ಅಮ್ಮನ ಬಗ್ಗೆ ಅಪ್ಪು ಮಾತನಾಡಿದ್ದ ಸ್ಫೂರ್ತಿದಾಯಕ ಮಾತುಗಳು ವೈರಲ್

By
2 Min Read

ಸ್ಯಾಂಡಲ್‍ವುಡ್ ಪವರ್ ಸ್ಟಾರ್ ದಿ. ಡಾ. ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ತಿಂಗಳುಗಳೇ ಕಳೆದರೂ ಅವರ ಮೇಲಿನ ಅಭಿಮಾನ ಇನ್ನೂ ಕರಗಿಲ್ಲ. ಈ ಮಧ್ಯೆ ಪುನೀತ್ ಸಿನಿಮಾ ಡೈಲಾಗ್‍ಗಳು, ಕಾರ್ಯಕ್ರಮದಲ್ಲಿ ಅವರು ಮಾತಾಡಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಅದೇ ರೀತಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಿರುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅಪ್ಪು, ಅಲ್ಲಿ ತಮ್ಮ ಅಮ್ಮನ ಬಗ್ಗೆ ಮಾತಾನಾಡಿರುವ ಸ್ಫೂರ್ತಿದಾಯಕ ಮಾತುಗಳು ವೈರಲ್ ಆಗುತ್ತಿದೆ.

ಹೌದು. ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅಮ್ಮ ಪಾರ್ವತಮ್ಮ ರಾಜ್ ಕುಮಾರ್ ಬಗ್ಗೆ ಮಾತಾನಾಡುತ್ತಾ ಅಪ್ಪು ಹೆಮ್ಮೆ ವ್ಯಕ್ತಪಡಿಸಿದರು. ನಾನು ನನ್ನ ಅಮ್ಮನಂತೆ ಆಗಬೇಕು. ಕೈಯಲ್ಲಿ ಪರ್ಸ್ ಇಟ್ಟುಕೊಂಡರೆ ತುಂಬಾ ಹಣ ಇದೆ ಅಂತ ಅನಿಸೋದು. ಅಮ್ಮನಂತೆ ಚೆನ್ನಾಗಿ ಸಂಪಾದನೆ ಮಾಡ್ಬೇಕು. ನಮ್ಮಮ್ಮ ಸಂಪಾದನೆ ಅನ್ನೋದಕ್ಕಿಂತ ಹೆಚ್ಚಾಗಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಅಲ್ಲದೆ ಹಲವಾರು ಮಂದಿಯನ್ನು ಇಂಡಸ್ಟ್ರಿಗೆ ಪರಿಚಯಿಸಿದ್ದಾರೆ ಎಂದಿದ್ದರು.  ಇದನ್ನೂ ಓದಿ: 88 ವರ್ಷಗಳ ಕನ್ನಡ ಚಿತ್ರರಂಗದ ಎಲ್ಲ ದಾಖಲೆ ಮುರಿದ ಜೇಮ್ಸ್ : 100 ಕೋಟಿ, ಅಧಿಕೃತ ಹೇಳಿಕೆ

ನನಗೆ ಇಬ್ಬರು ಹೆಣ್ಣುಮಕ್ಕಳು. ಆದರೆ ಇಲ್ಲಿ ಹೆಣ್ಣು ಬೇರೆ ಅಲ್ಲ, ಗಂಡು ಬೇರೆ ಅಲ್ಲ, ಇಲ್ಲಿ ಎಲ್ಲಾರು ಸಮಾನರು ಎಂದು ಹೇಳಿದರು. ಸಮಾಜಕ್ಕೆ ಹೆಣ್ಣು ಮಗಳು ಅಂತ ಬಂದಾದ ಬಳಿಕ ಅವರೂ ಕೆಲಸ ಮಾಡಲೇಬೇಕು. ನಮ್ಮ ಅಮ್ಮನೂ ಕೆಲಸ ಮಾಡುತ್ತಿದ್ದರು. ಅದಕ್ಕೆ ನಾನು ಯಾರನ್ನು ನೋಡಿದರೂ ಯಾವಾಗ್ಲೂ ಕೆಲಸ ಮಾಡಿ, ಜೀವನದಲ್ಲಿ ಚೆನ್ನಾಗಿರಿ ಅಂತ ಹೇಳುತ್ತೇನೆ. ಇದಕ್ಕೆ ನಮ್ಮ ಅಮ್ಮನೇ ಸ್ಫೂರ್ತಿ ಅಂತ ಅಪ್ಪು ಸಂತಸ ವ್ಯಕ್ತಪಡಿಸಿದ್ದರು.

ನಾನೆಷ್ಟು ಒಳ್ಳೆಯ ಕೆಲಸ ಮಾಡುರುತ್ತೀನೋ, ಅಷ್ಟು ಕೆಟ್ಟ ಕೆಲಸನೂ ಮಾಡಿರುತ್ತೇನೆ. ಯಾಕೆಂದರೆ ಇದು ಜೀವನ ಎಂದ ಅವರು, ಈ ಜೀವನದಲ್ಲಿ ನನ್ನ ತಿದ್ದಿ, ಬೆಳೆಸಿರುವವರೆಂದರೆ ನನ್ನ ತಾಯಿ ಎಂದಿದ್ದರು. ಅಪ್ಪು ಅವರ ಈ ಮಾತುಗಳು ಇದೀಗ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಬರಲಿವೆ ಪುನೀತ್ ನಟನೆಯ ‘ಯುವರತ್ನ’ ಸಿನಿಮಾದ ಅನ್ ಕಟ್ ಸೀನ್ಸ್ : ನಿರ್ದೇಶಕ ಸಂತೋಷ್ ಆನಂದ್

ಮಾರ್ಚ್ 17ರಂದು ಅಪ್ಪು ಹುಟ್ಟುಹಬ್ಬವಾಗಿದ್ದು, ಅಂದೇ ಪುನೀತ್ ನಟನೆಯ ಕೊನೆಯ ಚಿತ್ರ ಜೇಮ್ಸ್ ರಿಲೀಸ್ ಆಗಿದೆ. ಅದ್ಯ ಚಿತ್ರ ಅದ್ಭುತ ಪ್ರದರ್ಶನ ಕಾಣುತ್ತಿದ್ದು, ಸಿನಿಮಾ ವೀಕ್ಷಿಸಿದ ಪ್ರತಿಯೊಬ್ಬರು ಕಣ್ಣೀರು ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *