ಅಮೆರಿಕದ ಉತ್ಪನ್ನಗಳನ್ನು ಮಾತ್ರ ವೆನೆಜುವೆಲಾ ಖರೀದಿಸಬೇಕು: ಟ್ರಂಪ್‌ ಕಟ್ಟಪ್ಪಣೆ

1 Min Read

ವಾಷಿಂಗ್ಟನ್‌: ಅಧ್ಯಕ್ಷ ನಿಕೋಲಸ್ ಮಡುರೋ (Nicolas Maduro) ಅವರನ್ನು ಬಂಧಿಸಿದ ಬಳಿಕ ಸರ್ವಾಧಿಕಾರಿಯಂತೆ ಹೇಳಿಕೆ ನೀಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಈಗ ವೆನೆಜುವೆಲಾ (Venezuela) ಅಮೆರಿಕದ ಉತ್ಪನ್ನಗಳನ್ನು ಮಾತ್ರ ಖರೀದಿಸಬೇಕೆಂದು ಕಟ್ಟಪ್ಪಣೆ ಹೊರಡಿಸಿದ್ದಾರೆ.

ನಮ್ಮ ಹೊಸ ತೈಲ ಒಪ್ಪಂದದಿಂದ ಪಡೆಯುವ ಹಣದಿಂದ ವೆನೆಜುವೆಲಾ ಅಮೆರಿಕ ಉತ್ಪಾದನೆ ಮಾಡಿದ ಉತ್ಪನ್ನಗಳನ್ನು ಮಾತ್ರ ಖರೀದಿಸಬೇಕು ಎಂದು ಟ್ರಂಪ್‌ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?
ನಮ್ಮ ಹೊಸ ತೈಲ ಒಪ್ಪಂದದಿಂದ ಪಡೆಯುವ ಹಣದಿಂದ ವೆನೆಜುವೆಲಾ ಅಮೆರಿಕನ್ ನಿರ್ಮಿತ ಉತ್ಪನ್ನಗಳನ್ನು ಮಾತ್ರ ಖರೀದಿಸಲಿದೆ ಎಂದು ನನಗೆ ತಿಳಿಸಲಾಗಿದೆ. ಈ ಖರೀದಿಗಳಲ್ಲಿ ಅಮೇರಿಕನ್ ಕೃಷಿ ಉತ್ಪನ್ನಗಳು ಮತ್ತು ಅಮೇರಿಕನ್ ನಿರ್ಮಿತ ಔಷಧಗಳು, ವೈದ್ಯಕೀಯ ಸಾಧನಗಳು ಮತ್ತು ವೆನೆಜುವೆಲಾದ ಎಲೆಕ್ಟ್ರಿಕ್ ಗ್ರಿಡ್ ಮತ್ತು ಇಂಧನ ಸೌಲಭ್ಯಗಳನ್ನು ಸುಧಾರಿಸಲು ಉಪಕರಣಗಳು ಸೇರಿವೆ. ವೆನೆಜುವೆಲಾ ಅಮೆರಿಕದದೊಂದಿಗೆ ತಮ್ಮ ಪ್ರಮುಖ ಪಾಲುದಾರರಾಗಿ ವ್ಯವಹಾರ ಮಾಡಲು ಬದ್ಧವಾಗಿದೆ. ಇದು ಬುದ್ಧಿವಂತ ಆಯ್ಕೆಯಾಗಿದ್ದು ಇದರಿಂದ ವೆನೆಜುವೆಲಾ ಮತ್ತು ಅಮೆರಿಕದ ಜನರಿಗೆ ತುಂಬಾ ಒಳ್ಳೆಯದು ಎಂದಿದ್ದಾರೆ. ಇದನ್ನೂ ಓದಿ: ರಷ್ಯಾ ಧ್ವಜವಿದ್ದ ತೈಲ ಟ್ಯಾಂಕರ್ ವಶಪಡಿಸಿಕೊಂಡ ಅಮೆರಿಕ

ಈ ಮೊದಲು ವೆನೆಜುವೆಲಾದಲ್ಲಿರುವ ಮಧ್ಯಂತರ ಸರ್ಕಾರ ಉತ್ತಮ ಗುಣಮಟ್ಟದ 30 ಮಿಲಿಯನ್‌ನಿಂದ 50 ಮಿಲಿಯನ್ ಬ್ಯಾರೆಲ್‌ ಕಚ್ಚಾ ತೈಲವನ್ನು (Crude Oil) ಮಾರುಕಟ್ಟೆ ಬೆಲೆಯಲ್ಲಿ ನಮಗೆ ಮಾರಾಟ ಮಾಡಲಿದೆ. ವೆನೆಜುವೆಲಾ ಮತ್ತು ಅಮೆರಿಕದ ಜನರ ಪ್ರಯೋಜನಕ್ಕೆ ಈ ಹಣವನ್ನು ಬಳಸಲಾಗುತ್ತದೆ ಟ್ರಂಪ್‌ ಹೇಳಿದ್ದರು.
Share This Article