ಚಿತ್ರದುರ್ಗದಲ್ಲಿ ಡಿಆರ್‌ಡಿಒ ಡ್ರೋನ್ ಪತನ

Public TV
1 Min Read

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ಜೋಡಿ ಚಿಕ್ಕೇನಹಳ್ಳಿ ಬಳಿಯ ಜಮೀನೊಂದರಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಪರೀಕ್ಷಾರ್ಥ ಹಾರಿಸಿದ್ದ  ರುಸ್ತುಂ-2 ಹೆಸರಿನ ಡ್ರೋನ್ ಪತನಗೊಂಡಿದೆ.

ರುಸ್ತುಂ -2 ಮಾನವರಹಿತ ವೈಮಾನಿಕ ವಾಹನ (ಯುಎವಿ) ಆಗಿದ್ದು  ಜಿಲ್ಲೆಯ ಕುದಾಪುರ ಬಳಿ ಡಿಆರ್‌ಡಿಒ ಸಂಸ್ಥೆ ಪರೀಕ್ಷಾರ್ಥವಾಗಿ ಹಾರಿಸಿತ್ತು. ಆದರೆ ನಿಯಂತ್ರಣ ಕಳೆದುಕೊಂಡ ಡ್ರೋನ್ ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಜೋಡಿ ಚಿಕ್ಕೇನಹಳ್ಳಿ ಬಳಿಯ ಜಮೀನಿನಲ್ಲಿ ನೆಲಕ್ಕಪ್ಪಳಿಸಿದೆ.

ಡಿಆರ್‌ಡಿಒ ಚಳ್ಳಕೆರೆ ಏರೋನಾಟಿಕಲ್ ಟೆಸ್ಟ್ ರೇಂಜ್‍ನಲ್ಲಿ(ಎಟಿಆರ್) ರುಸ್ತುಂ 2  ಹೊರಾಂಗಣ ಪರೀಕ್ಷೆ ಮತ್ತು ಮೌಲ್ಯಮಾಪನ ನಡೆಯುತಿತ್ತು.

ಈ ಬಗ್ಗೆ ಚಿತ್ರದುರ್ಗ ಎಸ್‍ಪಿ ಅವರು ಮಾತನಾಡಿ, ಡಿಆರ್‌ಡಿಒ  ಪರೀಕ್ಷೆ ಮಾಡಲು ಯುಎವಿಯನ್ನು ಹಾರಿಸಿತ್ತು. ಆದರೆ ನಿಯಂತ್ರಣ ಕಳೆದುಕೊಂಡು ಅದು ಜಮೀನಿನಲ್ಲಿ ಪತನಗೊಂಡಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ, ಡ್ರೋನ್ ನೆಲಕ್ಕಪ್ಪಳಿಸಿದ ಬಳಿಕ ಜನರು ಅದನ್ನು ಕೂತುಹಲದಿಂದ ನೋಡಲು ಬಂದಿದ್ದರು ಎಂದರು.

ಸದ್ಯ ಸ್ಥಳಕ್ಕೆ ಪೊಲೀಸರು ಭೆಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಅಲ್ಲದೆ ನೆರೆದಿದ್ದ ಜನರನ್ನು ಅಲ್ಲಿಂದ ಕಳುಹಿಸಿದ್ದಾರೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *