ಕತ್ತಲೆಯಾಗುತ್ತಿದ್ದಂತೆ ತೆರೆದುಕೊಳ್ಳುತ್ತೆ ಬೆತ್ತಲೆ ಜಗತ್ತು..!

Public TV
2 Min Read

-ರೋಡ್‍ನಲ್ಲೇ ನಡೆಯುತ್ತೆ ವೇಶ್ಯಾವಾಟಿಕೆ ವ್ಯವಹಾರ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವೇಶ್ಯಾವಾಟಿಕೆ ದಂಧೆ ಎಗ್ಗಿಲ್ಲದೆ ರಾಜಾರೋಷವಾಗಿ ನಡೆಯುತ್ತಿದೆ. ಈ ದಂಧೆಯಲ್ಲಿ ಭಾಗಿಯಾಗಿರುವ ಮಂದಿ ನಡುರಸ್ತೆಗಳಲ್ಲೇ ವ್ಯವಹಾರ ಮಾಡಿ, ಹೇಗೆ ಗ್ರಾಹಕರನ್ನು ಟ್ರಾಪ್ ಮಾಡುತ್ತಾರೆ ಎಂಬುವುದು ಪಬ್ಲಿಕ್ ಟಿವಿ ರಹಸ್ಯ ಕಾರ್ಯಚರಣೆಯಲ್ಲಿ ಬಯಲಾಗಿದೆ.

ಹೌದು, ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ, ಮಾಜಿ ಮಂತ್ರಿಗಳ ನಿವಾಸಗಳಿರೋ ಹೈಟೆಕ್ ಏರಿಯದಲ್ಲಿ ಈ ವೇಶ್ಯಾವಾಟಿಕೆ ದಂಧೆ ರಾಜಾರೋಷವಾಗಿ, ಯಾರ ಭಯವಿಲ್ಲದೇ ನಡೆಯುತ್ತಿದೆ. ಈ ದಂಧೆಗೆ ಪೊಲೀಸರ ಶ್ರೀ ರಕ್ಷೆ ಕೂಡ ಇದೆ ಎನ್ನಲಾಗುತ್ತಿದ್ದು, ಈ ಬಗ್ಗೆ ಗೊತ್ತಿದ್ದರು ಪೊಲೀಸರು ಮಾತ್ರ ಸುಮ್ಮನೆ ಕಂಡುಕಾಣದವರ ರೀತಿ ಇರುತ್ತಾರೆ.

ರಾಜಧಾನಿಯಲ್ಲಿ ಹೈಟೆಕ್ ಏರಿಯಾ ಅಂತಾನೇ ಪೇಮಸ್ ಆಗಿರೋ ಡಾಲರ್ಸ್ ಕಾಲೋನಿಯಲ್ಲಿ, ನ್ಯೂ ಬಿಇಎಲ್ ರೋಡ್ ನಲ್ಲಿ ರಾಜರೋಷವಾಗೇ ಸೆಕ್ಸ್ ಧಂದೆ ನಡೆಯುತ್ತಿದೆ. ಆದ್ರೆ ಯಾರು ಅದನ್ನ ಪ್ರಶ್ನೆ ಮಾಡುತ್ತಿಲ್ಲ, ಪೊಲೀಸರು ರೋಲ್ ಕಾಲ್ ತೆಗೆದುಕೊಂಡು ಸುಮ್ಮನಾಗಿದ್ದಾರೆ ಅನ್ನೋ ವಿಚಾರ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ರಹಸ್ಯ ಕಾರ್ಯಚರಣೆಗೆ ಮುಂದಾಗಿತ್ತು. ಈ ವೇಳೆ ಪಬ್ಲಿಕ್ ಟಿವಿ ನಡೆಸಿರೋ ಸ್ಟಿಂಗ್ ಅಪರೇಷನ್ ನಲ್ಲಿ ನ್ಯೂ ಬಿಇಎಲ್ ರೋಡ್ ನ ಸೆಕ್ಸ್ ಕರ್ಮಕಾಂಡ ಬಯಲಾಗಿದೆ.

ಅಷ್ಟೇ ಅಲ್ಲದೆ ಯಾವ ಭಯವಿಲ್ಲದೆ ವ್ಯವಹಾರವನ್ನ ನಡುರಸ್ತೆಯಲ್ಲಿಯೇ ಈ ಮಂದಿ ಕುದುರಿಸುತ್ತಾರೆ. ರಸಹ್ಯ ಕಾರ್ಯಚರಣೆ ಮಾಡುವಾಗ ಸೆಕ್ಸ್ ವರ್ಕರ್ ಗೆ ಒಂದು ಕರೆ ಬಂದಿತ್ತು. ಪೋನ್ ಮೂಲಕವೂ ಇವರ ದಂಧೆ ಹೇಗೆ ನಡೆಯುತ್ತಿದೆ ಅನ್ನೋದಕ್ಕೆ ಆ ಸೆಕ್ಸ್ ವರ್ಕರ್‍ಗೆ ಬಂದ ಕರೆಯೇ ಸಾಕ್ಷಿ. ಇನ್ನೂ ಅವರ ಬಳಿ ಎಷ್ಟು ಜನ ಇದ್ದಾರೆ? ಅವರ ಜಾಗಗಳು ಯಾವುದು? ಯಾರಿಗೆಲ್ಲ ಇವರಿಂದ ಹಣ ಹೊಗ್ತಿದೆ ಅಂತ ಕೇಳಬೇಕು ಅನ್ನೋಷ್ಟರಲ್ಲಿ ಒಂದು ಹೊಯ್ಸಳ ವಾಹನ ಬಂದು ತಮ್ಮ ನಂಬರ್ ಕೊಟ್ಟು ಕಾಲ್ ಮಾಡು ಅಂತ ಹೇಳಿದ್ದಾರೆ. ಬಳಿಕ ಅಲ್ಲಿಂದ ಯಾವ ಭಯವಿಲ್ಲದೆ ಪೊಲೀಸರ ಮುಂದೆಯೇ ಆ ಸೆಕ್ಸ್ ವರ್ಕರ್ಸ್ ಗ್ಯಾಂಗ್ ಮುಂದೆ ಹೊಗಿದ್ದಾರೆ.

ಡಾಲರ್ಸ್ ಕಾಲೋನಿಯ ನ್ಯೂ ಬಿಇಎಲ್ ರೋಡ್‍ನ ಹೈಟೆಕ ದಂಧೆ ಇದಾಗಿದ್ದು, ಬೆಂಗಳೂರಿನಲ್ಲಿ ಸೆಕ್ಸ್ ಧಂದೆ ಯಾವ ರೀತಿ ಬೇರೆ ಬೇರೆ ಮಾರ್ಗಗಳಲ್ಲಿ ಆಗ್ತಿದೆ ಅನ್ನೋ ರಿಯಾಲಿಟಿ ಚಕ್ ಮಾಡಲು ಪಬ್ಲಿಕ್ ಟಿವಿ ಮುಂದಾಗಿತ್ತು. ಇದು ಇನ್ನೂ ಭಯಂಕರವಾದ ಸೆಕ್ಸ್ ದಂಧೆ. ಇನ್ನೂ ಹಲವು ವೆಬ್ ಪೇಜ್ ಗಳಲ್ಲಿ ಸಾವಿರಾರು ಸೆಕ್ಸ್ ವರ್ಕರ್ಸ್ ಗಳ ನಂಬರ್ ಗಳು ಸಿಗುತ್ತಿದೆ. ಅವರಿಗೆ ಕರೆ ಮಾಡಿದರೇ ಸಿಗುತ್ತೆ ಸೆಕ್ಸ್ ಸರ್ವಿಸ್ ಅಂತಾರೇ, ಹೋದರೆ ಮಾತ್ರ ನಿಮ್ಮ ಹಣ ಫುಲ್ ಖಾಲಿ ಮಾಡಿ ಕಳುಹಿಸ್ತಾರೆ.

ಸೆಕ್ಸ್ ಸರ್ವೀಸ್ ಅಂತಾ ಆನ್ ಲೈನ್‍ನಲ್ಲಿ ನಂಬರ್ ತಗೊಂಡು ಹೋದರೆ ನಿಮ್ಮ ಕತೆ ಮುಗಿತು. ಅವರು ಹೇಳೋ ಜಾಗಕ್ಕೆ ಹೋದರೆ ನಿಮ್ಮನ್ನ ಹೆದರಿಸಿ ಬೆದರಿಸಿ ಇರೋ ಬರೋ ಹಣವನ್ನ ವಸೂಲಿ ಮಾಡಿ ಕಳಿಸ್ತಾರೆ. ಬೆಂಗಳೂರಿನ ನಾನಾ ಭಾಗಗಳಲ್ಲಿ ಇತಂಹ ಆನ್ ಲೈನ್ ಸೆಕ್ಸ್ ಸರ್ವಿಸ್ ದಂಧೆ ನಡೆಯುತ್ತಿದೆ. ಅದರಲ್ಲೂ, ಕೆ.ಆರ್ ಪುರಂ ಬಳಿಯ ಟಿಸಿ ಪಾಳ್ಯ, ಸರ್ಜಪುರ ಮೈನ್ ರೋಡ್‍ನ ದೊಮ್ಮ ಸಂದ್ರ, ಬನ್ನೇರಘಟ್ಟದ ಕೋಳಿ ಫಾರಂ, ಕೆಂಗೇರಿ, ಕೋರಮಂಗಲ, ಇಂದ್ರನಗರ ಸೇರಿದಂದೆ ಹಲವು ಕಡೆ ಈ ದಂಧೆ ನಡೆಯುತ್ತಿದೆ.

https://www.youtube.com/watch?v=Kspy5HhzR1c

Share This Article
Leave a Comment

Leave a Reply

Your email address will not be published. Required fields are marked *