ದಂಪತಿ ಒಟ್ಟಿಗೆ ಮಲಗುವಂತಿಲ್ಲ, ಹಗ್‌-ಕಿಸ್‌ ಮಾಡುವಂತಿಲ್ಲ; ಕೊರೊನಾ ಟಫ್‌ ರೂಲ್ಸ್‌

Public TV
1 Min Read

ಬೀಜಿಂಗ್: ಕೋವಿಡ್‌-19 ಕಾರಣದಿಂದಾಗಿ ಶಾಂಘೈನಲ್ಲಿ ತೀವ್ರ ಲಾಕ್‌ಡೌನ್‌ನಲ್ಲಿರುವ ಸ್ಥಳೀಯರು ಕಠಿಣ ಜೀವನ ನಡೆಸುತ್ತಿದ್ದಾರೆ. ನಗರದಲ್ಲಿ ಲಾಕ್‌ಡೌನ್‌ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

ಚೀನಾದಲ್ಲಿ ಮತ್ತೆ ಕೋವಿಡ್‌ ವ್ಯಾಪಕವಾಗಿ ಹರಡುತ್ತಿದ್ದು, ಶಾಂಘೈ ಹಾಟ್‌ಸ್ಪಾಟ್‌ ಆಗಿ ಪರಿಣಮಿಸಿದೆ. ಕಳೆದ ಕೆಲವು ದಿನಗಳಲ್ಲಿ ದೈನಂದಿನ ಸೋಂಕಿನ ಪ್ರಮಾಣವು ಕುಸಿದಿದ್ದರೂ, ಇತರ ದೇಶಗಳಿಗೆ ಹೋಲಿಸಿದರೆ ಇದು ಇನ್ನೂ ಗಮನಾರ್ಹವಾಗಿ ಹೆಚ್ಚಾಗಿದೆ. ಹೀಗಾಗಿ ನಗರದ 26 ಮಿಲಿಯನ್ (2.6 ಕೋಟಿ) ನಿವಾಸಿಗಳನ್ನು ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. ಇದನ್ನೂ ಓದಿ: 26 ಮಿಲಿಯನ್ ಜನರ ಕೋವಿಡ್ ಪರೀಕ್ಷೆಗೆ ಸಾವಿರಾರು ಮಿಲಿಟರಿ, ವೈದ್ಯರನ್ನು ಶಾಂಘೈಗೆ ಕಳುಹಿಸಿದ ಚೀನಾ

ಕೋವಿಡ್‌ ನಿಯಮಗಳ ಪಾಲನೆ ಬಗ್ಗೆ ಆರೋಗ್ಯ ಕಾರ್ಯಕರ್ತರು ಮೆಗಾಫೋನ್‌ಗಳ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಅನೌನ್ಸ್‌ ಮಾಡುತ್ತಿದ್ದಾರೆ. ʼಇಂದಿನಿಂದ ದಂಪತಿ ಪ್ರತ್ಯೇಕವಾಗಿ ಮಲಗಬೇಕು. ಪರಸ್ಪರರನ್ನು ಆಲಿಂಗನ ಮಾಡುವುದು, ಚುಂಬಿಸುವುದಕ್ಕೆ ಅವಕಾಶವಿಲ್ಲ. ಉಪಾಹಾರ, ಊಟ ಸೇವನೆಯೂ ಪ್ರತ್ಯೇಕವಾಗಿ ಆಗಬೇಕು. ನಿಮ್ಮ ಸಹಕಾರಕ್ಕೆ ಧನ್ಯವಾದಗಳುʼ ಎಂದು ಅನೌನ್ಸ್‌ ಮಾಡುತ್ತಿರುವ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಕೊರೊನಾ ಹರಡುವುದನ್ನು ತಡೆಯಲು ನಗರವು ಕಠಿಣ ನಿರ್ಬಂಧಗಳನ್ನು ವಿಧಿಸಿದ ನಂತರ ಚೀನಾದ ಆರ್ಥಿಕ ಕೇಂದ್ರಗಳು ಸ್ತಬ್ಧವಾಗಿವೆ. ಆರೋಗ್ಯ ಕಾರ್ಯಕರ್ತರು, ಸ್ವಯಂಸೇವಕರು, ವಿತರಣಾ ಸಿಬ್ಬಂದಿ, ವಿಶೇಷ ಅನುಮತಿ ಹೊಂದಿರುವ ಜನರನ್ನು ಮಾತ್ರ ಬೀದಿಗಳಲ್ಲಿ ಓಡಾಡಲು ಅನುಮತಿ ನೀಡಲಾಗಿದೆ. ಇದನ್ನೂ ಓದಿ: ವ್ಲಾಡಿಮಿರ್‌ ಪುಟಿನ್ ಪುತ್ರಿಯರನ್ನೂ ಟಾರ್ಗೆಟ್‌ ಮಾಡ್ತಿದೆ ಅಮೆರಿಕ- ಯಾಕೆ ಗೊತ್ತಾ?

ಲಾಕ್‌ಡೌನ್‌ ಸಂದರ್ಭದಲ್ಲಿ ಅಗತ್ಯ ವಸ್ತುಗಳು, ಅಕ್ಕಿ, ಮಾಂಸ ದಾಸ್ತಾನಿದೆ. ಲಾಕ್‌ಡೌನ್‌ ವಿಧಿಸಿರುವ ವಲಯಗಳಲ್ಲಿ ಡೆಲಿವರಿ ಸಿಬ್ಬಂದಿ ಮೂಲಕ ನಿವಾಸಿಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸಲಾಗುವುದು. ಇನ್ನುಳಿದ ಕಡೆಗಳಲ್ಲಿ ಸಗಟು ಮಾರುಕಟ್ಟೆ, ಆಹಾರ ಮಳಿಗೆಗಳನ್ನು ತೆರೆಯಲು ಪ್ರಯತ್ನಿಸಲಾಗುವುದು ಎಂದು ಶಾಂಘೈ ಉಪ ಮೇಯರ್‌ ಚೆನ್‌ ಕಾಂಗ್‌ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *