SC-ST ಸಮುದಾಯದ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಕೆ ಮಾಡಬೇಡಿ: JDS ಆಗ್ರಹ

Public TV
2 Min Read

ಬೆಂಗಳೂರು: ಎಸ್‌ಸಿಪಿ-ಟಿಎಸ್‌ಪಿ (SCP-TSP) ಹಣವನ್ನು ಯಾವುದೇ ಕಾರಣಕ್ಕೂ ಗ್ಯಾರಂಟಿ (Guarantee) ಯೋಜನೆಗೆ ಬಳಸಬಾರದು ಎಂದು ಸರ್ಕಾರವನ್ನು ಜೆಡಿಎಸ್ (JDS) ಪಕ್ಷ ಒತ್ತಾಯ ಮಾಡಿದೆ. ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಜೆಡಿಎಸ್ ಪಕ್ಷದ ಎಸ್‌ಸಿ-ಎಸ್‌ಟಿ (SC-ST) ಸಮುದಾಯದ ನಾಯಕರು ಸರ್ಕಾರದ ಕ್ರಮವನ್ನು ಖಂಡಿಸಿದರು.

ಮಾಜಿ ಶಾಸಕ ಹೆಚ್‌ಕೆ ಕುಮಾರಸ್ವಾಮಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಎಸ್‌ಸಿಪಿ-ಟಿಎಸ್‌ಪಿ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳುತ್ತಿದೆ. ಎಸ್‌ಸಿ-ಎಸ್‌ಟಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗೆ ವರ್ಗಾವಣೆ ಮಾಡಿದ್ದು ಎಷ್ಟು ಸರಿ? ಇದು ಎಸ್‌ಸಿ-ಎಸ್‌ಟಿ ಸಮುದಾಯಕ್ಕೆ ಮಾಡಿದ ಅನ್ಯಾಯ. ಇದನ್ನು ಜೆಡಿಎಸ್ ಪಕ್ಷ ಖಂಡಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.

ಕಾಯ್ದೆಯಲ್ಲಿ 7ಡಿ ಯನ್ನು ಡಿಲೀಟ್ ಮಾಡಬೇಕು ಎಂಬ ಹೋರಾಟ ಆಗುತ್ತಿತ್ತು. ಕಾಂಗ್ರೆಸ್ ಸರ್ಕಾರ 7ಡಿ ಯನ್ನ ಕೈ ಬಿಟ್ಟಿತ್ತು. ಈಗ ಇದೇ ಸರ್ಕಾರ ಹಣ ಬಳಕೆ ಮಾಡುತ್ತಿದೆ. ನಿಮ್ಮ ಗ್ಯಾರಂಟಿ ಯೋಜನೆಗೆ ಹಣ ಬೇರೆ ಕಡೆ ಸೃಷ್ಟಿ ಮಾಡಿಕೊಳ್ಳಿ. ಅದು ಬಿಟ್ಟು ಎಸ್‌ಸಿ-ಎಸ್‌ಟಿಗೆ ಇರೋ ಅನುದಾನದಲ್ಲಿ ಯಾಕೆ ಬಳಕೆ ಮಾಡ್ತೀರಾ? ಬಜೆಟ್ ಹೆಚ್ಚಳ ಆಗಿರೋದಕ್ಕೆ ಎಸ್‌ಸಿ-ಎಸ್‌ಟಿ ಅನುದಾನ ಹೆಚ್ಚಳ ಆಗಿದೆ. ಈಗ 11 ಸಾವಿರ ಕೋಟಿ ರೂ. ಹಣವನ್ನು ಗ್ಯಾರಂಟಿಗೆ ಬಳಸೋದು ಸರಿಯಲ್ಲ ಎಂದರು.

