ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಕುಡಿಯಿರಿ ಮೆಂತ್ಯ ಹಾಲು

Public TV
2 Min Read

ದೀಗ ಮಾನ್ಸೂನ್ ಸೀಸನ್. ಮಕ್ಕಳು, ಹಿರಿಯರು ಸೇರಿದಂತೆ ಹೆಚ್ಚಿನವರು ಈ ಸಮಯದಲ್ಲಿ ಸೋಂಕಿಗೊಳಗಾಗೋದು ಸಾಮಾನ್ಯ. ಇವೆಲ್ಲವನ್ನೂ ಎದುರಿಸಲು ಪ್ರತಿಯೊಬ್ಬರಿಗೂ ರೋಗನಿರೋಧಕ ಶಕ್ತಿ ಹೆಚ್ಚಿಸೋ ಆಹಾರ ಬೇಕೇಬೇಕು. ನಾವಿಂದು ಹೇಳಿಕೊಡುತ್ತಿರೋ ರೆಸಿಪಿ ಮೆಂತ್ಯ ಹಾಲು ಕೂಡಾ ಅದರಲ್ಲೊಂದು. ಇದರ ಮುಖ್ಯ ಪ್ರಯೋಜನವೇ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸೋ ಗುಣಲಕ್ಷಣ. ಹಾಗಿದ್ದರೆ ತಡ ಮಾಡದೆ ಮೆಂತ್ಯ ಹಾಲನ್ನು ತಯಾರಿಸೋದು ಹೇಗೆಂದು ನೋಡೋಣ.

ಬೇಕಾಗುವ ಪದಾರ್ಥಗಳು:
ಮೆಂತ್ಯ – 1 ಟೀಸ್ಪೂನ್
ನೀರು – 1 ಕಪ್
ಹಾಲು – ಅಗತ್ಯಕ್ಕೆ ಅನುಸಾರ
ಜೇನುತುಪ್ಪ – ಸಿಹಿಗೆ ಅನುಸಾರ
ದಾಲ್ಚಿನ್ನಿ ಪುಡಿ – ಚಿಟಿಕೆ ಇದನ್ನೂ ಓದಿ: ಸಿಹಿ ಸಿಹಿ ನೆಲ್ಲಿಕಾಯಿ ಮುರಬ್ಬಾ ಈ ರೀತಿ ಮಾಡಿ

ಮಾಡುವ ವಿಧಾನ:
* ಮೊದಲಿಗೆ ಮೆಂತ್ಯವನ್ನು 1 ಕಪ್ ನೀರಿನಲ್ಲಿ ಸುಮಾರು 6-8 ಗಂಟೆಗಳ ಕಾಲ ನೆನೆಸಿಡಿ.
* ಬಳಿಕ ನೀರನ್ನು ಹರಿಸಿ, ಮೆಂತ್ಯವನ್ನು ಬ್ಲೆಂಡರ್‌ಗೆ ವರ್ಗಾಯಿಸಿ. ಕಾಲು ಕಪ್ ತಾಜಾ ನೀರನ್ನು ಸೇರಿಸಿ ನಯವಾದ ಪೇಸ್ಟ್ ಆಗುವಂತೆ ರುಬ್ಬಿ.
* ಒಂದು ಪಾತ್ರೆ ತೆಗೆದುಕೊಂಡು ಅದರಲ್ಲಿ ಹಾಲು ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ.
* ಹಾಲು ಬೆಚ್ಚಗಾಗಲು ಪ್ರಾರಂಭಿಸಿದಾಗ ಮೆಂತ್ಯ ಪೇಸ್ಟ್ ಅನ್ನು ಹಾಲಿಗೆ ಸೇರಿಸಿ ಚೆನ್ನಾಗಿ ಬೆರೆಸಿಕೊಳ್ಳಿ.
* ನೀವು ಸಿಹಿ ಇಷ್ಟಪಡುತ್ತೀರಾದರೆ 1-2 ಟೀಸ್ಪೂನ್ ಜೇನುತುಪ್ಪ ಸೇರಿಸಿ. ಸಿಹಿ ಬೇಡವಾದರೆ ಜೇನುತುಪ್ಪ ಬಳಸದೇ ಇರಬಹುದು.
* ಬಳಿಕ ಚಿಟಿಕೆಯಷ್ಟು ದಾಲ್ಚಿನ್ನಿ ಪುಡಿಯನ್ನು ಸೇರಿಸಿ. ಇದು ಮೆಂತ್ಯ ಹಾಲಿನ ಪರಿಮಳವನ್ನು ಹೆಚ್ಚಿಸುತ್ತದೆ.
* ಈಗ ಹಾಲನ್ನು ಕುದಿಯಲು ಬಿಡಿ. ತಳ ಹಿಡಿಯದಂತೆ ಆಗಾಗ ಕೈಯಾಡಿಸುತ್ತಿರಿ.
* ಬಳಿಕ ಉರಿಯನ್ನು ಆಫ್ ಮಾಡಿ, ಸ್ವಲ್ಪ ಆರಲು ಬಿಡಿ.
* ಇದೀಗ ರೋಗನಿರೋಧಕ ಶಕ್ತಿ ಹೆಚ್ಚಿಸೋ ಮೆಂತ್ಯ ಹಾಲು ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನು ನೀವು ಬೇಕೆಂದರೆ ಸಂಪೂರ್ಣವಾಗಿ ತಣಿಸಿಯೂ ಸವಿಯಬಹುದು. ಇದನ್ನೂ ಓದಿ: ಸಿಹಿಯಾದ ಶುಂಠಿ ಬರ್ಫಿ ಸವಿದು ಆನಂದಿಸಿ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್