– ಕೆಲ ಕ್ಷಣ ನಾನು ಸತ್ತೇ ಹೋಗಿದ್ದೇನೆ ಅನ್ನಿಸಿತ್ತು; ರಮೇಶ್
ಅಹಮದಾಬಾದ್: ಏರ್ ಇಂಡಿಯಾ (Air India) ವಿಮಾನ ದುರಂತದಲ್ಲಿ 40 ವರ್ಷದ ಬ್ರಿಟಿಷ್ ಪ್ರಜೆ ರಮೇಶ್ ವಿಶ್ವಾಸ್ ಕುಮಾರ್ (Ramesh Vishwas Kumar) ಅವರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಜೀವ ಉಳಿಸಿಕೊಂಡ ಅವರು, ಸೀಟ್ ಬೆಲ್ಟ್ ತೆಗೆದು ಎಮರ್ಜೆನ್ಸಿ ಬಾಲಿಗಿಲಿಂದ ಜಿಗಿದೆ ಎಂದು ದುರಂತದಿಂದ ಪಾರಾದ ಕ್ಷಣಗಳನ್ನು ವಿವರಿಸಿದ್ದಾರೆ.
ಅಹಮದಾಬಾದ್‌ನ ಸಾರ್ವಜನಿಕ ಆಸ್ಪತ್ರೆಯಲ್ಲಿ (Ahmedabad Civil Hospital)ಚಿಕಿತ್ಸೆ ಪಡೆಯುತ್ತಿರುವ ಅವರು ಮಾಧ್ಯಮಗಳೊಂದಿಗೆ ಘಟನೆಯಿಂದ ಪಾರಾದ ಬಗ್ಗೆ ಮಾಹಿತಿ ನೀಡಿದರು. ಪ್ರಧಾನಿ ಮೋದಿಯವರು ಘಟನೆ ಹೇಗೆ ಆಯ್ತು ಎಂದು ಕೇಳಿದರು. ನಾನು ಎಲ್ಲವನ್ನು ವಿವರಿಸಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ಪತನ – ದುರಂತದಲ್ಲಿ ಮಾರ್ಬಲ್ ವ್ಯಾಪಾರಿ ಪಿಂಕು ಮೋದಿ ಮಕ್ಕಳು ಸಾವು
ನನ್ನ ಕಣ್ಣ ಮುಂದೆಯೇ ಎಲ್ಲಾ ನಡೆದು ಹೋಯಿತು. ನಾನು ಬದುಕಿ ಬಂದಿರೋದು ಹೇಗೆ ಎಂದೇ ನನಗೆ ನಂಬಲು ಆಗ್ತಿಲ್ಲ. ಅಲ್ಲಿ ಕೆಲ ಕ್ಷಣ ನಾನು ಸತ್ತೇ ಹೋಗಿದ್ದೇನೆ ಎಂದು ಅನ್ನಿಸಿತ್ತು. ಆದರೆ ಕಣ್ಣು ಬಿಟ್ಟಾಗ ನಾನು ಬದುಕಿದ್ದೇನೆ ಎಂದು ಗೊತ್ತಾಯ್ತು ಎಂದು ಕರಾಳ ಕ್ಷಣವನ್ನು ಮೆಲುಕು ಹಾಕಿದ್ದಾರೆ. ಇದನ್ನೂ ಓದಿ: ಕನಸಿನ ಮನೆಗೆ ಕಾಲಿಡುವ ಮೊದಲೇ ಸಾವಿನ ಮನೆ ಸೇರಿದ ನರ್ಸ್ ರಂಜಿತಾ
ವಿಮಾನ ಟೇಕಾಫ್ ಆಗ್ತಿದ್ದಂತೆ ಏನೋ ಸಮಸ್ಯೆ ಆಗಿದೆ ಎಂದು ಗೊತ್ತಾಯ್ತು. 5ರಿಂದ 10 ಸೆಕೆಂಡ್ ವಿಮಾನ ಸ್ಟ್ರಕ್ ಆದಂತೆ ಅನ್ನಿಸಿತು. ವಿಮಾನದ ಒಳಗೆ ಹಸಿರು, ಬಿಳಿ ಬಣ್ಣದ ಲೈಟ್ ಆನ್ ಆಯ್ತು. ಕೆಲವೇ ಸೆಕೆಂಡ್‌ನಲ್ಲಿ ವಿಮಾನ ಕಟ್ಟಡಕ್ಕೆ ಡಿಕ್ಕಿಯಾಯ್ತು. ಬಳಿಕ ವಿಮಾನ ಕಟ್ಟಡದ ಮೇಲಿಂದ ಕೆಳಗೆ ಇಳಿದಿತ್ತು. ನಾನು ಸೀಟ್ ಬೆಲ್ಟ್ ತೆಗೆದು, ಎಮರ್ಜೆನ್ಸಿ ಬಾಗಿಲಿನ ಮೂಲಕ ನೆಲದ ಮೇಲೆ ಜಂಪ್ ಮಾಡಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ವಿಮಾನ ದುರಂತ ಸ್ಥಳಕ್ಕೆ ಪ್ರಧಾನಿ ಭೇಟಿ – ಅಹಮದಾಬಾದ್ ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಮೋದಿ
ನಾನು ಅಲ್ಲಿ ಸ್ವಲ್ಪ ಜಾಗ ಇದೆ ಅನ್ನೋದನ್ನು ನೋಡಿ ಜಿಗಿದೆ. ನಾನು ಹೊರಗೆ ಬರಲು ಟ್ರೈ ಮಾಡಿದೆ. ಅದೃಷ್ಟವಶಾತ್ ಹೊರಗೆ ಬಂದೆ. ಆದರೆ ಕಟ್ಟಡದ ಗೋಡೆ ಅಡ್ಡ ಇದ್ದಿದ್ದರಿಂದ ಬೇರೆ ಯಾರು ಹೊರಗೆ ಬರಲು ಆಗಿಲ್ಲ. ನಾನು ಹೇಗೆ ಬದುಕಿ ಬಂದೆ ಎಂಬುದೇ ನನಗೇ ಆಶ್ಚರ್ಯ. ಅಲ್ಲಿ ಬೆಂಕಿ ಹೊತ್ತಿಕೊಂಡಾಗ ನನ್ನ ಎಡಗೈ ಕೂಡ ಸುಡಲು ಆರಂಭಿಸಿತು. ಆಗ ನಾನು ಅಲ್ಲಿಂದ ಓಡಿ ಬಂದೆ. ಆಗ ಯಾರೋ ನನ್ನನ್ನು ಎಳೆದು ಅಂಬುಲೆನ್ಸ್‌ನಲ್ಲಿ ಕೂರಿಸಿದರು. ಈ ಆಸ್ಪತ್ರೆಯಲ್ಲಿ ಚೆನ್ನಾಗಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.