ಭಾರೀ ಸರಕು ವಾಹನ ಪರವಾನಗಿಯುಳ್ಳ ಚಾಲಕರು ಪ್ರಯಾಣಿಕ ವಾಹನ ಚಾಲನೆ ಮಾಡಲು ಅರ್ಹರು: ಕಾಶ್ಮೀರ ಹೈಕೋರ್ಟ್

Public TV
3 Min Read

ಶ್ರೀನಗರ: ಭಾರೀ ಸರಕು ವಾಹನ (Heavy Goods Vehicle) ಮತ್ತು ಪ್ರಯಾಣಿಕ ವಾಹನ ಎರಡನ್ನೂ 1994ರ ಕಾಯಿದೆಗೆ ತಿದ್ದುಪಡಿ ತಂದು ಸಾರಿಗೆ ವಾಹನ ಎಂಬ ಏಕೀಕೃತ ವರ್ಗದ ಅಡಿಯಲ್ಲಿ ತಂದಿರುವ ಹಿನ್ನೆಲೆಯಲ್ಲಿ ಭಾರೀ ಸರಕು ವಾಹನ ಚಲಾಯಿಸಲು ಪರವಾನಗಿ ಹೊಂದಿರುವ ಚಾಲಕ ಪ್ರಯಾಣಿಕ ಸೇವಾ ವಾಹನ (Passenger Service Vehicle) ಚಲಾಯಿಸಲು ಕಾನೂನುಬದ್ಧವಾಗಿ ಸಮರ್ಥರು ಎಂದು ಜಮ್ಮು, ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ (High Court of Jammu and Kashmir and Ladakh) ತೀರ್ಪು ನೀಡಿದೆ.

ಮೋಟಾರು ವಾಹನ ಕಾಯಿದೆಯ ಸೆಕ್ಷನ್ 10(2)(ಇ) ಅಡಿಯ ವರ್ಗೀಕರಣದ ಪ್ರಕಾರ ಎಲ್ಲಾ ರೀತಿಯ ವಾಣಿಜ್ಯ ವಾಹನಗಳಿಗೆ ಪ್ರತ್ಯೇಕ ಪರವಾನಗಿ ನೀಡುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿ ಮೊಹಮ್ಮದ್ ಯೂಸುಫ್ ವಾನಿ ತಿಳಿಸಿದರು. ಶಾಸಕಾಂಗವು 1994ರಲ್ಲಿ ತಿದ್ದುಪಡಿಯ ಮೂಲಕ ಉಪ-ವರ್ಗೀಕರಣ ತೆಗೆದುಹಾಕಿದ್ದು, ಭಾರೀ ಸರಕು ಮತ್ತು ಪ್ರಯಾಣಿಕ ವರ್ಗಗಳೆರಡಕ್ಕೂ ಸಾರಿಗೆ ವಾಹನದ ಪರವಾನಗಿ ಸಾಕಾಗುತ್ತದೆ ಎಂದು ಆದೇಶಿಸಿದೆ ಎಂಬುದಾಗಿ ನ್ಯಾಯಾಲಯ ಹೇಳಿತು. ಇದನ್ನೂ ಓದಿ: ಬಾಂಗ್ಲಾದೇಶದ ವಾಯುಪಡೆಯ ತರಬೇತಿ ವಿಮಾನ ದುರಂತ – ಪೈಲಟ್ ಸೇರಿ 16 ಜನ ಸಾವು

ಚಾಲನಾ ಪರವಾನಗಿ ಹೊಂದಿರುವ ಯಾವುದೇ ವ್ಯಕ್ತಿ ನಿರ್ದಿಷ್ಟ ರೀತಿಯ ವಾಣಿಜ್ಯ ವಾಹನವನ್ನು ಓಡಿಸಲು ಅಧಿಕಾರ ಪಡೆದರೆ, ಅಂತಹವರು ಯಾವುದೇ ರೀತಿಯ ವಾಣಿಜ್ಯ ವಾಹನ ಓಡಿಸಲು ಸ್ವಯಂಚಾಲಿತವಾಗಿ ಅರ್ಹರಾಗಿರುತ್ತಾರೆ. ಅಂದರೆ, ಭಾರೀ ಸರಕು ವಾಹನ ಓಡಿಸಲು ಚಾಲನಾ ಪರವಾನಗಿ ಹೊಂದಿರುವ ಚಾಲಕ ಪ್ರಯಾಣಿಕರನ್ನು ಸಾಗಿಸುವ ವಾಹನ ಓಡಿಸಲು ಸಮರ್ಥ ಎಂದು ಹೈಕೋರ್ಟ್ ಹೇಳಿದೆ. ಇದನ್ನೂ ಓದಿ: ಕೇರಳದ ಮಾಜಿ ಸಿಎಂ, CPI(M) ನಾಯಕ ಅಚ್ಯುತಾನಂದನ್ ನಿಧನ

ಫೆಬ್ರವರಿ 6, 2014ರಂದು ಮೋಟಾರ್ ಅಪಘಾತ ಹಕ್ಕುಗಳ ನ್ಯಾಯಮಂಡಳಿ (ಎಂಎಸಿಟಿ) ನೀಡಿದ್ದ ತೀರ್ಪನ್ನು ಪ್ರಶ್ನಿಸಿ ನ್ಯಾಷನಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಇದನ್ನೂ ಓದಿ: ನಂಗೆ ಯಾರೂ ಬಾಯ್‌ಫ್ರೆಂಡ್ ಇಲ್ಲ, 4 ತಿಂಗಳು ನನ್ನ ಫೋನ್ ಪ್ರತೀಕ್ ಚೌಹಾಣ್ ಬಳಿ ಇತ್ತು: ಸಂತ್ರಸ್ತೆ

