ಅಪ್ಪು ಕಂದ ಒಂದ್ಸಲ ಬಂದು ನನ್ನ ನೋಡ್ಕೊಂದು ಹೋಗು: ಪುನೀತ್ ಬಗ್ಗೆ ಸೋದರತ್ತೆ ಮಾತು

Public TV
1 Min Read

ಪುನೀತ್ ರಾಜ್‌ಕುಮಾರ್ (Puneeth Rajkumar) 50ನೇ ಹುಟ್ಟುಹಬ್ಬದ ಹಿನ್ನೆಲೆ ಅವರ ಸೋದರ ಅತ್ತೆ ನಾಗಮ್ಮ ವಿಶೇಷವಾಗಿ ಬರ್ತ್‌ಡೇಗೆ ವಿಶ್ ಮಾಡಿದ್ದಾರೆ. ಅಪ್ಪು ನಿನಗೆ 50 ವರ್ಷ ಆಯಿತೇ? ಅಂತಲೂ ಆಶ್ಚರ್ಯಪಟ್ಟಿದ್ದಾರೆ. ಆದರೆ, ನಾಗಮ್ಮಗೆ ಅಪ್ಪು ಇಲ್ಲದೇ ಇರೋದು ಗೊತ್ತೇ ಇಲ್ಲ. ಅಸಲಿ ವಿಚಾರ ತಿಳಿಯದೇ ಅಪ್ಪುಗೆ ವಿಶ್ ಮಾಡಿರುವ ಹಿರಿಯ ಜೀವ ನಾಗಮ್ಮ ವಿಡಿಯೋ ಫ್ಯಾನ್ಸ್ ಪೇಜ್‌ಗಳಲ್ಲಿ ಇದೀಗ ವೈರಲ್ ಆಗುತ್ತಿದೆ.

ನಿನಗೆ 50 ವರ್ಷ ಆಯ್ತಾ..ಅಬ್ಬಾ ಚೆನ್ನಾಗಿದಿಯಾ ಮಗನೇ? ಎಂದಿದ್ದಾರೆ. ನಿನ್ನ ಇನ್ನೂ ಮಗು ಅಂದುಕೊಂಡಿದ್ದೇನೆ ನಾನು. ನನ್ನನ್ನ ಒಂದ್ ಸಾರಿ ಬಂದು ನೋಡ್ಕೊಂಡ್ ಹೋಗು ಕಂದಾ. ನಿನಗೆ 50 ವರ್ಷ ಆಯ್ತಲ್ಲೋ ಎಂದು ಅವರು ಮಾತನಾಡಿದ್ದಾರೆ. ಅಪ್ಪುಗೆ 50 ವರ್ಷ ತುಂಬಿತು ಎಂದು ತಿಳಿದಾಗ ಖುಷಿಯಿಂದ ಸೋದರ ಅತ್ತೆ ನಾಗಮ್ಮ ಶುಭಹಾರೈಸಿದ್ದಾರೆ. ಇನ್ನೂ ಓದಿ:ಪುನೀತ್‌ ರಾಜ್‌ಕುಮಾರ್‌ ನೆನೆದ RCB ತರಬೇತುದಾರ ದಿನೇಶ್‌ ಕಾರ್ತಿಕ್‌

ಅದಷ್ಟೇ ಅಲ್ಲ, ವಿಡಿಯೋದಲ್ಲಿ ಅಪ್ಪು ಬಗೆಗಿನ ಒಂದು ಘಟನೆಯನ್ನ ನಾಗಮ್ಮ ನೆನಪಿಸಿಕೊಂಡಿದ್ದಾರೆ. ಅಪ್ಪು ಬಂದಾಗ ಫ್ಯಾನ್ಸ್ ಮನೆ ಬಳಿ ಬಂದರು. ಎಲ್ಲರೂ ಬಂದವರೇ ಫೋಟೋಗಳನ್ನೆ ತೆಗೆಸಿಕೊಂಡ್ರು. ಆ ದಿನ ಶೂಟಿಂಗ್ ಮಾಡೋಕೂ ಬಿಡಲೇ ಇಲ್ಲ. ಬರೀ ಫೋಟೋ ತೆಗೆಸಿಕೊಳ್ಳುವುದೇ ಆಯಿತು ನೋಡಿ ಅಂತಲೇ ನಾಗಮ್ಮ ಹೇಳಿಕೊಂಡಿದ್ದಾರೆ. ಇನ್ನೂ ಅಪ್ಪು ಮೇಲಿನ ಅವರ ಪ್ರೀತಿ ನೋಡಿದ್ರೆ ಎಂತಹವರಿಗೂ ಹೃದಯಕ್ಕೆ ಟಚ್ ಆಗುತ್ತದೆ.

ಅಂದಹಾಗೆ, ಪುನೀತ್ ಅವರು 46ನೇ ವಯಸ್ಸಿಯಲ್ಲಿ ನಿಧನರಾದರು. 2021ರ ಅಕ್ಟೋಬರ್ 2ರಂದು ಅಪ್ಪು ಇಹಲೋಕ ತ್ಯಜಿಸಿದರು.

Share This Article