ಸಮೃದ್ಧವಾದ ಯುರೇನಿಯಂ ಹಸ್ತಾಂತರಿಸಲು ಇರಾನ್‌ ಒಪ್ಪಿದೆ: ಟ್ರಂಪ್‌

1 Min Read

– ಶೀಘ್ರವೇ ಇರಾನ್‌-ಯುಎಸ್ ಶಾಂತಿ ಒಪ್ಪಂದ ಆಗುತ್ತೆ ಎಂದ‌ ಅಮೆರಿಕ ಅಧ್ಯಕ್ಷ

ವಾಷಿಂಗ್ಟನ್‌: ಇರಾನ್ (Iran) ತನ್ನಲ್ಲಿ ಸಮೃದ್ಧವಾಗಿರುವ ಯುರೇನಿಯಂ (Uranium) ಹಸ್ತಾಂತರಿಸಲು ಒಪ್ಪಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಿಳಿಸಿದ್ದಾರೆ. ಯುದ್ಧ ಕೊನೆಗೊಳ್ಳುವ ಸಮಯ ಹತ್ತಿರದಲ್ಲಿದೆ ಎಂದು ಹೇಳಿದ್ದಾರೆ.

ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಅವರು ನಮಗೆ ಪರಮಾಣು ಧೂಳನ್ನು ಹಿಂತಿರುಗಿಸಲು ಒಪ್ಪಿಕೊಂಡಿದ್ದಾರೆ. ನಾವು ಒಪ್ಪಂದ ಮಾಡಿಕೊಳ್ಳಲು ಉತ್ತಮ ಅವಕಾಶವಿದೆ ಎಂದು ಟ್ರಂಪ್‌ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್‌ ಫೋನ್‌ ಕಾಲ್‌ – ಹಾರ್ಮುಜ್‌ನಲ್ಲಿ ಭದ್ರತಾ ಕಾಳಜಿ ಕುರಿತು ಚರ್ಚೆ

ಅಮೆರಿಕ ಮತ್ತು ಇರಾನ್ ಅತ್ಯಂತ ಯಶಸ್ವಿ ಮಾತುಕತೆ ನಡೆಸುತ್ತಿವೆ. ಒಪ್ಪಂದವಾದರೆ ತೈಲ ಸಮಸ್ಯೆ ಬಗೆಹರಿಯುತ್ತದೆ. ಹಾರ್ಮುಜ್ ಜಲಸಂಧಿ ಮುಕ್ತವಾಗಿ ಎಲ್ಲವೂ ಚೆನ್ನಾಗಿರುತ್ತದೆ ಎಂದು ಟ್ರಂಪ್‌ ಆಶಯ ವ್ಯಕ್ತಪಡಿಸಿದ್ದಾರೆ.

ಕಳೆದ ವಾರಾಂತ್ಯದಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆದ 21 ಗಂಟೆಗಳ ಶಾಂತಿ ಮಾತುಕತೆಯಲ್ಲಿ ಅಮೆರಿಕ ಮತ್ತು ಇರಾನ್ ಒಪ್ಪಂದಕ್ಕೆ ಬರಲು ವಿಫಲವಾಗಿದ್ದವು. ಪರಮಾಣು ಶಸ್ತ್ರಾಸ್ತ್ರ ಹೊಂದಬಾರದು ಎಂಬ ಅಮೆರಿಕದ ಷರತ್ತನ್ನು ಆಗ ಒಪ್ಪಿಕೊಳ್ಳಲು ಇರಾನ್‌ ನಿರಾಕರಿಸಿತ್ತು. ಇದನ್ನೂ ಓದಿ: ಖಾಲಿ ಚೆಕ್ ಆಫರ್‌ ನೀಡಿ ವಿಪಕ್ಷಗಳನ್ನು ಪೇಚಿಗೆ ಸಿಲುಕಿಸಿದ ಮೋದಿ

Share This Article