ಎಲ್ರೂ ಮೂಗ್ಮೇಲೆ ಬೆರಳಿಡುವಂತೆ ಜಿಎಸ್‍ಟಿ ಅರ್ಥ ಹೇಳಿದ ನಟ ಸುಶಾಂತ್ ಸಿಂಗ್!

By
1 Min Read

ನವದೆಹಲಿ: ರಾಜಧಾನಿಯಲ್ಲಿ ನಡೆದ `ಐಫಾ ಅವಾರ್ಡ್’ ಕಾರ್ಯಕ್ರದಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಜಿಎಸ್‍ಟಿ ಎಂದ್ರೇನು ಎಂಬ ಮಾಧ್ಯಮಗಳ ಪ್ರಶ್ನೆಗೆ `ನನಗೆ ಜಿಎಸ್‍ಟಿ ಬಗ್ಗೆ ಎಲ್ಲಾ ಗೊತ್ತು, ಆದರೆ ಅದರ ವಿಸ್ತೃತ ರೂಪ ಗೊತ್ತಿಲ್ಲ’ ಎಂದು ಹೇಳಿದ್ದಾರೆ.

https://www.instagram.com/p/BWH-7E9AORw/?taken-by=sushantsinghrajput&hl=en

ಈ ವೇಳೆ ಸುಶಾಂತ್ ಸಿಂಗ್ ಪಕ್ಕದಲ್ಲಿದ್ದ ನಟಿ ಕೃತಿ ಸನನ್ ಜಿಎಸ್‍ಟಿ ಯ ವಿಸ್ತೃತ ರೂಪವನ್ನು ಹೇಳಿದ್ದಾರೆ. ಕೇಂದ್ರ ಸರ್ಕಾರ ಜೂನ್ 30-ಜುಲೈ 1ರ ಮಧ್ಯರಾತ್ರಿ ಜಿಎಸ್‍ಟಿಯನ್ನು ಲೋಕಾರ್ಪಣೆ ಮಾಡಿದೆ. ಆದರೆ ಜಿಎಸ್‍ಟಿ ಬಗ್ಗೆ ಸಾಮನ್ಯ ಜನರಿಂದ ಹಿಡಿದು ಸೆಲೆಬ್ರೆಟಿಗಳಲ್ಲಿಯೂ ಗೊಂದಲಗಳಿವೆ.

ಸಂದರ್ಶನವೊಂದರಲ್ಲಿ ಶಾರುಖ್‍ಖಾನ್‍ಗೂ ಕೂಡ ಜಿಎಸ್‍ಟಿ ಬಗ್ಗೆ ಕೇಳಲಾಗಿತ್ತು, ಆದ್ರೆ ಶಾರುಖ್ ಮಾತ್ರ ಉತ್ತರ ನೀಡಿರಲಿಲ್ಲ. ಹೀಗೆಯೇ ಬಾಲಿವುಡ್ ಅನೇಕರು ಜಿಎಸ್‍ಟಿ ಬಗ್ಗೆ ಕೇಳಿದ ಪ್ರಶ್ನೆಗೆ ಕೇವಲ ಸ್ಮೈಲ್ ನೀಡಿ, ಪ್ರಶ್ನೆಯಿಂದ ತಪ್ಪಿಸಿಕೊಂಡಿದ್ದಾರೆ. ಸಕ್ರೀಯ ರಾಜಕಾರಿಣಿ ಹಾಗೂ ಬಾಲಿವುಡ್ ನಟ ಪರೇಶ್ ರಾವಲ್ ಸಹ ಜಿಎಸ್‍ಟಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿಲ್ಲ.

https://www.instagram.com/p/BWB9PSnAPRK/?taken-by=sushantsinghrajput&hl=en

ಸುಶಾಂತ್ ಸಿಂಗ್ ಮತ್ತು ಕೃತಿ ಅಭಿನಯದ `ರಬ್ತಾ’ ಸಿನಿಮಾದಲ್ಲಿ ಇಬ್ಬರು ನಟಿಸಿದ್ದು, ಸಿನಿಮಾ ತೆರೆಕಂಡು ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸಿಕೊಂಡಿತ್ತು. ಸದ್ಯ ಸುಶಾಂತ್ `ಚಂದಾಮಾಮಾ ದೂರ ಕೆ’ ಸಿನಿಮಾದಲ್ಲಿ ನಟಿಸುತ್ತಿದ್ದು, ಚಿತ್ರ ನವಾಜುದ್ದೀನ್ ಸಿದ್ದಿಕಿ ಸೇರಿದಂತೆ ದೊಡ್ಡ ತಾರಾಗಣವನ್ನು ಹೊಂದಿದೆ.

 

https://www.instagram.com/p/BF0302dix6D/?taken-by=shushantsinghrajput&hl=en

https://www.instagram.com/p/BU6RD-Xg3xw/?taken-by=sushantsinghrajput&hl=en

https://www.instagram.com/p/BU1lC4og3SS/?taken-by=sushantsinghrajput&hl=en

https://www.instagram.com/p/BUtSGrPALAb/?taken-by=sushantsinghrajput&hl=en

https://www.instagram.com/p/BUr5CCdAbDk/?taken-by=sushantsinghrajput&hl=en

https://www.instagram.com/p/BUWzTaGARFC/?taken-by=sushantsinghrajput&hl=en

https://www.instagram.com/p/BUWXgimA1uR/?taken-by=sushantsinghrajput&hl=en

https://www.instagram.com/p/BULidG6gHkr/?taken-by=sushantsinghrajput&hl=en

https://www.instagram.com/p/BTvSNrVAcND/?taken-by=sushantsinghrajput&hl=en

Share This Article
Leave a Comment

Leave a Reply

Your email address will not be published. Required fields are marked *