ವಾಷಿಂಗ್ಟನ್: ಭಾರತವು (India) ರಷ್ಯಾದಿಂದ (Russia) ತೈಲ (Oil) ಆಮದು ಮಾಡಿಕೊಳ್ಳುವುದನ್ನು ಸಂಪೂರ್ಣವಾಗಿ ನಿಲ್ಲಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಪುನರುಚ್ಚರಿಸಿದ್ದಾರೆ.
ಏರ್ ಫೋರ್ಸ್ ಒನ್‌ನಲ್ಲಿ ವರದಿಗಾರರೊಂದಿಗೆ ಟ್ರಂಪ್ ಮಾತನಾಡಿದ್ದಾರೆ. ಈ ವೇಳೆ, ಭಾರತವು ತನ್ನ ರಷ್ಯಾದ ತೈಲ ಖರೀದಿಯನ್ನು ಕಡಿತಗೊಳಿಸುತ್ತಿದೆ. ಚೀನಾ ರಷ್ಯಾದ ತೈಲ ಖರೀದಿಯನ್ನು ಗಣನೀಯವಾಗಿ ಕಡಿತಗೊಳಿಸುತ್ತಿದೆ ಎಂದಿದ್ದಾರೆ. ಇದೇ ವೇಳೆ ರಷ್ಯಾದ ತೈಲ ಕಂಪನಿಗಳಾದ ರೋಸ್ನೆಫ್ಟ್ ಮತ್ತು ಲುಕೋಯಿಲ್ ಮೇಲಿನ ಹೊಸ ನಿರ್ಬಂಧಗಳನ್ನು ಅವರು ಉಲ್ಲೇಖಿಸಿ ಮಾತನಾಡಿದ್ದಾರೆ. ಇದನ್ನೂ ಓದಿ: ವ್ಯಾಪಾರ ಬೆದರಿಕೆ ಹಾಕಿ ಭಾರತ-ಪಾಕಿಸ್ತಾನ ಯುದ್ಧ ನಿಲ್ಲಿಸಿದೆ: ಟ್ರಂಪ್
ವ್ಯಾಪಾರ, ತಂತ್ರಜ್ಞಾನ ಮತ್ತು ಕಚ್ಚಾ ವಸ್ತುಗಳ ಪ್ರವೇಶದ ಕುರಿತು ವಾಷಿಂಗ್ಟನ್ ಮತ್ತು ಚೀನಾ ನಡುವೆ ಘರ್ಷಣೆ ನಡೆಯುತ್ತಿದೆ. ಇದರ ನಡುವೆ ಏಷ್ಯಾ ಪ್ರವಾಸದ ಭಾಗವಾಗಿ ದಕ್ಷಿಣ ಕೊರಿಯಾದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಟ್ರಂಪ್ ಭೇಟಿಯಾಗಲಿದ್ದಾರೆ. ಅವರ ನಿಗದಿತ ಭೇಟಿಗೂ ಮನ್ನವೇ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗೆ ಟ್ರಂಪ್ ವರದಿಗಾರರೊಂದಿಗೆ ಮಾತನಾಡುತ್ತಾ, ವರ್ಷಾಂತ್ಯದ ವೇಳೆಗೆ ರಷ್ಯಾದೀಂದ ತೈಲ ಖರೀದಿಯನ್ನು ನಿಲ್ಲಿಸುವುದಾಗಿ ಭಾರತ ಭರವಸೆ ನೀಡಿದೆ. ಈ ಪ್ರಕ್ರಿಯೆಗೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದಿದ್ದರು.
ಇದರ ನಡುವೆ ಟ್ರಂಪ್ ಹೇಳಿಕೆಗಳನ್ನು ಭಾರತ ನಿರಂತರವಾಗಿ ತಿರಸ್ಕರಿಸುತ್ತಾ ಬಂದಿದೆ. ಅಲ್ಲದೇ ನಮ್ಮ ಇಂಧನ ನೀತಿಯು ಸ್ವತಂತ್ರವಾಗಿ ಉಳಿದಿದೆ. ಕಚ್ಚಾ ತೈಲ ಆಮದಿನ ಬಗ್ಗೆ ನಿರ್ಧಾರಗಳನ್ನು ರಾಷ್ಟ್ರೀಯ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳಲಾಗುತ್ತದೆ ಎಂದು ಕೇಂದ್ರ ಸರ್ಕಾರ ಒತ್ತಿ ಹೇಳಿದೆ. ಇದನ್ನೂ ಓದಿ: ʻಒಂದ್ ಸಲ ಕಮಿಟ್ ಆದ್ರೆ ತನ್ನ ಮಾತ್ ತಾನೇ ಕೇಳಲ್ಲʼ – ಜಾಹೀರಾತಿನಿಂದ ಸಿಟ್ಟಿಗೆದ್ದ ಟ್ರಂಪ್, ಕೆನಡಾ ಮೇಲೆ ಹೆಚ್ಚುವರಿ 10% ಸುಂಕ
