5ನೇ ಬಾರಿಗೆ ಒಂದಾಯ್ತು ‘ದೃಶ್ಯಂ ಜೋಡಿ’ : ಮೋಹನ್ ಲಾಲ್ ಹಿಂದೆ ಬಿದ್ದ ಜೀತು

Public TV
1 Min Read

ಲಯಾಳಂ (Malayalam) ಸಿನಿಮಾ ರಂಗದ ಹಿಟ್ ಜೋಡಿ ಎಂದೇ ಕರೆಯಲ್ಪಡುವ ನಿರ್ದೇಶಕ ಜೀತು ಜೋಸೆಫ್ (Jeethu Joseph) ಮತ್ತು ನಟ ಮೋಹನ್ ಲಾಲ್ (Mohanlal) ಮತ್ತೊಂದು ಸಿನಿಮಾ ಮಾಡಲು ಸಿದ್ಧರಾಗಿದ್ದಾರೆ. ಅದೂ ಐದನೇ ಬಾರಿಗೆ ಈ ಜೋಡಿ ಒಂದಾಗುತ್ತಿದ್ದು, ಹೊಸ ಸಿನಿಮಾದ *New Movie) ಘೋಷಣೆ ಈಗಷ್ಟೇ ಆಗಿದೆ. ಸದ್ಯ ಪ್ರೊಡಕ್ಷನ್ 33 ಎನ್ನುವ ಹೆಸರಿನಲ್ಲಿ ಕೆಲಸಗಳು ಆರಂಭವಾಗಿವೆ.

ಮೋಹನ್ ಲಾಲ್ ಅವರಿಗಾಗಿಯೇ ನಿರ್ದೇಶಕ ಜೀತು ‘ದೃಶ್ಯಂ’ ಕಥೆಗಳನ್ನು ಬರೆದರು. ದೃಶ್ಯಂ 1 ಮತ್ತು ದೃಶ್ಯಂ 2 ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದವು. ಕೇವಲ ಮಲಯಾಳಂ ಸಿನಿಮಾ ರಂಗ ಮಾತ್ರವಲ್ಲ ಅನೇಕ ಭಾಷೆಗಳಲ್ಲಿ ಈ ಸಿನಿಮಾ ಡಬ್ ಆಯಿತು. ಕನ್ನಡದಲ್ಲೂ ಈ ಸಿನಿಮಾ ರೀಮೇಕ್ ಆಯಿತು. ಈಗ ಹಿಟ್ ಜೋಡಿಯೇ ಮತ್ತೊಂದು ಸಿನಿಮಾ ಮಾಡಲು ಹೊರಟಿದೆ. ಇದು ದೃಶ್ಯಂ ಭಾಗ 3ನಾ ಅಥವಾ ಬೇರೆ ಸಿನಿಮಾನಾ ಎನ್ನುವುದು ಗೊತ್ತಾಗಬೇಕಿದೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ರಾಧಿಕಾ ರಾವ್

ಈ ಹೊಸ ಸಿನಿಮಾಗೆ ದೃಶ್ಯಂ ಚಿತ್ರಗಳನ್ನು ನಿರ್ಮಾಣ ಮಾಡಿದ ಸಂಸ್ಥೆಯೇ ಹಣ ಹೂಡುತ್ತಿದ್ದು, ಇನ್ನಷ್ಟೇ ತಾರಾಗಣ ಮತ್ತು ಇತರ ಸಂಗತಿಗಳು ಹೊರ ಬರಬೇಕಿವೆ. ನಿರ್ಮಾಣ ಸಂಸ್ಥೆಯು ಹೊಸ ಸಿನಿಮಾದ ಪೋಸ್ಟರ್ ಹಂಚಿಕೊಳ್ಳುತ್ತಿದ್ದಂತೆಯೇ ಮೋಹನ್ ಲಾಲ್ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಮತ್ತೊಂದು ಹಿಟ್ ಸಿನಿಮಾ ಗ್ಯಾರಂಟಿ ಎಂದು ಚೆಪ್ಪಾಳೆ ತಟ್ಟಿದ್ದಾರೆ. ಅಷ್ಟರ ಮಟ್ಟಿಗೆ ಈ ಜೋಡಿ ಮಲಯಾಳಂ ಸಿನಿಮಾ ರಂಗದಲ್ಲಿ ಮೋಡಿ ಮಾಡಿದೆ.

ಸದ್ಯ ಸಿನಿಮಾದ ಪೋಸ್ಟರ್ ಮಾತ್ರ ರಿಲೀಸ್ ಆಗಿದ್ದು, ಆಗಸ್ಟ್ ನಿಂದ ಚಿತ್ರೀಕರಣ ಪ್ರಾರಂಭಿಸಲಿದೆಯಂತೆ ಚಿತ್ರತಂಡ. ಅದಕ್ಕೂ ಮುನ್ನ ಜೀತು ತಮ್ಮ ಕೈಯಲ್ಲಿನ ಸಿನಿಮಾ ಮುಗಿಸಬೇಕಿದೆ. ಈ ಬಾರಿ ಯಾವ ರೀತಿಯ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳದ ಜೀತು, ಹೊಸ ರೀತಿಯ ಸಿನಿಮಾದ ಭರವಸೆಯನ್ನು ಮಾತ್ರ ನೀಡಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್