– ಆಟೋ ಚಾಲಕ, ಸಾಥ್ ಕೊಟ್ಟ ಗೆಳತಿ ಅರೆಸ್ಟ್ – ಮತ್ತಿಬ್ಬರು ನಾಪತ್ತೆ
ಚಿಕ್ಕಬಳ್ಳಾಪುರ: ಬೆಂಗಳೂರಿನ (Bengaluru) ಆಟೋ ಚಾಲಕನೊರ್ವ ಆಟೋ ಇಎಂಎ ಸಾಲ ತೀರಿಸಲು ತನ್ನಿಬ್ಬರು ಸ್ನೇಹಿತೆಯರನ್ನೇ ಬಳಸಿಕೊಂಡು ಪ್ರೀಪ್ಲಾನ್ ಮಾಡಿ, ಹಳೆಯ ಸ್ನೇಹಿತೆಯನ್ನೇ ಹತ್ಯೆಗೈದ ಘಟನೆ ಚಿಕ್ಕಬಳ್ಳಾಪುರದಲ್ಲಿ (Chikkaballapura) ನಡೆದಿದೆ. ಪಾಪಿ ಆಟೋ ಚಾಲಕನನ್ನು ಈಗ ಪೊಲೀಸರು ಬಂಧಿಸಿದ್ದಾರೆ.
ಆ.16 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ಪೊಲೀಸ್ ಠಾಣೆಯ ನಾಮಗೊಂಡ್ಲು ಗ್ರಾಮದ ಸೇತುವೆಯೊಂದರ ಬಳಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ಅಪರಿಚಿತ ಶವ ಬೆನ್ನತ್ತಿದ್ದ ಪೊಲೀಸರಿಗೆ ಕಾಣೆಯಾದ ಮಹಿಳೆಯರ ಪ್ರಕರಣಗಳ ಹುಡುಕಾಟ ನಡೆಸಿದಾಗ ಆಕೆ ಆಂಧ್ರದ ಹಿಂದೂಪುರದ ಅರ್ಚನಾ ಎಂಬುದು ಗೊತ್ತಾಗಿತ್ತು. ಹಿಂದೂಪುರ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಹೇಮಾವತಿ ನದಿಗೆ ಬಿದ್ದ ಕಾರು – ಇಬ್ಬರ ಶವ ಪತ್ತೆ, ಮತ್ತಿಬ್ಬರು ಕೊಚ್ಚಿ ಹೋಗಿರೋ ಶಂಕೆ
ಗೌರಿಬಿದನೂರು ಸಿಪಿಐ ಸತ್ಯನಾರಾಯಣ್ ಹಾಗೂ ಮಂಚೇನಹಳ್ಳಿ ಪಿಎಸ್ಐ ಆಕೆಯ ಸಿಡಿಆರ್ ಪರಿಶೀಲನೆ ಮಾಡಿದಾಗ ಕಾಣೆಯಾದ ದಿನದಂದು ಆರ್ಚನಾಳಿಗೆ ರಾಕೇಶ್ ಎಂಬಾತ ಹಲವು ಬಾರಿ ಕರೆ ಮಾಡಿರೋದು ಗೊತ್ತಾಗಿದೆ. ಹೀಗಾಗಿ ಮೂಲತಃ ಗೌರಿಬಿದನೂರಿನ ವಿರೂಪಸಂದ್ರದ ಬೆಂಗಳೂರಿನಲ್ಲಿ ಆಟೋ ಚಾಲಕನಾಗಿರುವ ರಾಕೇಶ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆಟೋ ಚಾಲಕ ರಾಕೇಶ್ ತನ್ನ ಆಟೋ ಇಎಂಐನ್ನ ಮೂರು ತಿಂಗಳಿಂದ ಕಟ್ಟಿಲ್ಲ, ಹಾಗೂ ಬೈಕ್ ಮೇಲೆ 30,000 ಸಾಲ ಮಾಡಿದ್ದು, ಅದು ಸಹ ತೀರಿಸಲು ಹಣ ಇಲ್ಲ. ಕೈ ಸಾಲ ಬೇರೆ ಮಾಡಿಕೊಂಡಿದ್ದು ಸಾಲಗಾರನಾಗಿದ್ದು ಸಾಲ ತೀರಿಸಲು ಸ್ನೇಹಿತೆಯನ್ನ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಕೊಲೆಯಾದ ಅರ್ಚನಾ ಶುಭಸಮಾರಂಭಗಳಲ್ಲಿ ಮದುವೆ ಮನೆಗಳಲ್ಲಿ ಸ್ವಾಗತಕಾರಳಾಗಿ ಕೆಲಸ ಮಾಡುತ್ತಿದ್ದಳು. ಹಲವು ವರ್ಷಗಳ ಹಿಂದೆ ಕೊಲೆ ಮಾಡಿದ ಆಟೋ ಚಾಲಕ ಸಹ ಮದುವೆ ಮನೆಗಳಲ್ಲಿ ಆಡುಗೆ ಕೆಲಸ ಮಾಡಿಕೊಂಡಿದ್ದ. ಅಂದಿನಿಂದಲೂ ಅರ್ಚನಾ ಹಾಗೂ ರಾಕೇಶ್ ಅಣ್ಣ ತಂಗಿಯ ಸಂಬಂಧದಂತೆ ಸ್ನೇಹಿತರಾಗಿದ್ದರಂತೆ. ಇತ್ತೀಚೆಗೆ ವಿಡಿಯೋ ಕಾಲ್ ಮಾಡಿ ಮಾತನಾಡುವ ವೇಳೆ ರಾಕೇಶ್ ಅರ್ಚನಾಳ ಕತ್ತಲ್ಲಿ ಲಕ ಲಕ ಹೊಳೆಯುತ್ತಿದ್ದ ಮಾಂಗಲ್ಯ ಸರದ ಮೇಲೆ ಕಣ್ಣು ಹಾಕಿದ್ದ. ಹಾಗಾಗಿ ಬೆಂಗಳೂರಿನಲ್ಲಿ ಪರಿಚಯವಾಗಿದ್ದ ತನ್ನ ಮತ್ತೊಬ್ಬ ಸ್ನೇಹಿತಾ ನಿಹಾರಿಕಾ ಬಳಿ ತನ್ನ ಕಷ್ಟ ಹೇಳಿಕೊಂಡಿದ್ದ. ತಾನು ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದೇನೆ. ಆಟೋ ಇಎಂಐ ಸಹ ಕಟ್ಟಿಲ್ಲ, ಹಾಗಾಗಿ ನನ್ನ ಫ್ರೆಂಡ್ ಅರ್ಚನಾ ಹತ್ರ ಚಿನ್ನದ ಸರ ಇದೆ ಅವಳನ್ನ ಸಾಯಿಸಿ ಆದ್ರೂ ಸರ ಕದ್ದು ಸಾಲ ತೀರಿಸಬೇಕು ನೀನು ನನಗೆ ಸಹಾಯ ಮಾಡು ಅಂತ ಕೇಳಿಕೊಂಡಿದ್ದನಂತೆ.
ನಿಹಾರಿಕಾ ನಾನು ಬರೋಕೆ ಆಗಲ್ಲ ನನ್ನ ಪ್ರಾಣ ಸ್ನೇಹಿತೆ ಅಂಜಲಿ ಅಂತಾ ಇದಾಳೆ ಅವಳನ್ನ ಕರೆದುಕೊಂಡು ಹೋಗು ಅಂತ ಅಂಜಲಿನಾ ಕಳಿಸಿಕೊಟ್ಟಿದ್ದಾಳೆ. ಇನ್ನೂ ಅಂಜಲಿ ತಾನೊಬ್ಬಳೇ ಯಾಕೆ ಅಂತ ತನ್ನ ಸ್ನೇಹಿತ ನವೀನ್ ಎಂಬಾತನನ್ನ ಸಹ ಕರೆದುಕೊಂಡು ಬಂದು ಕೊಲೆ ಮಾಡಿದ್ದಾರೆ. ರಾಕೇಶ್ ಆಟೋದಲ್ಲಿ ಆದ್ರೆ ಮರ್ಡರ್ ಮಾಡೋಕೆ ಆಗಲ್ಲ ಅಂತ ಕಾರಿನಲ್ಲಿ ಆದ್ರೆ ಕೆಲಸ ಸುಲಭ ಅಂತ ಯೋಚನೆ ಮಾಡಿ, ಅಂಜಲಿ ವಾಸವಿದ್ದ ಪಿಜಿ ಮಾಲೀಕಿಗೆ ಸ್ನೇಹಿತೆಯನ್ನ ನೊಡೋಕೆ ಹಿಂದೂಪುರಕ್ಕೆ ಹೋಗಿ ಬರ್ತಿವಿ ಅಂತ ಪಿಜಿ ಮಾಲೀಕಿಯ ಇಟಿಯೋಸ್ ಕಾರನ್ನ ತೆಗೆದುಕೊಂಡು ಹೋಗಿದ್ದ.
