ನೀವು ಮತ್ತೆ ಬಾಯಿತೆಗೆದರೆ ಜನ ನಿಮಗೆ ಉಗೀತಾರೆ: ಮುತಾಲಿಕ್‌

Public TV
2 Min Read

ಉಡುಪಿ: ಹಿಜಬ್ ಹೋರಾಟಗಾರ್ತಿಯರಿಗೆ ಈಗಲೂ ಸಲಹೆ ನೀಡುತ್ತೇನೆ. ಒಂದು ಬಟ್ಟೆಯಿಂದ ಶಿಕ್ಷಣ ಅವಕಾಶದಿಂದ ವಂಚಿತರಾಗಬೇಡಿ. ನೀವು ಮತ್ತೆ ಹೋರಾಟ ಎಂದು ಬಾಯಿ ತೆಗೆದರೆ ಜನ ನಿಮಗೆ ಉಗೀತಾರೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿದ್ಯಾರ್ಥಿಗಳಿಗೆ ಎಚ್ಚರಿಸಿದ್ದಾರೆ.

pramod mutalik

ಉಡುಪಿಯಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಬಾಯಿಮುಚ್ಚಿ ಸುಮ್ಮನಿದ್ದರೆ ಉತ್ತಮ. ಹಿಜಬ್ ಹೋರಾಟಗಾರ್ತಿಯರು ಸಂಪೂರ್ಣವಾಗಿ ಹತಾಶರಾಗಿದ್ದಾರೆ. ರಾಜ್ಯದ ಎಲ್ಲ ಬೆಳವಣಿಗೆಗಳಿಗೆ ಈ ವಿದ್ಯಾರ್ಥಿನಿಯರೇ ಕಾರಣ. ಮುಸ್ಲಿಂ ವಿದ್ಯಾರ್ಥಿನಿಯರಿಗೆ ಸಂವಿಧಾನ, ನ್ಯಾಯಾಲಯ ಅಂತಿಮವೇ ಹೊರತು ಕುರಾನ್, ಶರಿಯತ್, ಬೈಬಲ್, ಭಗವದ್ಗೀತೆ ಅಂತಿಮವಲ್ಲ ಎಂದು ತಿಳಿವಳಿಕೆ ನೀಡಿದ್ದಾರೆ. ಇದನ್ನೂ ಓದಿ: ಅಪಾರ ಪ್ರಮಾಣದಲ್ಲಿ ಗೋಮಾಂಸ ರಫ್ತಾಗುತ್ತಿದ್ದರೂ ಪ್ರಧಾನಿ ಮೋದಿ ಮೌನವೇಕೆ? ಪ್ರಮೋದ್‌ ಮುತಾಲಿಕ್‌

pramod mutalik

ಸಂಘಟನೆಗಳು ನಿಮ್ಮನ್ನು ಬಲಿ ಕೊಡಲಿವೆ
ವಿದ್ಯಾರ್ಥಿಗಳೇ ನಿಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ, ನಿಮ್ಮ ಭವಿಷ್ಯಕ್ಕೆ ಕಲ್ಲು ಹಾಕಿಕೊಳ್ಳಬೇಡಿ, ನಿಮ್ಮ ಹಿಂದೆ ಇರುವಂತಹ ಪಿಎಫ್‌ಐ ಮತ್ತು ಸಿಎಫ್‌ಐ ಸಂಘಟನೆಗಳು ನಿಮ್ಮನ್ನು ಭಯಾನಕವಾಗಿ ಬಲಿಕೊಡಲಿವೆ. ನಿಮ್ಮ ಶಿಕ್ಷಣಕ್ಕೆ ಕಲ್ಲು ಹಾಕಲಿವೆ. ಎಲ್ಲವನ್ನೂ ಬಿಟ್ಟು ಪರೀಕ್ಷೆಗೆ ಹಾಜರಾಗಿ ನಿಮ್ಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಸಂತೋಷ್‍ನದ್ದು ಆತ್ಮಹತ್ಯೆಯೋ, ಕೊಲೆಯೋ? ಈಶ್ವರಪ್ಪ

ಬಾಯಿಮುಚ್ಚಿ ಸುಮ್ಮನಿರುವುದು ಒಳ್ಳೆಯದು
ಸಿಎಫ್‌ಐ, ಪಿಎಫ್‌ಐ ಕುಮ್ಮಕ್ಕು ಮುಸಲ್ಮಾನರಿಗೆ ಗೊತ್ತಾಗಿದೆ. ಮುಸಲ್ಮಾನರು, ಹಿಂದೂಗಳು ಚೀ.. ಥೂ.. ಅನ್ನುತ್ತಿದ್ದಾರೆ. ನ್ಯಾಯಾಲಯ ಕೂಡ ವಿದ್ಯಾರ್ಥಿಗಳ ಹೋರಾಟಕ್ಕೆ ಛೀಮಾರಿ ಹಾಕಿದೆ. ಈ ವಿದ್ಯಾರ್ಥಿಗಳು ಬಾಯಿ ಮುಚ್ಚಿ ಸುಮ್ಮನಿರುವುದು ಒಳ್ಳೆಯದು. ನೀವು ಮೌನವಾಗಿದ್ದಷ್ಟು ನಿಮ್ಮ ಮೇಲೆ ಸಮಾಜಕ್ಕೆ ಉತ್ತಮ ಭಾವನೆ ಬರುತ್ತದೆ. ನೀವು ಮತ್ತೆ ಬಾಯಿ ತೆರೆದರೆ ಜನ ನಿಮಗೇ ಉಗೀತಾರೆ ಎಂದು ಹೇಳಿದ್ದಾರೆ.

pramod mutalik

ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಹಿಂದೂ ಸಮಾಜದಿಂದ ಬರುತ್ತಿದೆ. ಮುಸಲ್ಮಾನರ ಅಹಂಕಾರಕ್ಕೆ ಹಿಂದೂ ಸಮಾಜದಿಂದ ಉತ್ತರಗಳು ಸಿಗುತ್ತಿವೆ. ಮುಸಲ್ಮಾನರ ಸೊಕ್ಕನ್ನು ಸಹನೆ ಮಾಡುವ ಹಿಂದೂ ಸಮಾಜ ಈಗ ಇಲ್ಲ. ಹಿಜಬ್ ಕೇಳಿದವರು ಬುರ್ಖಾ ಕೇಳ್ತಾರೆ, ನಾಳೆ ನಮಾಜಿಗೆ ಅವಕಾಶ ಕೊಡಿ ಅಂತಾರೆ, ನೀವು ಈ ದೇಶದ ಇಸ್ಲಾಮಿಕ್ ಭಾಗಗಳು. ನೀವು ಮಾತನಾಡಲು ಶುರು ಮಾಡಿದರೆ ಈ ಹೋರಾಟ ಮುಂದೆಯೂ ಬೆಳೆಯುತ್ತದೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *