ಕಳೆದ ಅಕ್ಟೋಬರ್‌ನಿಂದಲೇ ಹತ್ಯೆಗೆ ಸ್ಕೆಚ್‌, ಮರಣೋತ್ತರ ಪರೀಕ್ಷೆಯನ್ನ ನಾನು ನೋಡಬೇಕು ಎಂದಿದ್ದ ಮಹೇಂದ್ರ ರೆಡ್ಡಿ

Public TV
1 Min Read

– ಕೃತ್ತಿಕಾ ರೆಡ್ಡಿ ತಾಯಿ ಸೌಜನ್ಯ ಗಂಭೀರ ಆರೋಪ

ಬೆಂಗಳೂರು: ನನ್ನ ಮಗಳನ್ನು ಕಳೆದ ವರ್ಷದ ಅಕ್ಟೋಬರ್‌ನಿಂದಲೇ ಕೊಲೆ ಮಾಡಲು ಮಹೇಂದ್ರ ರೆಡ್ಡಿ (Mahendra Reddy) ಪ್ರಯತ್ನಿಸುತ್ತಿದ್ದ ಎಂದು ಡಾ. ಕೃತ್ತಿಕಾ ರೆಡ್ಡಿ (Krithika Reddy) ತಾಯಿ, ವಕೀಲೆ ಸೌಜನ್ಯ ಗಂಭೀರ ಆರೋಪ ಮಾಡಿದ್ದಾರೆ.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮದುವೆಯಾದ ದಿನದಿಂದಲೂ ಮಹೇಂದ್ರ ರೆಡ್ಡಿ‌ ಸಣ್ಣ ಅನುಮಾನ ಬಾರದಂತೆ ನಡೆದುಕೊಂಡಿದ್ದ. 2024 ಅಕ್ಟೋಬರ್ ನಿಂದಲೇ ಮಗಳ ಹತ್ಯೆಗೆ ಪ್ಲ್ಯಾನ್‌ ಮಾಡುತ್ತಿದ್ದ ಎಂದು ಹೇಳಿದರು. ಇದನ್ನೂ ಓದಿ:  ಮಹೇಂದ್ರ ರೆಡ್ಡಿಗೆ ಬೇರೆ ಯುವತಿ ಜೊತೆ ಸಂಬಂಧ ಶಂಕೆ – ವೈದ್ಯೆ ಕೃತಿಕಾ ಸಾವಿನ ಹಿಂದೆ ಅವಳ ನೆರಳು?

ನಮ್ಮ ಮಗಳು ಅವಾಗವಾಗ ಮನೆಗೆ ಬರುತ್ತಿದ್ದಳು. ದಿನ ಬಿಟ್ಟು ದಿನ ಅಳಿಯ ನೈಟ್ ಡ್ಯೂಟಿ ಅಂತಿದ್ದ. ತುಂಬಾ ದಿನದಿಂದ ನಮಗೆ ತಿಳಿಯದಂತೆ ಕೊಲೆ ಮಾಡಲು ಟ್ರೈ ಮಾಡಿದ್ದಾನೆ. ಏಪ್ರಿಲ್ 21 ರಂದು ಮಗಳಿಗೆ ಅವರ ಮನೆಯಲ್ಲಿ ಚಿಕಿತ್ಸೆ ನೀಡಿದ್ದ ಎಂದು ತಿಳಿಸಿದರು.

 

ಏಪ್ರಿಲ್ 22 ರಂದು ನಮ್ಮ ಮನೆಗೆ ಕರೆದುಕೊಂಡು ಬಂದಿದ್ದಾನೆ. ಮನೆಗೆ ಬರೋವಾಗ ಐವಿ ಡ್ರಿಪ್ಸ್ ಹಾಕಿಕೊಂಡು ಬಂದಿದ್ದ. ಬಳಿಕ ಏಪ್ರಿಲ್ 23 ರಂದು ನಾನು ನನ್ನ ಮಗಳು ಜೊತೆಯಲ್ಲಿ ಊಟ ಮಾಡಿದ್ದೆವು. ನಂತರ ರಾತ್ರಿ 9:30 ಕ್ಕೆ ರೂಂಗೆ ಹೋಗಿದ್ದರು. ಮರುದಿನ ಬೆಳಗ್ಗೆ 7:30 ಕ್ಕೆ ಅಳಿಯ ರೂಂನಿಂದ ಕಿರುಚಿಕೊಂಡಿದ್ದ. ಮನೆಯಿಂದ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮೃತಪಟ್ಟ ವಿಚಾರ ಗೊತ್ತಾಯಿತು ಎಂದು ವಿವರಿಸಿದರು.

ವೈದ್ಯನಾಗಿರುವ ನಾನು ಮರಣೋತ್ತರ ಪರೀಕ್ಷೆಯನ್ನ ನೋಡಬೇಕು ಎಂದು ಮಹೇಂದ್ರ ರೆಡ್ಡಿ ಹಠ ಹಿಡಿದಿದ್ದ. ಆದರೆ ವರದಿ ಬಂದ ಬಳಿಕವಷ್ಟೇ ನಮಗೆ ಈ ವಿಚಾರ ಗೊತ್ತಾಗಿತ್ತು. ಅವನ್ನೊಬ್ಬ ಗೋಮುಖ ವ್ಯಾಘ್ರ ಎಂದು ತಾಯಿ ಸಿಟ್ಟು ಹೊರಹಾಕಿದರು.

Share This Article