ಈ ಚುನಾವಣೆಯಲ್ಲಿ ತಪ್ಪಿಯೂ ಸಾಬರಿಗೆ ವೋಟ್ ಹಾಕ್ಬೇಡಿ – ಯತ್ನಾಳ್ ಕರೆ

Public TV
1 Min Read

ವಿಜಯಪುರ: ಈ ಬಾರಿ ಚುನಾವಣೆಯಲ್ಲಿ (Election) ತಪ್ಪಿಯೂ ಸಾಬರಿಗೆ (Muslims) ವೋಟ್ ಹಾಕ್ಬೇಡಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಕರೆ ನೀಡಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಈ ಬಾರಿ ಚುನಾವಣೆಯಲ್ಲಿ ವಿಜಯಪುರದ ಜನರು ಸಾಬರಿಗೆ ವೋಟ್ (Vote) ಹಾಕ್ಬೇಡಿ, ಇನ್ಮುಂದೆ ವಿಜಯಪುರದಲ್ಲಿ ಟಿಪ್ಪು ಸುಲ್ತಾನ್ (Tipu Sultan) ಗೆಲ್ಲೋದಿಲ್ಲ, ಏನಿದ್ದರೂ ಶಿವಾಜಿ ಮಹಾರಾಜರ ಭಗವಾಧ್ವಜವೇ ಗೆಲ್ಲೋದು ಎಂದು ಬೀಗಿದ್ದಾರೆ. ಇದನ್ನೂ ಓದಿ: LPG ಬೆಲೆ 10 ಸಾವಿರ, ಹೋಗ್ರಪ್ಪ ಹೋಗ್ರಿ ಪಾಕಿಗೆ ಹೋಗಿ: ಯತ್ನಾಳ್

ಇತ್ತೀಚೆಗೆ ಶಾಸಕ ಯತ್ನಾಳ್ ಟಿಪ್ಪು ಅಭಿಮಾನಿಗಳ ವಿರುದ್ಧ ಕಿಡಿಕಾರಿದ್ದರು. ನಮ್ಮ ಸರ್ಕಾರ ಮರಾಠ ಸಮುದಾಯಕ್ಕಾಗಿ ಅಭಿವೃದ್ಧಿ ಪ್ರಾಧಿಕಾರ ಮಾಡಿದೆ. ಆದ್ರೆ ಇಲ್ಲಿ ಟಿಪ್ಪು ಸುಲ್ತಾನ್‌ಗೆ ಹುಟ್ಟಿದ ಕೆಲವು ಜನ ವಿರೋಧ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ಯಾದಗಿರಿಯಲ್ಲಿ ಟಿಪ್ಪು ಸರ್ಕಲ್ ವಿವಾದ- ಕೋಮು ಪ್ರಚೋದನೆ ನೀಡಿದವರ ಮೇಲೆ ಕೇಸ್, ಅರೆಸ್ಟ್

ನಾನು ಬೆಳಗಾವಿ ಅಧಿವೇಶನದಲ್ಲಿ ಹೇಳಿದ್ದೆ, ಶಿವಾಜಿ ಹುಟ್ಟದೇ ಇದ್ದಿದ್ರೆ ಸದನದಲ್ಲಿ ಕೂತ 224 ಜನರ ಯಾರೂ ಹಿಂದೂಗಳಾಗಿ ಇರುತ್ತಿರಲಿಲ್ಲ. ಗಡ್ಡಬಿಟ್ಟುಕೊಂಡು ಪಾಕಿಸ್ತಾನ ಸೆಷನ್‌ನಲ್ಲಿ ಕೂರುತ್ತಿದ್ರಿ. ಭಾರತದಲ್ಲಿ ಕ್ಷತ್ರೀಯರು ಇದ್ದಾರೆ ಎನ್ನುವ ಕಾರಣಕ್ಕೆ ಹಿಂದೂ ಸಮಾಜ ಉಳಿದಿದೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *