ಇಂದು ಡಾ.ರಾಜ್ ಕುಮಾರ್ ಪುಣ್ಯತಿಥಿ : ಸ್ಮಾರಕಕ್ಕೆ ಹರಿದು ಬಂತು ಜನಸಾಗರ

Public TV
1 Min Read

ಇಂದು ವರನಟ ಡಾ.ರಾಜ್ ಕುಮಾರ್ (Rajkumar) ಅವರ 17ನೇ ಪುಣ್ಯತಿಥಿ. ಬೆಂಗಳೂರಿನ ಕಂಠೀರವ ಸ್ಟುಡಿಯೋ  ಬಳಿಯ ಸಮಾಧಿಗೆ ಡಾ.ರಾಜ್ ಕುಟುಂಬ ಆಗಮಿಸಿ ಪೂಜೆ ಸಲ್ಲಿಸಿತು. ರಾಘವೇಂದ್ರ ರಾಜ್ ಕುಮಾರ್, ಯುವರಾಜ್ ಕುಮಾರ್, ಶಿವರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್ ಕುಮಾರ್ ಸೇರಿದಂತೆ ಡಾ.ರಾಜ್ ಕುಟುಂಬ ಅನೇಕ ಸದಸ್ಯರು ಸ್ಮಾರಕಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.

ರಾಜ್ ಕುಮಾರ್ ಅವರ ಪುಣ್ಯತಿಥಿಗಾಗಿ ಪುನೀತ್ ರಾಜ್ ಕುಮಾರ್ (Puneeth) ಮತ್ತು ಪಾರ್ವತಮ್ಮ ರಾಜ್ ಕುಮಾರ್ (Parvathamma Rajkumar) ಸಮಾಧಿಗೂ ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ಸ್ಮಾರಕದ ಮುಂದೆ ಅಭಿಮಾನಿಗಳು ರಕ್ತದಾನ, ಅನ್ನದಾನ ಶಿಬಿರಗಳನ್ನು ಆಯೋಜನೆ ಮಾಡಿದ್ದರು. ತಮ್ಮ ನೆಚ್ಚಿನ ನಟನಿಗೆ ಈ ಮೂಲಕ ನಮನ ಸಲ್ಲಿಸಿದರು. ಇದನ್ನೂ ಓದಿ: ಮದುವೆ ಆಗುವ ಬಗ್ಗೆ ಸೀಕ್ರೆಟ್‌ ಬಿಚ್ಚಿಟ್ಟ ಶರ್ಮಿಳಾ ಮಾಂಡ್ರೆ

ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ಅಭಿಮಾನಿಗಳು ಡಾ.ರಾಜ್ ಕುಮರ್ ಅವರ ಸಮಾಧಿಗೆ ಪೂಜೆ ಸಲ್ಲಿಸಿ, ಭಾವುಕರಾದರು. ಪಕ್ಕದಲ್ಲಿಯೇ ಇರುವ ಪುನೀತ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಸಮಾಧಿಗೂ ಪೂಜೆ ಸಲ್ಲಿಸಿದರು. ಸಾವಿರಾರು ಅಭಿಮಾನಿಗಳು ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಸ್ಮಾರಕದ ದರ್ಶನ ಪಡೆದರು.

Share This Article