ಮೈಸೂರು ರಂಗಾಯಣದಲ್ಲಿ ಟಿಪ್ಪು ವಿರುದ್ಧ ನಾಟಕ ರೆಡಿ

Public TV
1 Min Read

ಮೈಸೂರು: ರಾಜ್ಯದಲ್ಲಿ ಮತ್ತೆ ಟಿಪ್ಪು ವಿವಾದ (Tippu Sultan Controversy) ಗರಿಗೆದರುವ ಸೂಚನೆ ಸ್ಪಷ್ಟವಾಗಿದೆ. ಈ ವಿವಾದಕ್ಕೆ ಮತ್ತೆ ಮೈಸೂರಿನ ರಂಗಾಯಣವೇ (Mysore Rangayana) ವೇದಿಕೆ ಆಗ್ತಿದೆ. ಇದೇ ತಿಂಗಳ ನವೆಂಬರ್ 20 ರಿಂದ ಮೈಸೂರಿನ ರಂಗಾಯಣದಲ್ಲಿ `ಟಿಪ್ಪು ನಿಜ ಕನಸುಗಳು’ ಎಂಬ ನಾಟಕ (Drama) ಪ್ರದರ್ಶನವಾಗಲಿದೆ.

ಟಿಪ್ಪುವನ್ನು ಹೆಜ್ಜೆ ಹೆಜ್ಜೆಗೂ ವಿರೋದಿ ಸುತ್ತಾ ಬಂದಿರುವ ಮೈಸೂರು ರಂಗಾಯಣದ (Mysore Rangayana) ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ (Addanda C Cariappa) `ಟಿಪ್ಪು ನಿಜ ಕನಸುಗಳು’ ಎಂಬ ನಾಟಕ ಬರೆದು ರಂಗಾಯಣ ಕಲಾವಿದರ ಮೂಲಕ ಅದನ್ನು ಪ್ರಸ್ತುತ ಪಡಿಸುತ್ತಿದ್ದಾರೆ. ನವೆಂಬರ್ 20 ರಿಂದ ಇದರ ಪ್ರಥಮ ಪ್ರದರ್ಶನ ಶುರುವಾಗಲಿದೆ. ಒಟ್ಟು ಮೂರುವರೆ ತಾಸಿನ ನಾಟಕ ಇದು. ನಾಟಕ ಪ್ರದರ್ಶನಕ್ಕೆ ಮುನ್ನ ಈ ನಾಟಕ ಕೃತಿಯನ್ನು ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ (SL Bhyrappa) ಕೃತಿ ಬಿಡುಗಡೆ ಮಾಡಲಿದ್ದಾರೆ. ಇದನ್ನೂ ಓದಿ: ದೈವ ನರ್ತಕರ ಪವಿತ್ರ ಆಚರಣೆ ಗೌರವಿಸಿ- ಲಲಿತಾ ನಾಯಕ್‌ಗೆ ಖಾದರ್ ತಿರುಗೇಟು

ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಅಡ್ಡಂಡ ಸಿ. ಕಾರ್ಯಪ್ಪ, ಕನ್ನಡವನ್ನು ಕೊಂದ ಮುಸ್ಲಿಂ (Muslims) ಸುಲ್ತಾನ ಟಿಪ್ಪುವನ್ನು ಕನ್ನಡ ಪ್ರೇಮಿ ಎಂದು ಕೆಲವರು ಬಣ್ಣಿಸಿದ್ದಾರೆ. ಟಿಪ್ಪು ವಿಶ್ವಧರ್ಮ ಪ್ರೇಮಿ ಎಂಬಂತೆ ಡೋಂಗಿ ಬುದ್ದಿಜೀವಿಗಳು ಬಿಂಬಿಸಿದ್ದಾರೆ. ಟಿಪ್ಪು ಬಗ್ಗೆ ಅತಿ ರಂಜಿತ ಸುಳ್ಳು ಚರಿತ್ರೆ ಸೃಷ್ಟಿಸಿದ್ದಾರೆ. ಇಂತಹ ಸುಳ್ಳಿನ ಚರಿತ್ರೆಯ ಅಸಲಿಯತ್ತನ್ನು ಬಯಲು ಮಾಡುವುದು ಈ ನಾಟಕದ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *