ರಣ್‌ವೀರ್ ಸಿಂಗ್, ಕಿಯಾರಾ ಸಿನಿಮಾದ ಚಿತ್ರೀಕರಣಕ್ಕೆ ಮುಹೂರ್ತ ಫಿಕ್ಸ್

Public TV
1 Min Read

ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ (Kiara Advani) ಅವರು ರಣ್‌ವೀರ್ ಸಿಂಗ್ (Ranveer Singh) ಹೊಸ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಡಾನ್-3 (Don 3) ಚಿತ್ರದ ಶೂಟಿಂಗ್ ಯಾವಾಗ ಎಂಬುದಕ್ಕೆ ಇದೀಗ ಮಾಹಿತಿ ಸಿಕ್ಕಿದೆ. ಇದನ್ನೂ ಓದಿ:ಬಿಗ್ ಬಾಸ್ ವಿನ್ನರ್ ವಿರುದ್ಧ ED ಕೇಸ್ ದಾಖಲು

ರಣ್‌ವೀರ್ ‌(Ranveer Singh) ಮತ್ತು ಕಿಯಾರಾ ಜೋಡಿಯ ಹೊಸ ಚಿತ್ರಕ್ಕೆ ಫರ್ಹಾನ್ ಅಖ್ತರ್ ನಿರ್ದೇಶನ ಮಾಡಲಿದ್ದಾರೆ. ಶೂಟಿಂಗ್‌ಗಾಗಿ ಲಂಡನ್‌ನಲ್ಲಿ ಸ್ಥಳಗಳ ಹುಡುಕಾಟದಲ್ಲಿದೆ ಚಿತ್ರತಂಡ. ಈಗಾಗಲೇ ಚಿತ್ರಕಥೆ ಸಿದ್ಧವಾಗಿದ್ದು, ಮುಂದಿನ ಫೆಬ್ರವರಿಯಿಂದ ಶೂಟಿಂಗ್‌ಗೆ ಚಾಲನೆ ನೀಡಲು ನಿರ್ಧರಿಸಿದ್ದಾರೆ.

ಫರ್ಹಾನ್ ಅಖ್ತರ್ ಸದ್ಯ ಬೇರೇ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ಬಳಿಕ ರಣ್‌ವೀರ್ ಸಿಂಗ್ ಜೊತೆಗಿನ ಡಾನ್-3 ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಗುಡ್ ನ್ಯೂಸ್

ಇತ್ತ ರಣ್‌ವೀರ್ ಮತ್ತು ಕಿಯಾರಾ ಕೂಡ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಒಪ್ಪಿಕೊಂಡಿರುವ ಚಿತ್ರದ ಶೂಟಿಂಗ್ ಮುಗಿದ ನಂತರ ಫರ್ಹಾನ್ ನಿರ್ದೇಶನದ ಚಿತ್ರಕ್ಕೆ ಸಾಥ್ ನೀಡಲಿದ್ದಾರೆ.

Share This Article