ಮಾದಪ್ಪನ ದರ್ಶನ ಪಡೆದ ಡ್ರೋನ್ ಪ್ರತಾಪ್

Public TV
1 Min Read

ಬಿಗ್ ಬಾಸ್ ಮನೆಯಿಂದ ಬಂದ ನಂತರ ಡ್ರೋನ್ ಪ್ರತಾಪ್ (Drone Pratap) ಬಿಡುವಿಲ್ಲದ ದಿನಗಳನ್ನು ಕಳೆಯುತ್ತಿದ್ದಾರೆ. ಮನೆಯಿಂದ ಹೊರ ಬರುತ್ತಿದ್ದಂತೆಯೇ ಮತ್ತೊಂದು ರಿಯಾಲಿಟಿ ಶೋ ನಲ್ಲಿ ಭಾಗಿಯಾದರು. ಇದೀಗ ಕೊಂಚ ಬಿಡುವು ಮಾಡಿಕೊಂಡು ಹುಟ್ಟೂರಿಗೆ ಹೋಗಿದ್ದಾರೆ. ಜೊತೆಗೆ ದೇವಸ್ಥಾನಗಳಿಗೂ ಭೇಟಿ ನೀಡುತ್ತಿದ್ದಾರೆ.

ಮೂರ್ನಾಲ್ಕು ವರ್ಷಗಳಿಂದ ಹುಟ್ಟೂರಿಗೆ ಹೋಗಿಲ್ಲ ಎಂದು ಅವರು ಈ ಹಿಂದೆ ಹೇಳಿಕೊಂಡಿದ್ದರು. ತಂದೆ ತಾಯಿ ಮುಖವನ್ನೂ ನೋಡಿಲ್ಲ ಎಂದರು. ಅದಕ್ಕೆ ಕಾರಣ ಅಪಮಾನ. ಬಿಗ್ ಬಾಸ್ ಮನೆ ಎಲ್ಲ ಅಪಮಾನವನ್ನೂ ತೊಳೆದು ಹಾಕಿದೆ. ಹೀಗಾಗಿಯೇ ಅವರು ಹುಟ್ಟೂರಿಗೆ ಹೋಗಿದ್ದಾರೆ. ತಂದೆ ಮಾಡಿಕೊಟ್ಟ ಮುದ್ದೆಯನ್ನು ಸವಿದಿದ್ದಾರೆ.

ನಿನ್ನೆಯಷ್ಟೇ ಮಲೆ ಮಹಾದೇಶ್ವರ (Male Mahadeshwar) ಬೆಟ್ಟಕ್ಕೂ ಡ್ರೋನ್ ಪ್ರತಾಪ್ ಭೇಟಿ ನೀಡಿದ್ದು, ಮಾದಪ್ಪನ ದರ್ಶನ (Darshana) ಪಡೆದಿದ್ದಾರೆ. ಡ್ರೋನ್ ನೋಡಲೆಂದೇ ಸಾಕಷ್ಟು ಅಭಿಮಾನಿಗಳು ಅಲ್ಲಿಗೆ ಬಂದಿದ್ದರು. ಪ್ರತಾಪ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿ ಬಿದ್ದಿದ್ದಾರೆ. ಶಾಂತವಾಗಿಯೇ ಎಲ್ಲರೊಂದಿಗೂ ಪ್ರತಾಪ್ ಫೋಟೋ ತೆಗೆಸಿಕೊಂಡಿದ್ದಾರೆ.

 

ಡ್ರೋನ್ ಬದುಕು ಒಂದು ರೀತಿಯಲ್ಲಿ ಕತ್ತಲಲ್ಲಿತ್ತು. ಇದೀಗ ಬೆಳಕಿಗೆ ಬಂದಿದೆ. ಅಸಂಖ್ಯಾತ ಜನರು ಅವರನ್ನು ಪ್ರೀತಿಸುತ್ತಿದ್ದಾರೆ. ಪ್ರತಾಪ್ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದ್ದಾರೆ. ಡ್ರೋನ್ ಪ್ರತಾಪ್ ಈ ಕಾರಣದಿಂದಾಗಿಯೇ ಎಲ್ಲರ ಮೆಚ್ಚಿಗೆಗೂ ಪಾತ್ರವಾಗಿದ್ದಾರೆ.

Share This Article