ಗ್ಯಾರಂಟಿ ಯೋಜನೆಗೆ ಹಣ ಬಳಕೆ ಮಾಡ್ತೀನಿ ಅಂತಿದ್ದೀರಾ. ಶಕ್ತಿ ಯೋಜನೆಯಲ್ಲಿ ಹೇಗೆ ಜನರನ್ನು ಜಾತಿ ಕೇಳ್ತೀರಾ? ಜಾತಿ ಕೇಳಿ ಫ್ರೀ ಟಿಕೆಟ್ ಕೊಡ್ತೀರಾ? ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಗ್ಯಾರಂಟಿ ಯೋಜನೆ ಲಂಚ ಅಂತ ಹೇಳಿದ್ದಾರೆ. ಯಾವುದೇ ಕಾರಣಕ್ಕೂ 11 ಸಾವಿರ ಕೋಟಿ ರೂ. ಹಣವನ್ನು ಗ್ಯಾರಂಟಿ ಯೋಜನೆಗೆ ಕೊಡಬಾರದು. ಎಸ್‌ಸಿಪಿ-ಟಿಎಸ್‌ಪಿ ಹಣ ಗ್ಯಾರಂಟಿ ಯೋಜನೆಗೆ ಬಳಕೆ ಮಾಡಬಾರದು. ಈ ಹಣ ದುರುಪಯೋಗ ಮಾಡಿಕೊಳ್ಳೋದಕ್ಕೆ ಸರ್ಕಾರ ಪ್ರಯತ್ನ ಮಾಡ್ತಿದೆ. ಸರ್ಕಾರ ಕೂಡಲೇ ನಿರ್ಧಾರ ವಾಪಸ್ ಪಡೆಯಬೇಕು. ಇಲ್ಲದೆ ಹೋದರೆ ರಾಜ್ಯಾದ್ಯಂತ, ಪ್ರತಿ ಜಿಲ್ಲೆ ಕೇಂದ್ರಗಳಲ್ಲಿ ಜೆಡಿಎಸ್ ಪ್ರತಿಭಟನೆ ಮಾಡಲಿದೆ ಎಂದು ಎಚ್ಚರಿಕೆ ಕೊಟ್ಟರು. ಇದನ್ನೂ ಓದಿ: ಸರ್ಕಾರವನ್ನ ಟೀಕಿಸಿದ್ದ ಹೆಚ್‍ಡಿಕೆ ವಿರುದ್ಧ ಚಲುವರಾಯಸ್ವಾಮಿ ವಾಗ್ದಾಳಿ

ಮಾಜಿ ಶಾಸಕ ಅಲ್ಕೋಡ್ ಹನುಮಂತಪ್ಪ ಮಾತನಾಡಿ, ಬಿಜೆಪಿ ಅವರು ಎಸ್‌ಸಿ-ಎಸ್‌ಟಿಗೆ ಅನ್ಯಾಯ ಮಾಡಿದರು ಅಂತ ಜನ ಕಾಂಗ್ರೆಸ್‌ಗೆ ಮತ ಹಾಕಿದರು. ಕಾಂಗ್ರೆಸ್ ಅವರ ಗ್ಯಾರಂಟಿಗೆ ಎಸ್‌ಸಿ-ಎಸ್‌ಟಿ ಜನ ವೋಟ್ ಹಾಕಿಲ್ಲ. ಎಸ್‌ಸಿಪಿ-ಟಿಎಸ್‌ಪಿ ಹಣವನ್ನು ಗ್ಯಾರಂಟಿಗೆ ಬಳಕೆ ಮಾಡ್ತಿದ್ದಾರೆ. ಬಿಜೆಪಿಯ ಅವಧಿಯಲ್ಲಿ ಎಸ್‌ಸಿಪಿ-ಟಿಎಸ್‌ಪಿ ಹಣ ಬೇರೆಯದಕ್ಕೆ ಬಳಕೆ ಮಾಡಿದಾಗ ಕಾಂಗ್ರೆಸ್ ಅವರು ದೊಡ್ಡ ವಿರೋಧ ಮಾಡಿದರು. ಆದರೆ ಇವತ್ತು ಕಾಂಗ್ರೆಸ್ ಅವರೇ ದೊಡ್ಡ ಅನ್ಯಾಯ ಮಾಡುತ್ತಿದ್ದಾರೆ. ಸಮುದಾಯದ ಹಣವನ್ನು ಬೇರೆಯದಕ್ಕೆ ಬಳಕೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಎಸ್‌ಸಿ-ಎಸ್‌ಟಿ ಸಮುದಾಯಕ್ಕೆ ಮೋಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮೇಲೆ ಇಟ್ಟ ಪ್ರೀತಿ ವಿಶ್ವಾಸ ಇವತ್ತು ಕಳೆದುಕೊಂಡಿದ್ದಾರೆ ಎಂದು ಕಿಡಿಕಾರಿದರು.

ಸರ್ಕಾರ ಗ್ಯಾರಂಟಿಗೆ ಹಣ ಬಳಕೆ ಮಾಡೋ ನಿರ್ಧಾರ ವಾಪಸ್ ಪಡೆಯಬೇಕು. ಇಲ್ಲದೆ ಹೋದರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಅದಕ್ಕೂ ಬಗ್ಗದೆ ಹೋದರೆ ಜಿಲ್ಲೆಗಳಲ್ಲಿ ಸಚಿವರು ಬಂದರೆ ಘೇರಾವ್ ಹಾಕೋ ಕೆಲಸ ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟರು. ಇದನ್ನೂ ಓದಿ: ನಾನು ಯಾರಿಗೂ ಪ್ರಮಾಣ ಮಾಡ್ಬೇಕಾದ ಅವಶ್ಯಕತೆ ಇಲ್ಲ, ಕೆಲಸ ಮಾಡಿದ್ರೆ ಹಣ ಬಿಡುಗಡೆ ಆಗುತ್ತೆ, ಇಲ್ಲ ಅಂದ್ರೆ ಹಣ ಇಲ್ಲ: ಡಿಕೆಶಿ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್