ಕರ್ನಾಟಕದಲ್ಲಿ ಯುಪಿ ಮಾಡೆಲ್ ಬೇಡವೇ ಬೇಡ: ಮೌಲ್ವಿ ಮಕ್ಸೂದ್ ಇಮ್ರಾನ್

By
1 Min Read

ಬೆಂಗಳೂರು: ಕರ್ನಾಟಕದಲ್ಲಿ ಉತ್ತರಪ್ರದೇಶ ಮಾಡೆಲ್ ಬೇಡವೇ ಬೇಡ ಎಂದು ಕೆಆರ್ ಮಾರುಕಟ್ಟೆ ಮೌಲ್ವಿ ಮಕ್ಸೂದ್ ಇಮ್ರಾನ್ ಹೇಳಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಆಪರೇಷನ್ ಬುಲ್ಡೋಜರ್ ಕರ್ನಾಟಕಕ್ಕೆ ಬೇಕಿಲ್ಲ. ಯುಪಿ, ಗುಜರಾತ್ ಯಾವ ಮಾಡೆಲ್ ಕೂಡ ನಮಗೆ ಬೇಡ. ಕರ್ನಾಟಕ ತನ್ನದೇ ಹೊಸ ಮಾಡೆಲ್ ತರಲಿ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಯೋಗಿ ತರಹ ಮೈ ಕೊಡವಿ ನಿಲ್ಲಿ ಬಸವರಾಜ್ ಬೊಮ್ಮಾಯಿ ಅವರೇ.. : ಪ್ರಮೋದ್ ಮುತಾಲಿಕ್

ಕಾಬಾ ಮೇಲೆ ಯಾವುದೇ ಬಾವುಟ ಆರಿಸುವಂತಿಲ್ಲ. ಸಾಮೂಹಿಕ ಪ್ರಾರ್ಥನೆ ದಿಕ್ಕು ಅಂತ ಕಾಬಾ ಪರಿಗಣಿಸ್ತೀರಾ.?. ಹಿಂದೂಗಳಿಗೆ ಗರ್ಭಗುಡಿ, ದೇವಾಲಯದಂತೆ ನಮಗೂ ಕಾಬಾ ಶ್ರೇಷ್ಠ ಭಾವನೆ ಇದೆ. ಗುಮ್ ಬಾದ ಹಜ್ರಾ ನಮಗೆ ಹಿಂದೂಗಳ ದೇವಾಲಯ ಗೋಪುರಕ್ಕೆ ಸಮ. ನಿಮ್ಮ ದೇವಾಲಯಗಳ ಭಾವನೆಯಂತೆ ನಮಗೂ ಇದೆ. ಅದನ್ನ ಕೆದಕಿದಾಗ ಗುಂಪುಗಳಲ್ಲಿ ಅಸಮಾಧಾನ ಇದ್ದಾಗ ಗಲಾಟೆ ಆಗಲಿದೆ ಎಂದರು.

ದೇವರ ಮೇಲೆ ರಕ್ತ ಹಾಕಿದ್ದರೆ ಎಷ್ಟು ತಪ್ಪೋ ಅಷ್ಟೇ ತಪ್ಪು ಈ ರೀತಿ ಬಾವುಟ ಹಾಕುವುದು. ಕೇಸರಿ ಬಣ್ಣ ಅಂತ ಬೇಸರ ಅಲ್ಲ ಯಾವ ಬಣ್ಣದ ಬಾವುಟ, ಬೇರೆ ಏನೇ ಹಾಕಿದ್ರೂ ತಪ್ಪೇ. ಗಲಾಟೆ ಮಾಡಿದ ಗುಂಪು ಸಹ ತಪ್ಪು ಮಾಡಿದೆ. ಯಾವುದೇ ಕಾರಣಕ್ಕೂ ತಪ್ಪನ್ನ ಕಾನೂನು ಮೂಲಕ ಹೋರಾಟ ಮಾಡಬೇಕು. ದೂರು ನೀಡಬೇಕು, ಮೌಲ್ವಿಗಳ ಗಮನಕ್ಕೆ ತರಬೇಕು. ಕಾನೂನು ಕೈಗೆ ತೆಗೆದುಕೊಳ್ಳುವುದು, ಪೊಲೀಸ್ ಠಾಣೆಗೆ ಕೈ ಹಾಕುವುದು ಅಕ್ಷಮ್ಯ ಎಂದು ಹೇಳಿದರು.

ಇದು ಪೂರ್ವ ನಿಯೋಜಿತ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದೆಲ್ಲ ಮತ್ತಷ್ಟು ಸುಳ್ಳು ಸಂಗತಿ. ಗಲಭೆಗಳ ನಿಯಂತ್ರಣಕ್ಕೆ ಎಲ್ಲ ಧರ್ಮಗುರುಗಳ ಒಂದು ಕಮಿಟಿ ಸರ್ಕಾರ ಮಟ್ಟದಲ್ಲಿ ಶೀಘ್ರ ಆಗಬೇಕಿದೆ ಎಂದು ತಿಳಿಸಿದರು. ಇದನ್ನೂ ಓದಿ: ಹಿಂದೂಗಳು ಹೆಚ್ಚು ಮಕ್ಕಳಿಗೆ ಜನ್ಮ ನೀಡಿ: ಸತ್ಯದೇವಾನಂದ ಸರಸ್ವತಿ

Share This Article
Leave a Comment

Leave a Reply

Your email address will not be published. Required fields are marked *