ದಾವಣಗೆರೆ: ಒಂದು ವಾರದಲ್ಲಿ ಹಣವನ್ನು ಡಬಲ್ (Money Doubling) ಮಾಡಿ ಕೊಡುವುದಾಗಿ ಆಮಿಷವೊಡ್ಡಿ ಕೋಟ್ಯಂತರ ರೂ. ವಂಚಿಸಿ ಆಂಧ್ರಪ್ರದೇಶ (Andhra Pradesh) ಮೂಲದ ದಂಪತಿ ಪರಾರಿಯಾಗಿರುವ ಘಟನೆ ದಾವಣಗೆರೆಯಲ್ಲಿ (Davanagere) ನಡೆದಿದೆ.
ಆಂಧ್ರಪ್ರದೇಶದ ಅನಂತಪುರ ನಿವಾಸಿಗಳಾದ ಬೊಗ್ಗು ಶ್ರೀರಾಮಲು- ಪುಷ್ಪಾ ವಂಚಿಸಿ ಎಸ್ಕೇಪ್ ಆಗಿರುವ ದಂಪತಿ. ಈ ದಂಪತಿ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ವಿವಿಧ ಗ್ರಾಮಗಳ ಮಹಿಳೆಯರಿಗೆ ವಂಚಿಸಿ ಪರಾರಿಯಾಗಿದ್ದಾರೆ. ಡಬ್ಲಿಂಗ್ ಆಸೆಗೆ ರೇಣುಕಮ್ಮ ಎಂಬವರು ಜಮೀನು ಮಾರಾಟ ಮಾಡಿ 33 ಲಕ್ಷ ರೂ. ನೀಡಿದ್ದರು. ಅಲ್ಲದೇ ಮೀನಾ 40 ಲಕ್ಷ ರೂ., ಪ್ರಿಯಾಂಕ 50 ಲಕ್ಷ ರೂ. ನೀಡಿದ್ದಾರೆ. ಇನ್ನು ಟಿ ತಿರುಮಲೇಶ್ ಎಂಬವರು 17 ಲಕ್ಷ ರೂ. ನೀಡಿ ಮೋಸ ಹೋಗಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಗೆ ದಾಖಲು; ಆಫ್ರಿಕಾ ವಿರುದ್ಧದ ಟೆಸ್ಟ್ ಮಧ್ಯೆ ಟೀಂ ಇಂಡಿಯಾಕ್ಕೆ ಶಾಕ್ ಕೊಟ್ಟ ಕ್ಯಾಪ್ಟನ್ ಗಿಲ್!
ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹಣ ಹಾಕಿ, ಡಬಲ್ ಮಾಡುವ ಎಂದು ವಂಚಕ ದಂಪತಿ ನಂಬಿಸಿದ್ದರು. ಅಲ್ಲದೇ ಅವರ ಮನೆಯ ರೂಂನಲ್ಲಿ ಹಣದ ಕಂತೆಗಳನ್ನು ಜೋಡಿಸಿ ವೀಡಿಯೋ ಮಾಡಿ ಕಳಿಸಿ ನಂಬಿಸಿದ್ದರು. ಸದ್ಯ 17 ಲಕ್ಷ ರೂ. ಕಳೆದುಕೊಂಡ ಟಿ. ತಿರುಮಲೇಶ್ ಜಗಳೂರು ಠಾಣೆಗೆ ದೂರು ನೀಡಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಜಗಳೂರು ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಇದನ್ನೂ ಓದಿ: ʻಒಳ್ಳೆ ಮಾರ್ಕ್ಸ್ ಕೊಡ್ತೀನಿ ಮಜಾ ಮಾಡೋಣ ಬಾʼ ಅಂತ ಉಪನ್ಯಾಸಕನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ!
