ಫೆ.27ಕ್ಕೆ ಡಾ.ಅಂಬರೀಶ್ ಸ್ಮಾರಕ ಶಂಕು ಸ್ಥಾಪನೆ : ಸಿಎಂ ಬಸವರಾಜ ಬೊಮ್ಮಾಯಿ ಭಾಗಿ

By
1 Min Read

ರೆಬಲ್ ಸ್ಟಾರ್ ಅಂಬರೀಶ್ ಅವರ ಸ್ಮಾರಕದ ಶಂಕು ಸ್ಥಾಪನೆ ಕಾರ್ಯಕ್ರಮ ಫೆ.27 ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದ, ಅಂಬರೀಶ್ ಅವರ ಸಮಾಧಿ ಸ್ಥಳದಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಮಾರಕದ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಇದನ್ನೂ ಓದಿ : ವಿಮಾನದಲ್ಲೂ ಯಶ್-ರಾಧಿಕಾ ಪಂಡಿತ್ ಅವರ ಮಕ್ಕಳ ಆಟ

ಅಬಕಾರಿ ಸಚಿವ ಕೆ.ಗೋಪಾಲಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ನಟಿ, ಸಂಸದೆ ಸುಮಲತಾ ಅಂಬರೀಶ್, ಸರಕಾರದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಆಯುಕ್ತ ಪಿ.ಎಸ್ ಹರ್ಷ ಸೇರಿದಂತೆ ಚಿತ್ರೋದ್ಯಮದ ಹಲವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ : ನಟ ಚೇತನ್ ಬಂಧನ ಹಿಂದಿನ ರೋಚಕ ಸ್ಟೋರಿ : ಜೈಲಿನಲ್ಲಿ ಚೇತನ್ 4ನೇ ದಿನ

ಅಂಬರೀಶ್ ನಿಧನರಾಗಿ ಮೂರುವರೆ (2018 ನವೆಂಬರ್ 24) ವರ್ಷದ ನಂತರ ಸ್ಮಾರಕ ನಿರ್ಮಾಣವಾಗುತ್ತಿದೆ. ಅಲ್ಲದೇ, ಕಳೆದ ಬಜೆಟ್ ನಲ್ಲಿ ಸ್ಮಾರಕಕ್ಕಾಗಿಯೇ ಸರಕಾರ 12 ಕೋಟಿ ರೂಪಾಯಿಗಳನ್ನೂ ಮಂಜೂರು ಮಾಡಿದೆ. ಕಂಠೀರವ ಸ್ಟುಡಿಯೋ ಆವರಣದಲ್ಲಿ ಒಟ್ಟು ನಾಲ್ಕು ಸ್ಮಾರಕಗಳು ತಲೆಯೆತ್ತಲಿವೆ. ಡಾ.ರಾಜ್ ಕುಮಾರ್ ಸ್ಮಾರಕ ಈಗಾಗಲೇ ಅಭಿವೃದ್ಧಿಯಾಗಿದೆ. ಪಾರ್ವತಮ್ಮ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರ ಸಮಾಧಿ ಸ್ಥಳಗಳೂ ಅಲ್ಲಿವೆ. ಅವುಗಳನ್ನೂ ಹಂತ ಹಂತವಾಗಿ ಅಭಿವೃದ್ಧಿ ಪಡಿಸುವ  ಗುರಿ ಸರಕಾರದ ಮುಂದಿದೆ.

Share This Article
Leave a Comment

Leave a Reply

Your email address will not be published. Required fields are marked *