‘ಡ್ರ್ಯಾಗನ್‌’ ಹೀರೋ ಜೊತೆ ಮಮಿತಾ ಬೈಜು ರೊಮ್ಯಾನ್ಸ್

Public TV
1 Min Read

‘ಡ್ರ್ಯಾಗನ್‌’ (Dragon) ಸಿನಿಮಾ ಮೂಲಕ ಸೆನ್ಸೇಷನ್ ಕ್ರಿಯೆಟ್ ಮಾಡಿರುವ ನಟ ಪ್ರದೀಪ್ ರಂಗನಾಥನ್‌ಗೆ (Pradeep Ranganathan) ‘ಪ್ರೇಮಲು’ ಬ್ಯೂಟಿ ಮಮಿತಾ ಬೈಜು ಜೊತೆಯಾಗಿದ್ದಾರೆ. ಇವರ ಹೊಸ ಸಿನಿಮಾಗೆ ‘ಪುಷ್ಪ 2’ (Pushpa 2) ಚಿತ್ರ ನಿರ್ಮಿಸಿದ್ದ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಸಾಥ್ ನೀಡುತ್ತಿದೆ. ಇದನ್ನೂ ಓದಿ:ಸಿನಿಮಾ ರೂಪದಲ್ಲಿ ಬರುತ್ತಿದೆ ಸಿಎಂ ಯೋಗಿ ಆದಿತ್ಯನಾಥ್ ಜೀವನ ಚರಿತ್ರೆ

‘ಡ್ರ್ಯಾಗನ್‌’ ಸಿನಿಮಾ ಸೂಪರ್ ಹಿಟ್ ಆಗಿರೋ ಬೆನ್ನಲ್ಲೇ ಪ್ರದೀಪ್ ಹೊಸ ಸಿನಿಮಾದಲ್ಲಿ ನಟಿಸಲು ಬಂಪರ್ ಆಫರ್ ಸಿಕ್ಕಿದೆ. ಮಮಿತಾ ಬೈಜು (Mamitha Baiju) ಜೊತೆ ಅವರು ರೊಮ್ಯಾನ್ಸ್ ಮಾಡಲು ಅವರು ರೆಡಿಯಾಗಿದ್ದಾರೆ. ಮತ್ತೊಂದು ವಿಭಿನ್ನ ಸಿನಿಮಾದೊಂದಿಗೆ ಅವರು ಬರುತ್ತಿದ್ದಾರೆ. ಸದ್ಯ ಸಿನಿಮಾದ ಮುಹೂರ್ತ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದೆ. ಸದ್ಯದಲ್ಲೇ ಶೂಟಿಂಗ್ ಕೂಡ ಶುರು ಆಗಲಿದೆ.

 

View this post on Instagram

 

A post shared by Mythri Movie Makers (@mythriofficial)

ಪ್ರದೀಪ್ ನಟಿಸಲಿರುವ ಹೊಸ ಚಿತ್ರಕ್ಕೆ ‘ಬ್ಯಾಂಗರ್’ (Banger) ಎಂದು ಕ್ಯಾಚಿ ಟೈಟಲ್ ಇಡಲಾಗಿದೆ. ಹೊಚ್ಚ ಹೊಸ ಪ್ರೇಮ ಕಥೆಗೆ ಕೀರ್ತಿಶ್ವರನ್ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿದೆ.

Share This Article