ಟ್ರೋಲ್‍ಗೆ ಕೇರ್ ಮಾಡ್ಬೇಡಿ- ವಿಧಾನಸಭೆಯಲ್ಲಿ ಸ್ಪೀಕರ್ ಕಿವಿಮಾತು

By
2 Min Read

– ಪ್ರದೀಪ್ ಈಶ್ವರ್ ಎಮೋಶನಲ್ ಭಾಷಣ

ಬೆಂಗಳೂರು: ಟ್ರೋಲ್ (Troll) ಮಾಡುವವರ ಬಗ್ಗೆ ತಲೆಕೆಡಿಸಕೊಳ್ಳಬೇಡಿ ಎಂದು ವಿಧಾನಸಭೆಯಲ್ಲಿ ಸ್ಪೀಕರ್ ಯು.ಟಿ ಖಾದರ್ (U.T Khader) ಕಿವಿಮಾತು ಹೇಳಿದ್ದಾರೆ.

ಶಾಸಕ ಪ್ರದೀಪ್ ಈಶ್ವರ್ (Pradeep Eshwar) ರಾಜ್ಯಪಾಲರ ಭಾಷಣ ವಂದನಾ ನಿರ್ಣಯದ ಮೇಲೆ ಮಾತನಾಡಲು ನಿಂತಾಗ ಸ್ಪೀಕರ್ ಕಿವಿಮಾತು ಹೇಳಿದ್ರು. ನಾನು ಈ ಸ್ಪೀಕರ್ ಸ್ಥಾನದಲ್ಲಿ ಕೂರಲು ಟ್ರೋಲ್ ಮಾಡಿದವರು ಕಾರಣ. ಅವರು ನಮ್ಮ ಬೆಳವಣಿಗೆಗೆ ಕಾರಣ ಆಗ್ತಾರೆ. ಹೊಸದಾಗಿ ಶಾಸಕರಾದಾಗ ಮಾತನಾಡುವುದು ಸಹಜ. ಹೆದರಿಕೆ ಬೇಡ ಧೈರ್ಯವಾಗಿ ಮಾತನಾಡಿ. ಆತ್ಮವಿಶ್ವಾಸದಿಂದ ಮಾತನಾಡಿ, ಸಂವಿಧಾನ ಬದ್ಧವಾಗಿ ಮಾತನಾಡಿ ಅಷ್ಟೇ. ಹೆಚ್ಚು ಕಡಿಮೆ ಆದರೆ ಏನೂ ತೊಂದರೆ ಇಲ್ಲ, ಇದು ಪರೀಕ್ಷೆ ಅಥವಾ ನ್ಯಾಯಾಲಯ ಅಲ್ಲ. ಫ್ರೀ ಆಫ್ ಮೈಂಡ್ ಅಲ್ಲಿ ಮಾತನಾಡಿ ಅಷ್ಟೇ ಅಂತಾ ಮೊದಲ ಬಾರಿ ಶಾಸಕರಿಗೆ ಮಾತನಾಡುವವರಿಗೆ ಸ್ಪೀಕರ್ ಸಲಹೆ ನೀಡಿದ್ರು.

ವಿಧಾನಸಭೆಯಲ್ಲಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ಅನ್ನಭಾಗ್ಯ ಶ್ರೀಮಂತರ ದೃಷ್ಟಿಯಿಂದ ರೇಷನ್ ಅಷ್ಟೇ. ಆದರೆ ನನ್ನಂತವನ ದೃಷ್ಟಿಯಲ್ಲಿ ಅನ್ನ ಅನ್ನೋದು ದೇವರು. ಗೃಹಜ್ಯೋತಿ ಯೋಜನೆ ಕೇವಲ ಮನೆಯನ್ನು ಬೆಳಗುತ್ತಿಲ್ಲ, ಕೋಟ್ಯಂತರ ಮಕ್ಕಳು ತಡರಾತ್ರಿಯವರೆಗೆ ಓದಲು ಸಹಾಯಕವಾಗಿದೆ. ಕನ್ನಡ ಮಾಧ್ಯಮದ ಶಾಲೆಗಳನ್ನು ಉಳಿಸಲು ಆದ್ಯತೆ ನೀಡಬೇಕಿದೆ ಅಂತೇಳಿದ್ರು. ಇದನ್ನೂ ಓದಿ: ಅಧಿವೇಶನದಲ್ಲಿ ಸಿದ್ದರಾಮಯ್ಯ ಪರ ಜಿಟಿಡಿ ಬ್ಯಾಟಿಂಗ್ – ಅನ್ನಭಾಗ್ಯಕ್ಕೆ ಜೈ ಎಂದ ಜೆಡಿಎಸ್ ಶಾಸಕ

ಇಂಗ್ಲೀಷ್ (Englih) ಇರೋದೇ ತಪ್ಪು ಮಾತನಾಡಲು, ಆದರೆ ಕನ್ನಡ ಇರೋದು ಸರಿಯಾಗಿ ಮಾತನಾಡಲು. ಬಡವರ ಮಕ್ಕಳು ಬೇಳಿಬೇಕು ಕಣ್ರಯ್ಯ ಅನ್ನುವ ಹಾಗೆ. ಬಡವರ ಮಕ್ಕಳು ವಿಧಾನಸೌಧಕ್ಕೆ ಬರೋದು ಸಾಧ್ಯವಾಗಿರೋದು ಸಂವಿಧಾನದಿಂದ. ನಮ್ಮ ಪಕ್ಷದ ನಾಯಕರು ನನ್ನಂತ ಬಡವರ ಮಗನನ್ನು ವಿಧಾನಸೌಧಕ್ಕೆ ಕಳುಹಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯ ಚಿಕಿತ್ಸಾ ಗುಣಮಟ್ಟ ಚೆನ್ನಾಗಿರುವಂತೆ ನೋಡಿಕೊಳ್ಳಬೇಕು. ಉತ್ತಮ ಚಿಕಿತ್ಸೆ ಸಿಗದೆ ನನ್ನ ಅಪ್ಪ – ಅಮ್ಮನನ್ನು ಕಳೆದುಕೊಂಡೆ. ಅಂತಹ ಸ್ಥಿತಿ ಯಾರಿಗೂ ಬರಬಾರದು. ಅದಕ್ಕಾಗಿ ಸರ್ಕಾರಿ ಆಸ್ಪತ್ರೆ ಉಳಿಸಬೇಕು ಅಂತೇಳಿದ್ರು.

ಸಿದ್ದರಾಮನಹುಂಡಿಯಲ್ಲಿ ಹುಟ್ಟಿದ ಸಿದ್ಧರಾಮಯ್ಯರಿಗೆ (Siddaramaiah) ಹಸಿವಿನ ಅನುಭವ ಇದೆ. ಅದಕ್ಕೆ ಅನ್ನಭಾಗ್ಯ ತಂದಿದ್ದಾರೆ. ಐಎಎಸ್ ಮತ್ತು ಮೆಡಿಕಲ್ ಓದಲು ಬರುವ ಕನ್ನಡ ಮಾಧ್ಯಮದವನ್ನು ಸರ್ಕಾರ ಆದ್ಯತೆ ಮೇಲೆ ಪರಿಗಣಿಸಬೇಕು. ಉನ್ನತ ಶಿಕ್ಷಣ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಗೆ ಮರಿಚೀಕೆ ಆಗಬಾರದು. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಅಂತಾ ಮನವಿ ಮಾಡಿದ್ರು.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್