ಆಗಸ್ಟ್ 14 ರಂದು ಬೆಂಗಳೂರಿನಿಂದ ರಾಕೇಶ್, ಅಂಜಲಿ ಹಾಗೂ ನವೀನ್ ಮೂವರು ಸೀದಾ ಹಿಂದೂಪುರಕ್ಕೆ ಹೋಗಿ ಅರ್ಚನಾಳನ್ನ ಬಾ ಊಟಕ್ಕೆ ಹೋಗಿ ಬರೋಣ ಅಂತ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕಾರು ಹತ್ತಿಸಿಕೊಂಡಿದ್ದಾರೆ. ರಾಕೇಶ್ ಹಾಗೂ ಎಲ್ಲರೂ ಹಿಂದೂಪುರದಲ್ಲೇ ಫೋನ್ಗಳನ್ನ ಸ್ವಿಚ್ ಅಫ್ ಮಾಡಿಕೊಂಡಿದ್ದಾರೆ. ಹಿಂದೂಪುರದಿಂದ ಆರಂಭವಾದ ಕಾರು ಜರ್ನಿ ಗೌರಿಬಿದನೂರು ಮಂಚೇನಹಳ್ಳಿ ಮಾರ್ಗವಾಗಿ ಚಿಕ್ಕಬಳ್ಳಾಪುರ ಹಾಗೂ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಸಂಜೆಯವರೆಗೂ ಸಾಗಿದ್ದು ಸಂಜೆ ಕತ್ತಲಾಗುತ್ತಿದ್ದಂತೆ ಆಂಧ್ರದ ಚಿಲಮತ್ತೂರು ಬಳಿ ಕಾರಿನಲ್ಲಿದ್ದ ಅರ್ಚನಾಳ ಕುತ್ತಿಗೆಗೆ ವೇಲ್ ನಿಂದ ಬಿಗಿದು ಕೊಲೆ ಮಾಡಿ ಮೃತದೇಹವನ್ನ ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಮಗೊಂಡ್ಲು ಗ್ರಾಮದ ಬಳಿ ದೊಡ್ಡ ಸೇತುವೆಯೊಂದರ ಬಳಿ ಬಿಸಾಕಿ ಪರಾರಿಯಾಗಿದ್ದರು.
ಅರ್ಚನಾಳನ್ನ ಕೊಲೆ ಮಾಡಿ ಕದ್ದಿದ್ದ ಮಾಂಗಲ್ಯಸರ ಹಾಗೂ ಬಂಗಾರದ ಕಿವಿಯ ಒಲೆಯನ್ನ ಫೈನಾನ್ಸ್ ಒಂದರಲ್ಲಿ 2.19 ಲಕ್ಷ ರೂ.ಗೆ ಅಡಮಾನ ಇಟ್ಟಿದ್ದರು. ಬಂದ ಹಣದಿಂದ ಆಟೋ ಇಎಂಐ ಹಾಗೂ ಕೈ ಸಾಲ ತೀರಿಸಿ ಉಳಿದ ಹಣದಲ್ಲಿ ಎಲ್ಲರೂ ಮೋಜು ಮಸ್ತಿ ಮಾಡಿಕೊಂಡಿದ್ದರು. ಈಗ ರಾಕೇಶ್ ಹಾಗೂ ಅಂಜಲಿಗೆ ಪೊಲೀಸರು ಜೈಲು ದರ್ಶನ ಮಾಡಿಸಿದ್ದಾರೆ. ಉಳಿದ ಇಬ್ಬರು ಆರೋಪಿಗಳಾದ ನವೀನ್ ಹಾಗೂ ನಿಹಾರಿಕಾಗೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆಯಲ್ಲಿ ಹಸುಗೂಸನ್ನು ಹತ್ಯೆಗೈದಿದ್ದ ಪಾಪಿ ತಾಯಿ ಅರೆಸ್ಟ್