ಟ್ರಂಪ್ ಬಿಗ್ ಬ್ಯೂಟಿಫುಲ್ ಬಿಲ್‌ಗೆ ಒಪ್ಪಿಗೆ – ಭಾರತೀಯರಿಗೂ ಕಾದಿದೆ ಆಘಾತ

By
2 Min Read

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮಹತ್ವಾಕಾಂಕ್ಷಿ ಪ್ರಮುಖ ತೆರಿಗೆ ಮಸೂದೆ ಒನ್ ಬಿಗ್ ಬ್ಯೂಟಿಫುಲ್ ಬಿಲ್ (One Big Beautiful Bill) ಅಮೆರಿಕ ಸಂಸತ್ತು ಕಾಂಗ್ರೆಸ್‌ನಲ್ಲಿ ಅಂಗೀಕಾರಗೊಂಡಿದೆ. ಈ ಮೂಲಕ ಟ್ರಂಪ್ ಗೆಲುವಿನ ನಗೆ ಬೀರಿದ್ದಾರೆ.

ಅಮೆರಿಕದ ಕಾಂಗ್ರೆಸ್ ಅತ್ಯಲ್ಪ ಅಂತರದಿಂದ ಪ್ರಮುಖ ತೆರಿಗೆ ಮಸೂದೆಯನ್ನು ಪಾಸ್ ಮಾಡಿದೆಯಾದರೂ ಈ ಬೆಳವಣಿಗೆ ಟ್ರಂಪ್‌ಗೆ ಪ್ರಮುಖ ರಾಜಕೀಯ ಗೆಲವು ಸಿಕ್ಕಿದೆ ಎಂದು ವಿಶ್ಲೇಷಿಸಲಾಗುತ್ತದೆ. ಇದೂವರೆಗೆ ಸಹಿ ಮಾಡಲಾದ ಮಸೂದೆಗಳ ಪೈಕಿ ಇದು ಅತಿದೊಡ್ಡ ಮಸೂದೆಯಾಗಿದೆ ಅಂತ ಟ್ರಂಪ್ ಬಣ್ಣಿಸಿದ್ದಾರೆ.

ಅಮೆರಿಕವು ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿದ್ದು, ನಾವು ಇದನ್ನು ಮತ್ತಷ್ಟು ಶಕ್ತಿಶಾಲಿಯನ್ನಾಗಿ ಮಾಡುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಶ್ವೇತಭವನ ಕೂಡ ಪ್ರತಿಕ್ರಿಯಿಸಿದ್ದು, ಅಮೆರಿಕದ ಸುವರ್ಣಯುಗ ಆರಂಭವಾಗಿದ್ದು, ಒನ್ ಬಿಗ್ ಬ್ಯೂಟಿಫುಲ್ ಬಿಲ್ ಅಧ್ಯಕ್ಷರ ಸಹಿಗಾಗಿ ಶೀಘ್ರದಲ್ಲೇ ವೈಟ್‌ಹೌಸ್‌ಗೆ ಬರಲಿದೆ ಎಂದಿದೆ. ಇದನ್ನೂ ಓದಿ: ಟ್ರಿನಿಡಾಡ್‌ನ ಸಾಂಪ್ರದಾಯಿಕ ಸೊಹರಿ ಎಲೆಯಲ್ಲಿ ಭೋಜನ ಸವಿದ ಪ್ರಧಾನಿ ಮೋದಿ

ಮಸೂದೆಯಲ್ಲಿ ಏನಿದೆ?
ಅಮೆರಿಕ ಸರ್ಕಾರದ ಬೊಕ್ಕಸ ತುಂಬಿಸುವ ಮಸೂದೆಯಾಗಿದ್ದು ಸರ್ಕಾರಿ ವೆಚ್ಚ ಇಳಿಸುವ ಉದ್ದೇಶ ಹೊಂದಿದೆ. ಟ್ರಂಪ್ ಅವಧಿಯಲ್ಲಿ ಉದ್ಯಮ ತೆರೆದವರಿಗೆ ತೆರಿಗೆ ಕಡಿತ ಮಾಡಲಾಗುತ್ತದೆ. ಆರೋಗ್ಯ ವಿಮೆ ಹೆಚ್ಚಿಸ್ತಿದ್ದು, 11.8 ಕೋಟಿ ಅಮೆರಿಕನ್ನರಿಗೆ ಸಂಕಷ್ಟವಾಗುವ ಸಾಧ್ಯತೆಯಿದೆ

ಒಟ್ಟು 5 ಟ್ರಿಲಿಯನ್ ಡಾಲರ್ ರಾಷ್ಟ್ರೀಯ ಸಾಲದ ಯೋಜನೆ ಇದಾಗಿದ್ದು ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಇತರೆ ದೇಶಗಳಿಗೆ ಅಮೆರಿಕದ ಸಹಾಯಧನ ಕಡಿತ ಆಗಲಿದೆ. ಆಹಾರ, ಆರೋಗ್ಯ, ಶಿಕ್ಷಣಕ್ಕೆ ನೀಡುವ ನೆರವಿಗೆ ಕತ್ತರಿ ಬೀಳಲಿದೆ. ಇದನ್ನೂ ಓದಿ: ಟ್ರಿನಿಡಾಡ್ ಪ್ರಧಾನಿಗೆ ಮಹಾಕುಂಭದ ಜಲ, ರಾಮಮಂದಿರದ ಪ್ರತಿಕೃತಿ ಉಡುಗೊರೆಯಾಗಿ ನೀಡಿದ ಮೋದಿ

ಭಾರತೀಯರಿಗೂ ಅಘಾತ
ಅಮೆರಿಕದಲ್ಲಿದ್ದು ಭಾರತಕ್ಕೆ (India) ಹಣ ಕಳಿಸಿದ್ರೆ 3.5% ಹೆಚ್ಚು ತೆರಿಗೆ ವಿಧಿಸಲಾಗುತ್ತಿದ್ದು ಅಂದಾಜು 10-12 ಲಕ್ಷ ಭಾರತೀಯರ ಮೇಲೆ ಪರಿಣಾಮ ಬೀರಲಿದೆ. ಶಿಕ್ಷಣಕ್ಕೆ ಅಮೆರಿಕಗೆ ಹೋದರೂ ಹೆಚ್ಚುವರಿ ತೆರಿಗೆ ಕಟ್ಟಬೇಕಾಗುತ್ತದೆ. ಭಾರತವಷ್ಟೇ ಅಲ್ಲ ಇತರೆ ದೇಶದ ವಲಸಿಗರಿಗೂ ಸಂಕಷ್ಟ ಆಗಲಿದೆ.

Share This Article