ಹಿಜಬ್ ವಿಚಾರ ಇಟ್ಕೊಂಡು ನಮಗೆ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ: ಸುಧಾಕರ್

Public TV
1 Min Read

ಚಿಕ್ಕಬಳ್ಳಾಪುರ: ಹಿಜಬ್ ವಿಚಾರ ಇಟ್ಕೊಂಡು ಬಿಜೆಪಿಗೆ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ ಎಂದು ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.

ಸಿದ್ದರಾಮಯ್ಯನವರಿಗೆ ಮಾಹಿತಿ ಕೊರೆತೆ ಇದೆ. ಬಿಜೆಪಿ ಪಕ್ಷದ ಮೇಲೆ ಗೂಬೆ ಕೂರಿಸುವ ಕೆಲಸ ಕೆಲವರು ಮಾಡುತ್ತಿದ್ದಾರೆ. ಆದರೆ ಪ್ರಧಾನಿಗಳು ಸಬ್ ಕಾ ಸಾಥ್ ಸಬ್ ಕಾ ವಿಶ್ವಾಸ್ ಅಂತ ಹೇಳಿದ್ದಾರೆ. ಎಲ್ಲರ ವಿಶ್ವಾಸ ಗಳಿಸುವುದೇ ನಮ್ಮ ಪಕ್ಷದ ಆಶಯ. ಅಂಬೇಡ್ಕರ್‌ರವರು ಪ್ರತಿಪಾದಿಸಿದಂತೆ ಈ ದೇಶದ ಎಲ್ಲ ಜನರು ಸಮಾನರು ಎನ್ನುವ ಚಿಂತನೆಯೇ ಬಿಜೆಪಿ ಪಕ್ಷದ ಚಿಂತನೆ ಆಗಿದೆ. ಹೀಗಾಗಿ ನಮ್ಮ ಪಕ್ಷ ಹಿಜಬ್ ವಿವಾದದ ಹಿಂದೆ ಇಲ್ಲ. ನಾವು ಯಾರ ಮನಸ್ಸಿಗೂ ಘಾಸಿಯಾಗದಂತೆ ನಡೆದುಕೊಳ್ಳಬೇಕು ಎಂಬುದನ್ನು ನಾನು ಮೊದಲೇ ಹೇಳಿದ್ದೇನೆ ಎಂದರು. ಇದನ್ನೂ ಓದಿ: ಹಿಜಬ್- ಕೇಸರಿ ಶಾಲು ವಿವಾದ- ಹೋರಾಟಕ್ಕಾಗಿಯೇ ವಿದ್ಯಾರ್ಥಿಗಳು ಟ್ವಿಟ್ಟರ್ ಖಾತೆ ಓಪನ್..!

ಹಿಜಬ್ ವಿಚಾರದಲ್ಲಿ ನಾನು ರಾಜ್ಯದ ಜನರಿಗೆ ವಿದ್ಯಾರ್ಥಿಗಳಿಗೆ ಒಂದು ಮನವಿ ಮಾಡ್ತೇನೆ. ನ್ಯಾಯಾಲಯದ ತೀರ್ಪಿಗೆ ಎಲ್ಲರೂ ಬದ್ದರಾಗಬೇಕಾಗುತ್ತೆ. ಆದರೆ ಯಾರ ಭಾವನೆಗಳು ಕೂಡ ಧಕ್ಕೆ ತರಬಾರದು, ಇದು ಭಾರತೀಯ ಸಂಸ್ಕೃತಿ ಅಲ್ಲ. ಒಂದು ಸಂಸ್ಥೆಗಳಲ್ಲಿ ಕಾನೂನು ಒಂಡು ಕಡೆ ಶಿಷ್ಟಾಚಾರ ಮತ್ತೊಂದೆಡೆ ಸಮವಸ್ತ್ರ ಅಂದ್ರೆ ಎಲ್ಲರೂ ಸಮಾನರು ಎಂದರ್ಥ. ಸಮಾನರಾಗಿ ಇರಲು ಎಲ್ಲರೂ ಪ್ರಯತ್ನ ಪಡಬೇಕು. ಶಾಲೆಯಲ್ಲಿ ಶ್ರೀಮಂತ, ಬಡವ ಇಬ್ಬರು ಇರ್ತಾರೆ. ಆದರೆ ಶ್ರೀಮಂತರು ಏನ್ ಬೇಕಾದ್ರೂ ಹಾಕ್ಕೋಳು ಆಗಿಲ್ಲ. ಸಮವಸ್ತ್ರಗಳು ಸಮನಾಗಿ ಇರುವ ಹಾಗೆ ಸಮಾನತೆ ಪ್ರತಿಪಾದಿಸುತ್ತವೆ. ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಎಲ್ಲ ಧರ್ಮಗಳು ಒಪ್ಪಿಕೊಳ್ಳಲಿ. ಇದು ನನ್ನ ವೈಯುಕ್ತಿಕ ಅಭಿಪ್ರಾಯ ಎಂದು ನುಡಿದರು. ಇದನ್ನೂ ಓದಿ: ಕೇಸರಿ ಶಾಲು, ಹಿಜಬ್ ಧರಿಸುವಂತಿಲ್ಲ : ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಏನಿದೆ?

Share This Article
Leave a Comment

Leave a Reply

Your email address will not be published. Required fields are marked *