ನಿಯಮ ಉಲ್ಲಂಘಿಸಿದ ಚಾಲಕ ಸುಭಾಷ್ ಚಂದರ್ ‘ಭಾರೀ ಸರಕು ವಾಹನ’ ಮಾತ್ರ ಓಡಿಸಲು ಪರವಾನಗಿಯನ್ನು ಹೊಂದಿದ್ದು, ಪ್ರಯಾಣಿಕ ವಾಹನವನ್ನು ಓಡಿಸಲು ಅಗತ್ಯವಿರುವ ಪ್ರಯಾಣಿಕ ಸೇವಾ ವಾಹನ (ಪಿಎಸ್‌ವಿ) ಪರವಾನಗಿ ಹೊಂದಿಲ್ಲ ಎಂಬ ಕಾರಣಕ್ಕೆ ವಿಮಾದಾರರು ಮಂಡಳಿಯ ತೀರ್ಪು ಪ್ರಶ್ನಿಸಿದ್ದರು. ಅಲ್ಲದೇ ವಿಮಾ ಕಂಪನಿಯು 7.5% ಬಡ್ಡಿದರವು ಅತಿಯಾದದ್ದು ಎಂದು ಕೂಡ ವಾದಿಸಿತ್ತು. ಇದನ್ನೂ ಓದಿ: 2 ತಿಂಗಳಲ್ಲಿ ಮತ್ತೆ ನನ್ನನ್ನ ಬಿಜೆಪಿಗೆ ಸೇರಿಸಿಕೊಳ್ತಾರೆ: ಯತ್ನಾಳ್

ಆದರೆ ಕಾಯಿದೆಗೆ ತಿದ್ದುಪಡಿ ತಂದ ನಂತರ ಸಾರಿಗೆ ವರ್ಗದ ಅಡಿಯಲ್ಲಿ ನೀಡಲಾದ ಪರವಾನಗಿ ಸರಕು ಮತ್ತು ಪ್ರಯಾಣಿಕರನ್ನು ಸಾಗಿಸುವ ವಾಣಿಜ್ಯ ವಾಹನಗಳನ್ನು ಓಡಿಸಲು ಪರವಾನಗಿದಾರರಿಗೆ ಅಧಿಕಾರ ನೀಡುತ್ತದೆ ಎಂದು ಪೀಠ ಹೇಳಿದೆ. ಜೊತೆಗೆ ಬಶೀರ್ ಅಹ್ಮದ್ ಚೋಪನ್ ಪ್ರಕರಣದ ಮೇಲಿನ ಮೇಲ್ಮನವಿದಾರರ ಅವಲಂಬನೆಯನ್ನು ಹೈಕೋರ್ಟ್ ತಿರಸ್ಕರಿಸಿತು. ಇದನ್ನೂ ಓದಿ: ಜು.23, 24 ರಂದು ಹಾಲು, ಸಿಗರೇಟ್ ಮಾರಾಟ ಬಂದ್

ಅತಿಯಾದ ಬಡ್ಡಿಯ ಕುರಿತಂತೆ ಕಂಪೆನಿಯ ವಾದ ಒಪ್ಪದ ನ್ಯಾಯಾಲಯ, ನಿರ್ದಿಷ್ಟ ಸಂದರ್ಭದಲ್ಲಿ ಎಂಎಸಿಟಿ ವಾರ್ಷಿಕ 7.5% ಬಡ್ಡಿ ವಿಧಿಸಿರುವುದು ಅಸಮಂಜಸ ಅಥವಾ ಅನಿಯಂತ್ರಿತವೆಂದು ತೋರುತ್ತಿಲ್ಲ ಎಂದಿತು. ಅದರಂತೆ, ಮೇಲ್ಮನವಿಯಲ್ಲಿ ಹುರುಳಿಲ್ಲ ಎಂದು ಪರಿಗಣಿಸಿದ ಅದು ಅರ್ಜಿ ವಜಾಗೊಳಿಸಿತು. ಇದನ್ನೂ ಓದಿ: ಯುಎಇ ಅಪಾರ್ಟ್‌ಮೆಂಟ್‌ನಲ್ಲಿ ಕೇರಳದ ಮಹಿಳೆ ಶವವಾಗಿ ಪತ್ತೆ – ವರದಕ್ಷಿಣೆ ಕಿರುಕುಳ ಆರೋಪ

ಮಾರ್ಚ್ 26, 2014ರಂದು ನೀಡಿದ ಮಧ್ಯಂತರ ಆದೇಶದ ಪ್ರಕಾರ ವಿಮಾ ಕಂಪನಿ ಈಗಾಗಲೇ ಠೇವಣಿ ಇಟ್ಟಿರುವ ಪರಿಹಾರದ ಮೊತ್ತವನ್ನು ಎಂಎಸಿಟಿ ನೀಡಿರುವ ತೀರ್ಪಿನಂತೆ ಹಕ್ಕುದಾರರಿಗೆ ಬಿಡುಗಡೆ ಮಾಡಬೇಕೆಂದು ನ್ಯಾಯಾಲಯ ಆದೇಶಿಸಿತು. ಇದನ್ನೂ ಓದಿ: ಜಮ್ಮು ಕಾಶ್ಮೀರದ ಪೇದೆಗೆ ಕಸ್ಟಡಿಯಲ್ಲಿ ಚಿತ್ರಹಿಂಸೆ – ಸಿಬಿಐ ತನಿಖೆಗೆ ಆದೇಶಿಸಿದ ಸುಪ್ರೀಂ ಕೋರ್ಟ್

Share This Article