ಸರ್ವೇಗೆ ಹೋದಾಗ ಬೆಂಗಳೂರಲ್ಲಿ ಕುರಿ, ಕೋಳಿ, ಚಿನ್ನ, ಫ್ರಿಡ್ಜ್ ಬಗ್ಗೆ ಪ್ರಶ್ನೆ ಕೇಳಬೇಡಿ: ಅಧಿಕಾರಿಗಳಿಗೆ ಡಿಸಿಎಂ ಮೌಖಿಕ ಸೂಚನೆ

Public TV
1 Min Read

ಬೆಂಗಳೂರು: ಗಣತಿ ಸರ್ವೇ (Caste Census) ವೇಳೆ ಕುರಿ, ಕೋಳಿ, ಚಿನ್ನ, ವಾಚ್ ಎಷ್ಟಿವೆ ಎಂದು ಕೇಳಬಾರದು. ಬೆಂಗಳೂರಲ್ಲಿ (Bengaluru) ಆ ರೀತಿ ಕೇಳಬಾರದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಪ್ರತಿಕ್ರಿಯಿಸಿದ ಅವರು, ನಿಮಗೆ ಏನು ಉತ್ತರ ಕೊಡಬೇಕೋ ಅದಕ್ಕೆ ಉತ್ತರ ಕೊಡಿ. ಕೊಡಬಾರದು ಅನ್ನಿಸಿದರೆ ಕೊಡಬಾರದು. ಎಷ್ಟು ವಾಚ್, ಎಷ್ಟು ಚಿನ್ನ ಇದೆ, ಎಷ್ಟು ಫ್ರಿಡ್ಜ್ ಇದೆ ಅದೆಲ್ಲ ಕೇಳಬೇಡಿ. ಅದು ಅವರ ಪರ್ಸನಲ್ ಬಿಟ್ಟು ಬಿಡಿ ಎಂದು ಅಧಿಕಾರಿಗಳಿಗೂ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ವಿಕಿಪೀಡಿಯಾಗೆ ಮಸ್ಕ್‌ ಸೆಡ್ಡು- 2 ವಾರದಲ್ಲಿ ಗ್ರೋಕಿಪೀಡಿಯಾ ಬಿಡುಗಡೆ

ಯಾರು ಬೇಕಾದರೂ ಅಪೇಕ್ಷೆಪಡಲಿ. ಕೋರ್ಟ್ ಹೇಳಿದೆ, ಏನು ಬೇಕೋ ಅದಕ್ಕೆ ಮಾತ್ರ ಉತ್ತರ ನೀಡಿ. ಆದರೆ ಸಮೀಕ್ಷೆ ವಿರೋಧ ಮಾಡೋದರಲ್ಲಿ ಅರ್ಥ ಇಲ್ಲ, ಎಲ್ಲರೂ ಭಾಗಿಯಾಗಬೇಕು. ಇಲಾಖೆಯವರು ಏನು ಮಾಡುತ್ತಾರೆ, ಮಾಡಲಿ. ಎಲ್ಲರೂ ಸಮೀಕ್ಷೆಯಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: 21 ಮದುವೆಯಾಗಿಲ್ಲ, ನನ್ನಿಂದ್ಲೇ 17 ಲಕ್ಷ ಹಣ ವಸೂಲಿ ಮಾಡಿದ್ದಾರೆ: ಪತ್ನಿ ಆರೋಪ ಸುಳ್ಳೆಂದ ಪತಿ

ಈ ನಡುವೆ ದಿಢೀರ್ ದೆಹಲಿಗೆ ತೆರಳಿದ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ, ನನ್ನದು ಖಾಸಗಿ ಕೆಲಸ ಇದೆ. ಡೆಲ್ಲಿಗೆ ಹೋಗಿ ನಾಳೆ ಬೆಳಗ್ಗೆ ವಾಪಸ್ ಬರುತ್ತೇನೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಡಾರ್ಜಿಲಿಂಗ್‌ನಲ್ಲಿ ಭಾರೀ ಮಳೆಗೆ ಭೂಕುಸಿತ; 14 ಮಂದಿ ಸಾವು – ಸಿಕ್ಕಿಂ ಸಂಪರ್ಕ ಕಡಿತ

Share This Article