ವೆನೆಜುವೆಲಾದ ಮೇಲೆ ಏರ್‌ಸ್ಟೈಕ್‌, ಅಧ್ಯಕ್ಷ ಸೆರೆ: ಟ್ರಂಪ್‌ ಘೋಷಣೆ

2 Min Read

ವಾಷಿಂಗ್ಟನ್‌: ವೆನೆಜುವೆಲಾದ (Venezuela) ಅಧ್ಯಕ್ಷ ನಿಕೋಲಸ್ ಮಡುರೊ (Venezuelan President Nicolas Maduro) ಮತ್ತು ಅವರ ಪತ್ನಿಯನ್ನು ಸೆರೆಹಿಡಿಯಲಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ವೆನೆಜುವೆಲಾದ ಮೇಲೆ ಏರ್‌ಸ್ಟ್ರೈಕ್‌( USA Airstrike) ಮಾಡಿದ ಬಳಿ ತಮ್ಮ ಟ್ರೂಥ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಪ್ರಕಟಿಸಿದ್ದಾರೆ.

ಅಮೆರಿಕವು ವೆನೆಜುವೆಲಾ ವಿರುದ್ಧ ದೊಡ್ಡ ಪ್ರಮಾಣದ ದಾಳಿ ನಡೆಸಿ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಸೆರೆಹಿಡಿದು ದೇಶದಿಂದ ಹೊರಗೆ ಕಳುಹಿಸಿದೆ. ಈ ಕಾರ್ಯಾಚರಣೆಯನ್ನು ಅಮೆರಿಕದ ಕಾನೂನು ಜಾರಿ ಸಂಸ್ಥೆಯೊಂದಿಗೆ ಯಶಸ್ವಿಯಾಗಿ ನಡೆಸಲಾಯಿತು. ವಿವರಗಳನ್ನು ಮುಂದೆ ತನ್ನ ಫ್ಲೋರಿಡಾದಲ್ಲಿರುವ ಮಾರ್-ಎ-ಲಾಗೊದಲ್ಲಿ ನಿವಾಸದಲ್ಲಿ ತಿಳಿಸಲಾಗುವುದು ಎಂದು ಹೇಳಿದ್ದಾರೆ.  ಇದನ್ನೂ ಓದಿ: ʻನೊಬೆಲ್‌ ಶಾಂತಿ ಪ್ರಶಸ್ತಿʼಯನ್ನ ಟ್ರಂಪ್‌ಗೆ ಅರ್ಪಿಸಿದ ವೆನೆಜುವೆಲಾದ ಕೊರಿನಾ ಮಚಾದೋ

 

ಶನಿವಾರ ನಸುಕಿನ ಜಾವ ವೆನೆಜುವೆಲಾ ಕಾಲಮಾನ 2 ಗಂಟೆಯ ವೇಳೆಗೆ ರಾಜಧಾನಿ ಕ್ಯಾರಕಾಸ್‌(Caracas) ಮೇಲೆ ಅಮೆರಿಕದ ವಾಯುಸೇನೆ ಏರ್‌ಸ್ಟ್ರೈಕ್‌ ಮಾಡಿದೆ. ಕನಿಷ್ಠ 7 ದೊಡ್ಡ ಸ್ಫೋಟಗಳು ಸಂಭವಿಸಿದ್ದು ರಾಜಧಾನಿಯಲ್ಲಿ ಈಗ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಹಲವು ಯುದ್ಧ ವಿಮಾನಗಳನ್ನು ಬಳಸಿ ಅಮೆರಿಕ ಈ ದಾಳಿ ನಡೆಸಿದೆ.

ವೆನೆಜುವೆಲಾದ ರಕ್ಷಣಾ ಸಚಿವ ವ್ಲಾಡಿಮಿರ್ ಪ್ಯಾಡ್ರಿನೊ ಲೋಪೆಜ್ ಅವರ ಮನೆಯನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆದಿದೆ. ರಾಜಧಾನಿ ಕ್ಯಾರಕಾಸ್‌ನ ಉತ್ತರದಲ್ಲಿರುವ ಲಾ ಗುಯಿರಾ ಬಂದರು ಮೇಲೆಯೂ ಬಾಂಬ್ ದಾಳಿ ನಡೆದಿದೆ.  ಇದನ್ನೂ ಓದಿ: ನೈಜೀರಿಯಾದಲ್ಲಿ ಕ್ರೈಸ್ತರ ನರಮೇಧ – ಉಗ್ರರ ಮೇಲೆ ಅಮೆರಿಕ ಬಾಂಬ್‌ ದಾಳಿ

ಟ್ರಂಪ್‌ಗೆ ಸಿಟ್ಯಾಕೆ?
ಮಾದಕವಸ್ತು ಭಯೋತ್ಪಾದನೆ ಮತ್ತು ಮಾದಕವಸ್ತು ಕಳ್ಳಸಾಗಣೆಗೆ ವೆನೆಜುವೆಲಾ ಸಹಕಾರ ನೀಡುತ್ತಿದೆ ಎಂದು ಟ್ರಂಪ್‌ ಮೊದಲಿಂದಲೂ ಆರೋಪಿಸುತ್ತಾ ಬಂದಿದ್ದಾರೆ.

ಆರ್ಥಿಕ ನೀತಿಯಿಂದ ದಿವಾಳಿಯಾಗಿರುವ ವೆನೆಜುವೆಲಾವನ್ನು ಮಡುರೊ ಆಡಳಿತ ನಡೆಸುತ್ತಿದ್ದಾರೆ. ಮಡುರೊ ಸರ್ವಾಧಿಕಾರಿಯಾಗಿ ವರ್ತನೆ ತೋರುತ್ತಿದ್ದಾರೆ. ಅಷ್ಟೇ ವೆನೆಜುವೆಲಾ ರಷ್ಯಾ, ಚೀನಾ, ಇರಾನ್‌ ಜೊತೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇದು ಅಮೆರಿಕ ಕೆಂಗಣ್ಣಿಗೆ ಕಾರಣವಾಗಿದೆ.

ಮಡುರೊ ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದರೆ ನಾವು ದಾಳಿ ಮಾಡುತ್ತೇವೆ ಎಂದು ಟ್ರಂಪ್‌ ಎಚ್ಚರಿಕೆ ನೀಡಿದ್ದರು. ಈ ಎಚ್ಚರಿಕೆಯ ಬೆನ್ನಲ್ಲೇ ಟ್ರಂಪ್‌ ವೆನೆಜುವೆಲಾ ವಿರುದ್ಧ ಏರ್‌ಸ್ಟ್ರೈಕ್‌ ಮಾಡಿಸಿದ್ದಾರೆ.

Share This Article