ಅಳುವ ಗಂಡಸರನ್ನ ನೋಡಬಾರದು- ಡಿಕೆಶಿ ಕಣ್ಣೀರಿಗೆ ಯತ್ನಾಳ್ ವ್ಯಂಗ್ಯ

Public TV
2 Min Read

ವಿಜಯಪುರ: ಡಿ.ಕೆ ಶಿವಕುಮಾರ್ ಕಣ್ಣೀರು ನಾಟಕ ಕಂಪನಿ. ಅಳುವ ಗಂಡಸರನ್ನು ನೋಡಬಾರದು. ಡಿಕೆಶಿಗೆ ಅಳುವ ಗಂಡಸು ಎಂದು ಯತ್ನಾಳ್ ವ್ಯಂಗ್ಯವಾಡಿದರು.

ಭಾರತ ಜೋಡೋ ಯಾತ್ರೆ (Bharat Jodo Yatre) ಯಲ್ಲಿ ಡಿಕೆಶಿ ಕಣ್ಣೀರು ವಿಚಾರಕ್ಕೆ ಪ್ರತಿಕ್ರಿಯಿಸಿ, ಇವೆಲ್ಲ ನಾಟಕ ಕಂಪನಿ. ಭಾರತ ಜೋಡೋ ಯಾತ್ರೆಯಲ್ಲಿ ಕಣ್ಣೀರು ಹಾಕುವವರೆಲ್ಲ ಮಹಾಕಳ್ಳರು. ಗ್ಲಿಸರಿನ್ ಹಚ್ಚಿಕೊಂಡು ಅಳ್ತಿದ್ದಾರೆ. ಈ ಪುಣ್ಯಾತ್ಮನಿಗೆ ಹೇಗೆ ಕಣ್ಣೀರು ಬರುತ್ತೆ ಯಾರಿಗೆ ಗೊತ್ತು. ಇವರೆಲ್ಲ ಕಣ್ಣೀರು ಹಾಕೋರಲ್ಲ, ಲೂಟಿ ಹೊಡೆಯುವವರು ಎಂದ ಅವರು, ಕಣ್ಣೀರು ಹಾಕಿದವರು ನಿಮ್ಮ ಆಸ್ತಿಯನ್ನ ಬಡವರಿಗೆ ಹಂಚಿ ಬಿಡಿ ಎಂದು ಯತ್ನಾಳ್ (Basana Gauda Patil yatnal) ಸವಾಲೆಸೆದರು.

ಪ್ರೀಯಂಕಾ ಖರ್ಗೆ (Priyank Kharge) ಮಾಡಿದ ಆಸ್ತಿಯನ್ನ ಕಲಬುರಗಿಯ ದಲಿತರಿಗೆ ಹಂಚಿ ಬಿಡಲಿ. ಎಲ್ಲ ದಲಿತ ಕುಟುಂಬಗಳಿಗೆ ಒಂದೊಂದು ಮನೆ ಕಟ್ಟಿ ಕೊಡಲಿ. ಇವರಿಗೆ ಬಡವರ ಬಗ್ಗೆ ಕನಿಕರ ಇಲ್ಲ. ಕನಿಕರದಿಂದ ಕಣ್ಣೀರು ಹಾಕ್ತಿಲ್ಲ. ಸಾವಿರಾರು ಕೋಟಿಗಟ್ಟಲೆ ನಮ್ಮ ದೇಶದಲ್ಲಿ ಲೂಟಿ ಮಾಡಿದ್ದಾರೆ. ಮೋದಿ ನಾ ಕಾವುಂಗಾ ನ ಕಿಲಾ ಉಂಗಾ ಎಂದಿದ್ದಾರೆ. ನಮ್ಮವರ ಮೇಲೂ ರೇಡ್ ಆಗಿದೆ. ಇದು ಭಾರತ ಜೋಡೋ ಅಲ್ಲ, ಭಾರತ ತೋಡೋ ಯಾತ್ರೆ ಎಂದು ಹೇಳಿದರು. ಇದನ್ನೂ ಓದಿ: ಹೋಟೆಲ್ ಮಾಲೀಕನಿಗೆ ಬುದ್ಧಿ ಕಲಿಸಲು ಸಿಎಂ ಏಕನಾಥ್ ಶಿಂಧೆಗೆ ಬೆದರಿಕೆಯೊಡ್ಡಿದ್ದವ ಅರೆಸ್ಟ್

ಭಾರತ ಜೋಡೋ ಯಾತ್ರೆ ಮಾಡುವ ನೈತಿಕತೆ ಕಾಂಗ್ರೆಸ್‍ಗೆ ಇಲ್ಲ. ಪ್ರಿಯಾಂಕಾ ಖರ್ಗೆಯೇ ಹೇಳಿದ್ದಾರೆ ಇದು ಭಾರತ ತೋಡೋ ಯಾತ್ರೆ ಎಂದು. ಹಿಂದೆ ದೇಶವನ್ನ ಒಡೆದವರು ಈಗ ಜೋಡೋ ಮಾಡ್ತಿದ್ದಾರೆ. ನೆಹರು ಸ್ವಾರ್ಥಕ್ಕಾಗಿ ಗಾಂಧಿ ಮಹಾತಪ್ಪು ಮಾಡಿದ್ರು. ನೆಹರು ಪ್ರಧಾನಿಯಾಗಿಸಲು ಭಾರತ ಒಡೆದ್ರು. ಈಗ ಹೇಗೆ ಜೋಡೋ ಆಗುತ್ತೆ?. ಭಾರತ ಜೋಡೋ ಮಾಡಿದ್ದು ಪ್ರಧಾನಿ ಮೋದಿ (Narendra Modi). ಆರ್ಟಿಕಲ್ 370, ಸರ್ಜಿಕಲ್ ಸ್ಟ್ರೈಕ್, ಪಿಓಕೆ ಭಾರತದ ಅವಿಭಾಜ್ಯ ಅಂಗವಾಗುತ್ತೆ, ಈ ಮೂಲಕ ಮೋದಿ ಭಾರತ ಜೋಡಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮುರುಘಾ ಸ್ವಾಮೀಜಿ ವಿರುದ್ಧ ನ್ಯಾಯಾಧೀಶರಿಗೆ ಯತ್ನಾಳ್ ಪತ್ರ ವಿಚಾರಕ್ಕೆ ಪ್ರತಿಕ್ರಿಯಿಸಿ, ಪೀಠತ್ಯಾಗ ವಿಚಾರವಾಗಿ ಭಕ್ತರೇ ಸಭೆ ಮಾಡಿದ್ದಾರೆ. ಶಿವಮೂರ್ತಿ ಅನ್ನೋರು ಪೀಠ ತ್ಯಾಗ ಮಾಡಲಿ ಎಂದು ಭಕ್ತರೇ ಸಭೆ ಮಾಡಿದ್ದಾರೆ. ಅವರು ಪೀಠ ತ್ಯಾಗ ಮಾಡದೆ ಹೋದರೆ ಭಕ್ತರೇ ಉಚ್ಛಾಟನೆ ಮಾಡಬೇಕು. ಮುರುಘಾ ಮಠದಲ್ಲಿ ಸಾಕಷ್ಟು ಅವ್ಯವಹಾರವಾಗಿದೆ. ಅವ್ಯವಹಾರದ ತನಿಖೆ ನಡೆಯಾಗಬೇಕು. ಹಿಂದಿರುವ ರಾಜಕಾರಣಿಗಳು, ಅವರು ಮಠದಲ್ಲಿಟ್ಟ ಹಣದ ಬಗ್ಗೆ ತನಿಖೆ ನಡೆಯಬೇಕು. ಅರೆಸ್ಟ್ ಮಾಡಲು 6 ದಿನ ವಿಳಂಬ ಯಾಕೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ದೇವೇಗೌಡರ ಆರೋಗ್ಯ ವಿಚಾರಿಸುವ ನೆಪದಲ್ಲಿ ರಾಜಕೀಯ ನಾಯಕರು ಸಿಂಪತಿ ಗಿಟ್ಟಿಸಿಕೊಳ್ತಿದ್ದಾರೆ: ಶರವಣ

ಒಬ್ಬರು ಮಾಜಿ ಸಿಎಂ, ಅವರ ಮಗ ಇದಕ್ಕೆ ಉತ್ತರ ಕೊಡಬೇಕು. ಸ್ವಾಮೀಜಿ ಒಬ್ಬ ಮಾಜಿ ಸಿಎಂ ಮಗನ ಹೆಲಿಕಾಪ್ಟರ್ ತೆಗೆದುಕೊಂಡು ಅಡ್ಡಾಡುತ್ತಿದ್ದ. 6 ದಿನ ಯಾಕೆ ಪೊಲೀಸ್ ಇಲಾಖೆ ಅವರನ್ನ ಅರೆಸ್ಟ್ ಮಾಡಲಿಲ್ಲ. ಪೋಕ್ಸೋ ಗಂಭೀರ ಪ್ರಕರಣವಾದ್ರು ಯಾಕೆ ಬಂಧನವಾಗಲಿಲ್ಲ. ಮಠದಲ್ಲೆನಾದ್ರು ಹಣವಿಟ್ಟುದ್ರಾ, ಡಾಕ್ಯುಮೆಂಟ್ ಇಟ್ಟಿದ್ರಾ ಬಯಲಾಗಬೇಕು ಎಂದು ಹೇಳಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *