ಪ್ರೀತಿಯ ನಾಯಿಗೆ ಅದ್ಧೂರಿ ಸೀಮಂತ

Public TV
1 Min Read

ಬಳ್ಳಾರಿ: ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಮಾಡೋದು ಪದ್ಧತಿ. ಆದ್ರೆ ಬಳ್ಳಾರಿಯಲ್ಲಿ ಪ್ರೀತಿಯಿಂದ ಸಾಕಿದ ನಾಯಿಗಳಿಗೂ ಸಹ ಅದ್ದೂರಿಯಾಗಿ ಸೀಮಂತ ಕಾರ್ಯಕ್ರಮ ಮಾಡಿದ್ದಾರೆ.

ಬಳ್ಳಾರಿಯ ವಂದನಾ ಶಾಲೆಯಲ್ಲಿ ಸಾಕಿ ಬೆಳೆಸಿದ ಸ್ವೀಟಿ ಹಾಗೂ ಪಂಡೂ ಅನ್ನೋ ನಾಯಿಗಳಿಗೆ ಗರ್ಭಿಣಿಯರಿಗೆ ಸೀಮಂತ ಮಾಡೋ ರೀತಿಯಲ್ಲೆ ಅದ್ಧೂರಿಯಾಗಿ ಕಾರ್ಯ ಮಾಡಿದ್ದಾರೆ. ಈ ಸೀಮಂತ ಕಾರ್ಯದಲ್ಲಿ ನೂರಾರು ಮಹಿಳೆಯರು ಭಾಗವಹಿಸಿ ಸ್ವೀಟಿ ಹಾಗೂ ಪಂಡೂಗೆ ಆರತಿ ಮಾಡಿ ಹರಸಿ ಹಾರೈಸಿದ್ದಾರೆ.

ಕಾರ್ಯಕ್ಕೆ ಬಂದವರಿಗೆಲ್ಲಾ ಭರ್ಜರಿ ಊಟದ ವ್ಯವಸ್ಥೆ ಮಾಡಿದ್ದು ಮತ್ತೊಂದು ವಿಶೇಷವಾಗಿತ್ತು. ಸೀಮಂತ ಕಾರ್ಯದಲ್ಲಿ ಸ್ಥಳೀಯ ಮಹಿಳೆಯರು ಮತ್ತು ಮಕ್ಕಳು ಸಹ ಭಾಗವಹಿಸಿದ್ದರು. ನಾಯಿಗಳ ಮುಂದೆ ವಿವಿಧ ತಿನಿಸುಗಳನ್ನು ಇಟ್ಟು ಆರತಿ ಮಾಡಲಾಯಿತು.

ಬೆಂಗಳೂರಿನಲ್ಲಿ ಅರುಣ್ ಎಂಬವರು ತಮ್ಮ ನೆಚ್ಚಿನ ನಾಯಿಯ ತಿಥಿಯನ್ನು ಮಾಡಿದ್ದರು. ಅರುಣ್ 17 ವರ್ಷಗಳಿಂದಲೂ ಸಿಂಧೂ ಹೆಸರಿನ ನಾಯಿಯನ್ನು ಸಾಕಿದ್ದರು. 12 ಜುಲೈ 1999 ರಲ್ಲಿ ಜನಿಸಿದ ಸಿಂಧೂ,ಶಸ 17 ಜುಲೈ 2017 ರಲ್ಲಿ ಸಾವನ್ನಪ್ಪಿತ್ತು. ಅದರ ನೆನಪಿಗಾಗಿ ಅರುಣ್ ಈ ಪುಣ್ಯ ತಿಥಿ ಕಾರ್ಯವನ್ನು ಮಾಡಿದ್ದರು. ಸಂಪ್ರದಾಯ ಬದ್ಧವಾಗಿ, ವಿಧಿವಿಧಾನಗಳ ಮೂಲಕ ನಾಯಿಯ ಒಂದು ವರ್ಷದ ಪುಣ್ಯ ತಿಥಿಯನ್ನು ಅರುಣ್ ಮಾಡಿದ್ದಾರೆ. ವಿಶೇಷ ಏನೆಂದರೆ 100 ಕ್ಕೂ ಹೆಚ್ಚು ಜನರಿಗೆ ಅರುಣ್ ಊಟ ಹಾಕಿ ಪ್ರೀತಿಯ ನಾಯಿಯ ಪುಣ್ಯಸ್ಮರಣೆಯನ್ನು ಕೈಗೊಂಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *