ಜಾಕ್ವೆಲಿನ್ ಫರ್ನಾಂಡೀಸ್‍ರನ್ನು ಕೆಟ್ಟದಾಗಿ ಬಿಂಬಿಸಬೇಡಿ: ಸುಕೇಶ್ ಚಂದ್ರಶೇಖರ್

Public TV
2 Min Read

ಮುಂಬೈ: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಹಾಗೂ ಸುಕೇಶ್ ಚಂದ್ರಶೇಖರ್ ಅವರು ಕ್ಲೋಸ್ ಆಗಿರುವ ಫೋಟೋವೊಂದು ಒಂದೆರಡು ವಾರಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಈ ಬಗ್ಗೆ ಸುಕೇಶ್ ಚಂದ್ರಶೇಖರ್ ವಕೀಲರಿಗೆ ಪತ್ರ ಬರೆಯುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

200 ಕೋಟಿ ವಂಚನೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಜೊತೆ ಜಾಕ್ವೆಲಿನ್ ಹೆಸರು ಕೇಳಿ ಬಂದಾಗಲಿಂದ ಇವರಿಬ್ಬರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸದ್ಯ ಈ ಕುರಿತಂತೆ ಸುಕೇಶ್ ತಮ್ಮ ಖಾಸಗಿತನಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ತಿಳಿಸುವ ಮೂಲಕ ವಕೀಲರಿಗೆ ಪತ್ರ ಬರೆದಿದ್ದಾರೆ. ಅಲ್ಲದೇ ಜಾಕ್ವೆಲಿನ್ ಜೊತೆಗೆ ರಿಲೇಶನ್ ಶಿಪ್‍ನಲ್ಲಿದ್ದು, ಆಕೆಗೆ ಪ್ರೀತಿಯಿಂದ ಉಡುಗೊರೆಗಳನ್ನು ನೀಡಲಾಗಿದೆ ಎಂದು ಸುಕೇಶ್ ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಶಕ್ತಿಧಾಮದ ಮಕ್ಕಳ ಜೊತೆ ಪ್ರವಾಸಕ್ಕೆ ಬಂದ ನಟ ಶಿವಣ್ಣ

ಕಳೆದ ವಾರ ವೈರಲ್ ಆದ ಫೋಟೋಗಳ ಬಗ್ಗೆ ನನಗೆ ತಿಳಿಯಿತು. ಇದು ನಿಜವಾಗಿಯೂ ದುಃಖ ಹಾಗೂ ಗೊಂದಲದ ಸಂಗತಿಯಾಗಿದೆ. ಇದು ಒಬ್ಬರ ಖಾಸಗಿತನ ಹಾಗೂ ವೈಯಕ್ತಿಕತೆಗೆ ಧಕ್ಕೆ ಉಂಟಾಗಿದೆ. ನಾನು ಮತ್ತು ಜಾಕ್ವೆಲಿನ್ ರಿಲೇಶನ್ ಶಿಪ್‍ನಲ್ಲಿದ್ದೇವೆ ಎಂದು ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ. ಒಬ್ಬರನ್ನೊಬ್ಬರು ಭೇಟಿಯಾಗುವುದು ಮತ್ತು ನಮ್ಮ ಸಂಬಂಧ ಯಾವುದೇ ರೀತಿಯ ಪ್ರಯೋಜನದ ಮೇಲೆ ಆಧರಿತವಾಗಿಲ್ಲ. ಆದರೆ ಕೆಟ್ಟ ರೀತಿ ಕಾಮೆಂಟ್ ಮತ್ತು ಟ್ರೋಲ್ ಮಾಡಲಾಗುತ್ತಿದೆ. ನಮ್ಮ ಪ್ರೀತಿಯು ಯಾವುದೇ ನಿರೀಕ್ಷೆಗಳ ಅವಲಂಬಿತವಾಗದೇ ಪ್ರೀತಿ ಹಾಗೂ ಗೌರವದ ಮೇಲೆ ಆಧಾರಿತವಾಗಿದೆ. ಏನನ್ನು ಅಪೇಕ್ಷಿಸದೇ ಪ್ರೀತಿಸಿದ ಅವಳನ್ನು ಕೆಟ್ಟ ರೀತಿಯಲ್ಲಿ ಬಿಂಬಿಸುವುದನ್ನು ದಯವಿಟ್ಟು ನಿಲ್ಲಿಸಿ ಎಂದು ಎಲ್ಲರಿಗೂ ವಿನಂತಿಸುತ್ತೇನೆ. ನಡೆದಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೂ ಆಕೆಗೂ ಯಾವುದೇ ಸಂಬಂಧವಿಲ್ಲ ಎಂದು ಮೊದಲೇ ತಿಳಿಸಿದ್ದೇನೆ ಎಂದಿದ್ದಾರೆ.

ನಾನು ಜಾಕ್ವೆಲಿನ್‍ಗೆ ಗಿಫ್ಟ್‌ಗಳನ್ನು ನೀಡಿದ್ದೇನೆ ಮತ್ತು ಅವಳ ಕುಟುಂಬಕ್ಕೆ ಸಹಾಯ ಮಾಡಿದ್ದೇನೆ. ರಿಲೇಶನ್ ಶಿಪ್‍ನಲ್ಲಿ ಪ್ರೀತಿ ಪಾತ್ರರಿಗೆ ಏನಾದರೂ ನೀಡುವುದು ಸಾಮಾನ್ಯ. ಆದರೆ ವೈಯಕ್ತಿಕವಾಗಿ ದೊಡ್ಡ ವ್ಯವಹಾರದಲ್ಲಿ ಅವರ ಹೆಸರನ್ನು ಏಕೆ ತರುತ್ತಿದ್ದೀರಾ ಎಂದು ನನಗೆ ಅರ್ಥವಾಗುತ್ತಿಲ್ಲ. ಎಲ್ಲವೂ ಕಾನೂನಿನ ಪ್ರಕಾರ ನಡೆಯುತ್ತಿದೆ ಮತ್ತು ಶೀಘ್ರವೇ ನ್ಯಾಯಾಲಯದಲ್ಲಿ ಸಾಬೀತಾಗಲಿದೆ.

ಎಲ್ಲರೂ ಇದನ್ನು ತಪ್ಪಾಗಿ ನೋಡುವುದನ್ನು ನಿಲ್ಲಿಸಬೇಕೆಂದು ನಾನು ವಿನಂತಿಸುತ್ತೇನೆ ಮತ್ತು ದಯವಿಟ್ಟು ಜಾಕ್ವೆಲಿನ್‍ಗೆ ಪ್ರೀತಿ ಬೆಂಬಲ ನೀಡಿ ಪ್ರೋತ್ಸಾಹಿಸಿ ಏಕೆಂದರೆ ಅವಳು ಏನನ್ನು ನಿರೀಕ್ಷಿಸದೇ ಪ್ರೀತಿಸಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ಪು ಜೊತೆ ಡ್ಯಾನ್ಸ್ ಕಾರ್ಯಕ್ರಮಕ್ಕೆ ಹೋಗಿದ್ದು, ನನ್ನ ಜೀವನದ ಮರೆಯಲಾಗದ ಕ್ಷಣ: ಅಲ್ಲು ಅರ್ಜುನ್

Share This Article
Leave a Comment

Leave a Reply

Your email address will not be published. Required fields are marked *