‘ಮಾಣಿಕ್ಯ’ ಸಿನಿಮಾ ನಟಿ ರನ್ಯಾ ರಾವ್ ಫ್ಲಾಟ್‌ ಮೇಲೆ ದಾಳಿ – ಕೋಟಿ ಕೋಟಿ ಮೌಲ್ಯದ ಚಿನ್ನ ವಶ

Public TV
1 Min Read

ಬೆಂಗಳೂರು: ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ನಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್‌ (Ranya Rao) ಫ್ಲಾಟ್‌ ಮೇಲೂ ಡಿಆರ್‌ಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಕೋಟಿ ಕೋಟಿ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.

ಲ್ಯಾವೆಲ್ಲಿ ರಸ್ತೆಯ ಮನೆಯಲ್ಲಿ 2.06 ಕೋಟಿ ಮೌಲ್ಯದ ಚಿನ್ನ ವಶಪಡಿಸಿಕೊಂಡಿದ್ದಾರೆ. ನಿನ್ನೆ ರಾತ್ರಿ 2.67 ಕೋಟಿ ಹಣವನ್ನು DRI ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಇದನ್ನೂ ಓದಿ: ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ನಲ್ಲಿ IPS ಅಧಿಕಾರಿ ಪುತ್ರಿ, ನಟಿ ರನ್ಯಾ ಬಂಧನ

ನಂದವಾಣಿ ಮ್ಯಾನ್ಸನ್‌ನಲ್ಲಿ ನಟಿ ವಾಸವಿದ್ದರು. ತಿಂಗಳಿಗೆ 4.5 ಲಕ್ಷ ಬಾಡಿಗೆ ಕಟ್ಟುತ್ತಿದ್ದರು.

ಗೋಲ್ಡ್‌ ಸ್ಮಗ್ಲಿಂಗ್‌ ಪ್ರಕರಣದಲ್ಲಿ ನಟಿ ರನ್ಯಾ ನಿನ್ನೆ ಬಂಧನಕ್ಕೆ ಒಳಗಾಗಿದ್ದರು. ಐಪಿಎಸ್‌ ಅಧಿಕಾರಿಯೊಬ್ಬರ ಮಲಮಗಳಾಗಿರುವ ನಟಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಾಧುಕೋಕಿಲರಿಂದ ಸುದೀಪ್, ಯಶ್, ಧ್ರುವ ಬಗ್ಗೆ ತಪ್ಪು ಮಾಹಿತಿ ಹೋಗ್ತಿದೆ: ಚಂದ್ರಚೂಡ್

Share This Article