ಬಿಗ್ ಬಾಸ್ ಮನೆಯಿಂದ ಡ್ರೋನ್ ಪ್ರತಾಪ್ ಔಟ್?

Public TV
1 Min Read

ದೊಡ್ಮನೆ ಆಟದ ಪರದೆ ಎಳೆಯಲು ಕ್ಷಣಗಣನೆ ಶುರುವಾಗಿದೆ. ಬಿಗ್ ಬಾಸ್ ಫಿನಾಲೆಗೆ (Bigg Boss Kannada 10) ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಇದೀಗ ಬಿಗ್ ಬಾಸ್ ಶೋನಿಂದ ಡ್ರೋನ್ ಪ್ರತಾಪ್ (Drone Prathap)  ಔಟ್ ಆಗಿದ್ದಾರೆ ಎನ್ನಲಾಗುತ್ತಿದೆ.

ಬಿಗ್ ಬಾಸ್‌ಗೆ ಕಾಲಿಡುವ ಮುನ್ನ ಡ್ರೋನ್ ಪ್ರತಾಪ್ ಸಾಕಷ್ಟು ಕಾಂಟ್ರವರ್ಸಿ, ಟ್ರೋಲ್‌ಗೆ ಗುರಿಯಾಗಿದ್ದರು. ಸಾಕಷ್ಟು ನಿಂದನೆಗೆ ಪ್ರತಾಪ್ ಒಳಗಾಗಿದ್ದರು. ಆದರೆ ಈಗ ಬಿಗ್ ಬಾಸ್ ಮನೆಯಲ್ಲಿ ಘಟಾನುಘಟಿ ಸ್ಪರ್ಧಿಗಳ ನಡುವೆ ಫಿನಾಲೆಗೆ ಹೋಗುವ ಮೂಲಕ ಠಕ್ಕರ್ ಕೊಟ್ಟಿದ್ದರು. ಇದನ್ನೂ ಓದಿ:ತನ್ನ ಬಗ್ಗೆ ಮಹಿಳೆಯರಿಗಿರೋ ಅಭಿಪ್ರಾಯ ಕೇಳಿ ವಿನಯ್ ಗೌಡ ಶಾಕ್

ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರೋ ಮಾಹಿತಿ ಪ್ರಕಾರ, ಡ್ರೋನ್ ಪ್ರತಾಪ್ ಆಟಕ್ಕೆ ಬಿಗ್ ಬಾಸ್ (Bigg Boss Kannada 10) ಬ್ರೇಕ್ ಹಾಕಿದ್ದಾರೆ ಎನ್ನಲಾಗುತ್ತಿದೆ. ಟಾಪ್ 2ನಲ್ಲಿ ಸಂಗೀತಾ, ಕಾರ್ತಿಕ್ ಇದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜನಾ ಎಂಬುದನ್ನು ಬಿಗ್ ಬಾಸ್ ಫಿನಾಲೆ ಎಪಿಸೋಡ್ ಪ್ರಸಾರವಾಗುವವರೆಗೂ ಕಾಯಬೇಕಿದೆ.

ಸದ್ಯ ಪ್ರತಾಪ್ ದೊಡ್ಮನೆ ಆಟದಿಂದ ಔಟ್ ಆಗಿದ್ದಾರೆ ಎಂಬ ಸುದ್ದಿ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ.

Share This Article