ಆಟೋದಲ್ಲಿ ಬಿಟ್ಟು ಹೋಗಿದ್ದ 4 ಲಕ್ಷ ಮೌಲ್ಯದ ಚಿನ್ನಾಭರಣ ಮರಳಿಸಿ ಪ್ರಾಮಾಣಿಕತೆ ಮೆರೆದ ಚಾಲಕ

Public TV
1 Min Read

ತುಮಕೂರು: ಆಟೋದಲ್ಲಿ ಬಿಟ್ಟು ಹೋಗಿದ್ದ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಪ್ರಯಾಣಿಕರಿಗೆ ಮರಳಿಸಿ ಆಟೋ ಚಾಲಕ ಪ್ರಾಮಾಣಿಕತೆ ಮೆರೆದ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ.

ತುಮಕೂರು ನಗರದ ಹನುಮಂತಪುರ ನಿವಾಸಿಯಾಗಿರುವ ಆಟೋ ಚಾಲಕ ರವಿಕುಮಾರ್, ಅರಸೀಕೆರೆ ಮೂಲದ ಗಾಯತ್ರಿ ಎಂಬವರಿಗೆ ಚಿನ್ನಾಭರಣ ಮರಳಿಸಿದ್ದಾರೆ.ಇದನ್ನೂ ಓದಿ: ಪುಣ್ಯಕ್ಷೇತ್ರಗಳ ನದಿ ತೀರದಲ್ಲಿ ಶಾಂಪೂ, ಸೋಪುಗಳ ಮಾರಾಟ ನಿಷೇಧ

ಕುಂದೂರು ಗ್ರಾಮದಲ್ಲಿ ಸಂಬಂಧಿಕರ ಮನೆಗೆ ಸೀಮಂತ ಕಾರ್ಯಕ್ಕಾಗಿ ಗಾಯತ್ರಿ ಬಂದಿದ್ದರು. ಕಾರ್ಯಕ್ರಮ ಮುಗಿಸಿ ಮೂರು ಜನ ಆಟೋದಲ್ಲಿ ಬಸ್ ನಿಲ್ದಾಣಕ್ಕೆ ತೆರಳಿದ್ದರು. ಬಸ್ ನಿಲ್ದಾಣದಲ್ಲಿ ಇಳಿಯುವಾಗ ಆಟೋದಲ್ಲಿ ಬ್ಯಾಗ್ ಮರೆತು ಬಿಟ್ಟು ಹೋಗಿದ್ದರು. ಬ್ಯಾಗ್ ಗಮನಿಸಿದ ಆಟೋ ಚಾಲಕ ರವಿಕುಮಾರ್ ಪ್ರಯಾಣಿಕರಿಗಾಗಿ ಹುಡುಕಾಡಿದ್ದರು. ಇನ್ನೊಂದು ಕಡೆ ಪ್ರಯಾಣಿಕರು ಆಟೋಗಾಗಿ ಹುಡುಕಾಡಿದ್ದರು.

ಬಳಿಕ ಆಟೋ ಸಿಗದೇ ಹೋದಾಗ ಪ್ರಯಾಣಿಕರು ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದರು. ಅದೇ ಸಮಯಕ್ಕೆ ಪ್ರಯಾಣಿಕರು ಸಿಗದ ಕಾರಣ ಆಟೋ ಚಾಲಕ ಬ್ಯಾಗ್ ಒಪ್ಪಿಸಲು ಠಾಣೆಗೆ ಬಂದಿದ್ದರು. ಪ್ರಯಾಣಕರನ್ನು ಖಚಿತಪಡಿಸಿಕೊಂಡ ಪೊಲೀಸರು ಬ್ಯಾಗ್‌ನ್ನು ಮರಳಿಸಿದ್ದಾರೆ. 4 ಲಕ್ಷ ರೂ. ಮೌಲ್ಯದ 52 ಗ್ರಾಂ ಚಿನ್ನಾಭರಣ ಮರಳಿ ಪಡೆದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ಆಟೋ ಚಾಲಕ ರವಿಕುಮಾರ್ ಪ್ರಾಮಾಣಿಕತೆಗೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದು, ತುಮಕೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ರನ್ಯಾ ರಾವ್ ಶೋಕಿಗೆ ಅಧಿಕಾರಿಗಳೇ ಶಾಕ್ – ನಟಿ ಬಳಿಯಿತ್ತು ಕೋಟಿ ಮೌಲ್ಯದ 39 ವಿದೇಶಿ ವಾಚ್‌ಗಳು

Share This Article