ಬೆಂಗಳೂರು: ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ (Jayadeva Hospital) ನೂತನ ನಿರ್ದೇಶಕರಾಗಿ ಡಾ. ಬಿ.ದಿನೇಶ್ ಅವರು ಅಧಿಕಾರ ಸ್ವೀಕಾರ ವಹಿಸಿಕೊಂಡರು.
ಬುಧವಾರ ಸಂಜೆ ಡಾ. ಬಿ.ದಿನೇಶ್ ಅವರು ನಿರ್ದೇಶಕರಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಂಡರು. ನೂತನ ನಿರ್ದೇಶಕರನ್ನು ಜಯದೇವ ಆಸ್ಪತ್ರೆಯ ಹಿಂದಿನ ನಿರ್ದೇಶಕ ಡಾ. ಕೆ.ಎಸ್ ರವೀಂದ್ರನಾಥ್ ಹಾಗೂ ಸಿಬ್ಬಂದಿ ಸ್ವಾಗತಿಸಿದರು. ಇದನ್ನೂ ಓದಿ: ರಾಜ್ಯ ಸರ್ಕಾರ ಹುಡುಗಾಟಿಕೆ ಬಿಟ್ಟು ಕಲ್ಲು ತೂರಿದ ಅಯೋಗ್ಯರನ್ನು ಒದ್ದು ಒಳಗೆ ಹಾಕಲಿ: ವಿಜಯೇಂದ್ರ
ಡಾ. ಬಿ.ದಿನೇಶ್ ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಹೃದ್ರೋಗ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.