದ ಅಪಮಾನ ಸಹಿಸಿಕೊಂಡಿದ್ದೇನೆ. ನಾನು ದಾಖಲೆ ಕೊಡದೇ ಇದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಡಿಕೆಶಿ ಅಂತ್ಯವಾದ್ರೆ ರಾಜಕಾರಣದಲ್ಲಿ ಒಳ್ಳೆಯದು. ಡಿಕೆಶಿ ಸಿಡಿ ಫ್ಯಾಕ್ಟರಿ ಬಂದ್ ಆಗಬೇಕು ಅಂದ್ರೆ ಸಿಬಿಐಗೆ ವಹಿಸಬೇಕು. ಹೈಕೋರ್ಟ್ ಇಲ್ಲ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇನೆ. ಡಿಕೆಶಿ ಬಹಳ ವೀಕ್ ಮನುಷ್ಯ, ಕೇವಲ ಬ್ಲ್ಯಾಕ್‌ಮೇಲ್ ಮಾಡುವುದೇ ಅವನ ಕೆಲಸ. ಇಲ್ಲವಾದರೆ ಮುಂದೆ ಅವರ ಶಾಸಕರಿಗೂ ತೊಂದರೆ ಇದೆ ಎಂದು ಎಚ್ಚರಿಕೆ ನೀಡಿದರು.

ತಮ್ಮ ಮನೆಗೆ ಪೋಸ್ಟರ್ ಅಂಟಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಡಿಸಿಎಂ ತಮ್ಮ ಗೂಂಡಾಗಳನ್ನು ಕಳಿಸಿ ಮನೆಗೆ ಪೋಸ್ಟರ್ ಅಂಟಿಸಿದ್ದಾರೆ. ಅವರು ಕಾಂಗ್ರೆಸ್ ಕಾರ್ಯಕರ್ತರು ಅಲ್ಲ. ಡಿಕೆಶಿ ಗೂಂಡಾಗಳು ರಾಜಕಾರಣದಲ್ಲಿ ಇದೇನೂ ಹೊಸದಲ್ಲ. ಇದು ಸಾಮಾನ್ಯ ನಡೆಯುತ್ತದೆ. ಸಿಡಿ ಕೇಸ್‌ನಲ್ಲಿ ಡಿಕೆಶಿ ನನಗೆ ಅಪಮಾನ ಮಾಡಿದ್ದಾರೆ. ಆಗ ನಾನು ಏನು ಬೇಕಾದರೂ ಮಾಡಬಹುದಿತ್ತು, ಮಾಡಲಿಲ್ಲ. ಈಗಲೂ ಅವರನ್ನು ಎದುರಿಸುವ ಸಾಮರ್ಥ್ಯ ಇದೆ. ಆದರೆ ಡಿಕೆಶಿ ತನ್ನ ಚಾಳಿ ಬಿಡ್ತಿಲ್ಲ ಎಂದು ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಡಿಕೆಶಿ ಮಾಜಿ ಸಚಿವ ಆಗೋದಿಲ್ಲ, ಸಿಎಂ ಆಗುತ್ತಾರೆ: ಶಿವಗಂಗಾ ಬಸವರಾಜ್

ನನ್ನ ಮನೆಗೆ ಪೋಸ್ಟರ್ ಅಂಟಿಸಿದಕ್ಕೆ ಗೋಕಾಕ್ ಠಾಣೆಯಲ್ಲಿ ದೂರು ನೀಡಿದ್ದೇನೆ. ನಾನು ನಿನ್ನೆ ಸುದ್ದಿಗೋಷ್ಠಿಯಲ್ಲಿ ಸಾಮಾನ್ಯ ವಿಚಾರ ಮಾತನಾಡಿದ್ದೆ. ನನ್ನ ಸಿಡಿ ಕೇಸ್ ಸಿಬಿಐಗೆ ಕಳುಹಿಸಲು ಸಿಎಂಗೆ ಪತ್ರ ಬರೆದಿರುವೆ. ಅಲ್ಲದೇ ತ್ವರಿತವಾಗಿ ಕ್ರಮ ವಹಿಸುವಂತೆ ಇಮೇಲ್ ಮಾಡಿದ್ದೇನೆ. ಸಿಡಿ ಕೇಸ್‌ನಲ್ಲಿ ಡಿಕೆಶಿ, ವಿಷಕನ್ಯೆ ಹಾಗೂ ಮತ್ತೊಬ್ಬರು ಸೇರಿದ್ದಾರೆ. ಆ ಸಂಬಂಧ ನನ್ನ ಬಳಿ ದಾಖಲೆಗಳಿವೆ. ಅದನ್ನು ಸಿಬಿಐಗೆ ಸಲ್ಲಿಸುವೆ. ರಮೇಶ್‌ರನ್ನು ಮುಗಿಸುತ್ತೇನೆಂದು ಡಿಕೆಶಿ ಮಾತನಾಡಿದ ಆಡಿಯೋ ಇದೆ. ಸಿಡಿ ಫ್ಯಾಕ್ಟರಿ ಬಂದ್ ಆಗಬೇಕಾದರೆ ಡಿಕೆಶಿ ವಿರುದ್ಧ ಸಿಬಿಐ ತನಿಖೆ ಆಗಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಇನ್ನು ಮುಂದೆ ಶಾಸಕರು, ಮಂತ್ರಿಗಳು ಪಕ್ಷ ವಿರೋಧಿ ಹೇಳಿಕೆ ಕೊಡಬಾರದು: ಕೋಳಿವಾಡ ಎಚ್ಚರಿಕೆ

Web Stories 

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್