Bigg Boss: ಟೀಕೆ, ಟ್ರೋಲ್‌ಗಳ ಬಗ್ಗೆ ಮೌನ ಮುರಿದ ಡ್ರೋನ್ ಪ್ರತಾಪ್

By
1 Min Read

ಯುವ ವಿಜ್ಞಾನಿ ಎಂದೇ ಹೈಲೆಟ್ ಆಗಿದ್ದ ಡ್ರೋನ್ ಪ್ರತಾಪ್ (Drone Prathap) ಅವರು ದೊಡ್ಮನೆ ಆಟಕ್ಕೆ ಕಾಲಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿನ ಟೀಕೆ, ಟ್ರೋಲ್‌ಗಳ ಬಗ್ಗೆ ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿ (Bigg Boss Kannada) ಮೌನ ಮುರಿದಿದ್ದಾರೆ.

ಲಾಕ್‌ಡೌನ್ ಸಮಯದಲ್ಲಿ ಡ್ರೋನ್ ಪ್ರತಾಪ್ ಬಗ್ಗೆ ಸಾಕಷ್ಟು ಟೀಕೆ, ಟ್ರೋಲ್ ಮತ್ತು ಅವಮಾನಗಳನ್ನ ಎದುರಿಸಿದ್ದರು. ಇದರ ಪ್ರತಾಪ್ ಈಗ ರಿಯಾಕ್ಟ್ ಮಾಡಿದ್ದಾರೆ. ನಟಿ ಸಂಗೀತಾ, ಅಂದು ಅಷ್ಟೆಲ್ಲಾ ಟೀಕೆ ಅನುಭವಿಸಿದ್ರಲ್ಲಾ? ನಿಮ್ಮ ಫಸ್ಟ್ ರಿಯಾಕ್ಷನ್ ಹೇಗಿತ್ತು ಎಂದು ಕೇಳಿದ್ದಾರೆ.

ಫಸ್ಟ್ ಬೇಜರಾಯ್ತು, ಆಮೇಲೆ ಅವಾಯ್ಡ್ ಮಾಡಲು ಶುರು ಮಾಡಿದೆ. ನನಗೂ ನಗು ಬರಲು ಶುರುವಾಯ್ತು. ಕೆಲವೊಂದು ಸಲ ನಾನು ಅಂದುಕೊಂಡಿರೋ ಕೆಲಸವಾಗುತ್ತಿಲ್ಲ ಎಂದು ಬೇಸರ ಆಯ್ತು. ಡ್ರೋನ್‌ಗೆ ಸಂಬಂಧಪಟ್ಟ ಇನ್‌ವೆಸ್ಟ್‌ಮೆಂಟ್ ಆಗಲಿ ಎನು ಆಗುತ್ತಾ ಇಲ್ಲ ಎಂದು ಬೇಜರಾಯ್ತು. ಇದನ್ನೂ ಓದಿ:ವರುಣ್- ವರ್ಷ ಕಾವೇರಿ ಬ್ರೇಕಪ್ ಬಗ್ಗೆ ಸೋನು ಗೌಡ ಪ್ರತಿಕ್ರಿಯೆ

ಅಂದು ಆ ರೀತಿ ಟೀಕೆ ಆಗಿದ್ದು ಒಳ್ಳೆಯದಾಯ್ತು. ಈಗ ಸ್ಟಾರ್ಟ್‌ ಅಪ್ ಮಾಡಿದ್ದೀನಿ ಎಂದು ಪ್ರತಾಪ್ ಮಾತನಾಡಿದ್ದಾರೆ. ಫಸ್ಟ್ ಡ್ರೋನ್ ಎಲ್ಲಿ ಅಂತಾ ಎಲ್ಲಾ ಕೇಳುತ್ತಿದ್ದರು. ಈಗ ಪರ್ಮಿಷನ್ ಎಲ್ಲಿ ಅಂತಾ ಕೇಳ್ತಿದ್ದಾರೆ. ಅದು ಸಿಕ್ಕ ಮೇಲೆ ಮತ್ತೊಂದು ಕೇಳುತ್ತಾರೆ. ನನ್ನ ಮೇಲೆ ಆರೋಪ ಇರೋದೇ ಡ್ರೋನ್ ಮಾಡಿದ್ದಾರಾ? ಇಲ್ವಾ ಅಂತಾ? ನನ್ನ ನಂಬಿ ಅಂತಾ ಹೇಳೋದಿಲ್ಲ. ನನ್ನ ಕೆಲಸ ನಾನು ಮುಂದುವರೆಸುತ್ತೇನೆ. ನೀವು ಲೀಗಲಿ ಚಾಲೆಂಜ್ ಮಾಡುತ್ತೀರಾ? ನಾನು ಎದುರಿಸುತ್ತೇನೆ. ಸಮಾಜದಲ್ಲಿ ಎಷ್ಟು ಜನ ಈ ರೀತಿಯ ಅಟ್ಯಾಕ್ ಎದುರಿಸುತ್ತಾರೆ ಎಂದು ಮನೆ ಮಂದಿಯ ಮುಂದೆ ಪ್ರತಾಪ್ ಭಾವುಕರಾಗಿದ್ದಾರೆ.

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್