ಅಟ್ರಾಸಿಟಿ ಕಾನೂನಿನ ದುರುಪಯೋಗ ಬೇಡ, ತೊಂದರೆ ಕೊಡಲು ಬಳಸಬೇಡಿ : ಕೆಎನ್‌ ರಾಜಣ್ಣ

1 Min Read

ತುಮಕೂರು: ಇತ್ತಿಚಿನ ದಿನದಲ್ಲಿ ದಲಿತರಿಗಾಗಿ(Dalits) ಇರುವ ಅಟ್ರಾಸಿಟಿ (Atrocity Act) ಸೇರಿದಂತೆ ಕೆಲವು ಕಾನೂನುಗಳು ದುರುಪಯೋಗ ಪಡಿಸಿಕೊಳ್ಳುತ್ತಿರುವ ಬಗ್ಗೆ ಮಾಜಿ ಸಚಿವ ಕೆ ಎನ್ ರಾಜಣ್ಣ (KN Rajanna) ಬೇಸರ ಹೊರಹಾಕಿದ್ದಾರೆ.

ತುಮಕೂರಿನಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ಚರಕ ಚಾರಿಟಬಲ್ ಟ್ರಸ್ಟ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಲಿತ ಸಮುದಾಯದ ಯುವ ಸಮೂಹವೇ ಈ ಕಾನೂನನ್ನು ಹೆಚ್ಚು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಹೇಳಿದರು.

ದಲಿತರು ಬೇರೆ ಸಮುದಾಯದ ಪ್ರೀತಿ ವಿಶ್ವಾಸವನ್ನು ಗಳಿಸಬೇಕೇ‌ ಹೊರತು ನಮಗಾಗಿ ಇರುವ ಕಾನೂನನ್ನು ಬೇರೆಯವರಿಗೆ ತೊಂದರೆ ಕೊಡಲು ಬಳಸಬಾರದು. ನಮ್ಮ ಹಕ್ಕನ್ನು ನಾವು ಪ್ರತಿಪಾದನೆ ಮಾಡೋಣ. ಅದರೆ ಆ ದಿಕ್ಕಿನಲ್ಲಿ ನಮಗಾಗಿ ಇರುವಂತಹ ಕಾಯ್ದೆಯನ್ನು ತಿರುಚಿ, ಬೇರೆಯವರ ದ್ವೇಷವನ್ನು ಕಟ್ಟಿಕೊಳ್ಳುವ ರೀತಿಯ ಕೆಲಸ ಆಗಬಾರದು ಎಂದು ಕಿವಿ ಮಾತು ಹೇಳಿದರು. ಇದನ್ನೂ ಓದಿ: ಇರಾನ್ ಅಧ್ಯಕ್ಷರ ಕಚೇರಿ ಮೇಲೆ ದಾಳಿ – ಐಆರ್‌ಜಿಸಿ, ಹೆಜ್ಬುಲ್ಲಾ ಕಮಾಂಡರ್‌ಗಳು ಫಿನಿಶ್

ಇತ್ತಿಚಿಗೆ ಬಹಳಷ್ಟು ಜನ ಯುವಕರು ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ನಮ್ಮ ಗಮನಕ್ಕೆ ಬರುತ್ತಿದೆ. ಹೀಗಾದರೆ ಸಮಾಜದಲ್ಲಿ ಸಾಮರಸ್ಯ ಮೂಡಲು ಕಷ್ಟವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ರಾಜಣ್ಣ ಎಸ್‌ಟಿ ಸಮುದಾಯಕ್ಕೆ ಸೇರಿದವರಾದರೂ ಕಾನೂನು ದುರುಪಯೋಗದ ಬಗ್ಗೆ ಆಕ್ಷೇಪ ಹೊರಹಾಕಿದರು.
Share This Article