ಕೊಪ್ಪಳ: ರಾಜ್ಯದಲ್ಲಿ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ (Social Media) ಮೊಟ್ಟೆ ಸೇವನೆ ಆರೋಗ್ಯಕ್ಕೆ ಹಾನಿಕರ, ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿದೆ ಎಂದು ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ. ಈ ಹಿನ್ನೆಲೆ ಮೊಟ್ಟೆ ತಿನ್ಬೇಕಾ.. ಬೇಡ್ವಾ? ಅಂತ ಜನರು ಗೊಂದಲದಲ್ಲಿದ್ದಾರೆ. ಆದ್ರೆ ರಾಜ್ಯದಲ್ಲಿಯೇ ಅತಿ ಹೆಚ್ಚು ಮೊಟ್ಟೆ ಉತ್ಪಾದನೆ ಮಾಡುವ ಜಿಲ್ಲೆಗಳ ಪೈಕಿ 2ನೇ ಸ್ಥಾನ ಪಡೆದ ಕೊಪ್ಪಳ ಜಿಲ್ಲೆಯಲ್ಲಿ, ಈ ಬಗ್ಗೆ ವಸ್ತುಸ್ಥಿತಿ ಹೇಗಿದೆ? ಅನ್ನೋದರ ಬಗ್ಗೆ ʻಪಬ್ಲಿಕ್ ಟಿವಿʼ (Public TV) ರಿಯಾಲಿಟಿ ಚೆಕ್ ಮಾಡಿದೆ.
ಮೊಟ್ಟೆ ಅಂದ್ರೆ ಅದು ಪ್ರೋಟಿನ್ ಯುಕ್ತ ಆಹಾರವಾಗಿದೆ. ಆಸ್ಪತ್ರೆಗೆ ಹೋದ್ರೆ ವೈದ್ಯರು ಸಹ ಮೊಟ್ಟೆ ಸೇವನೆ ಮಾಡಬೇಕು ಅಂತ ಹೇಳ್ತಾರೆ. ಆದ್ರೆ ಮೊಟ್ಟೆ ಸೇವಿಸಿದ್ರೆ ನಿಮಗೆ ಕ್ಯಾನ್ಸರ್ ಬರತ್ತೆ ಅನ್ನೋ ವದಂತಿಗೆ ಜನರು ಬೆಚ್ಚಿ ಬಿದ್ದಿದ್ರು. ಹೀಗಾಗಿ ಕೊಪ್ಪಳ ನಗರದ (Koppala City) ಕೋಳಿ ಫಾರ್ಮ್‌ಗಳಲ್ಲಿ ಈ ಬಗ್ಗೆ ಕೇಳಿದ್ರೆ ಅಂತಹ ಯಾವುದೇ ಸಮಸ್ಯೆ ಇಲ್ಲ ಅಂತಿದ್ದಾರೆ. ಇದನ್ನೂ ಓದಿ: ಬಿಜೆಪಿ ಕಚೇರಿ ಬಳಿ ಸಿಹಿ ಹಂಚಿದ್ದ ಯೂಥ್ ಕಾಂಗ್ರೆಸ್ ಕಾರ್ಯಕರ್ತರು ವಶಕ್ಕೆ
ಹೌದು. ಸೋಶಿಯಲ್ ಮೀಡಿಯಾಗಳಲ್ಲಿ ಮೊಟ್ಟೆಯ ಬಗ್ಗೆ ಸುಳ್ಳು ವದಂತಿ ಹಬ್ಬಿಸಿದ್ದಾರೆ. ಆದ್ರೆ ಮೊಟ್ಟೆ ವ್ಯಾಪಾರದಲ್ಲಿ ಯಾವುದೇ ಪರಿಣಾಮ ಬೀರಿಲ್ಲ, ಮೊಟ್ಟೆ ಉತ್ಪಾದನೆ ಮಾಡೋವಾಗ ನಾವು ಯಾವುದೇ ರಾಸಾಯನಿಕಗಳನ್ನ ಬಳಕೆ ಮಾಡಲ್ಲ. ಕೇವಲ ಕಾಳುಗಳನ್ನೆ ಫೀಡ್ ಮಾಡ್ತಿವಿ, ಮೊಟ್ಟೆಯಲ್ಲಿ ಯಾವುದೇ ಕ್ಯಾನ್ಸರ್ ಕಾರಕ ಅಂಶಗಳು ಇಲ್ಲ ಎಂದು ಮೊಟ್ಟೆ ಫಾರ್ಮ್‌ನ ಮಾಲೀಕ ಸ್ವರೂಪ್ ರೆಡ್ಡಿ ಹೇಳಿದ್ದಾರೆ. ಇದನ್ನೂ ಓದಿ: ಭದ್ರಾ ಮೇಲ್ದಂಡೆ, ನರೇಗಾ, ಜಲಜೀವನ್ ಮಿಷನ್ ಬಾಕಿ ಅನುದಾನ ಬಿಡುಗಡೆ ಮಾಡದ ಕೇಂದ್ರವನ್ನ ದಿವಾಳಿ ಅನ್ನಬಹುದೇ?: ಡಿಕೆಶಿ
ಕೊಪ್ಪಳ ಜಿಲ್ಲೆಯಲ್ಲಿ 28 ಕೋಳಿ ಫಾರ್ಮ್‌ಗಳಿವೆ. 40 ಲಕ್ಷಕ್ಕೂ ಅಧಿಕ ಮೊಟ್ಟೆ ಉತ್ಪಾದನೆ ಮಾಡಲಾಗುತ್ತೆ. ಇದು ಕರ್ನಾಟಕದಲ್ಲಿ ಅತಿ ಹೆಚ್ಚು ಮೊಟ್ಟೆ ಉತ್ಪಾದನೆಯಲ್ಲಿ 2ನೇ ಸ್ಥಾನ ಪಡೆದಿದೆ. ಸದ್ಯ ಈ ಸುಳ್ಳು ವದಂತಿಯಿಂದ ಜನರು ಗೊಂದಲಕ್ಕೆ ಉಂಟಾಗಿದ್ದಾರೆ. ಆದ್ರೆ ಸದ್ಯ ಕೋಳಿ ಫಾರ್ಮ್ ಮಾಲೀಕರು ಇದೆಲ್ಲವನ್ನ ತಳ್ಳಿಹಾಕಿದ್ದಾರೆ. ಜೊತೆಗೆ ಈ ಬಗ್ಗೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳನ್ನ ಕೇಳಿದ್ರೆ, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿರೋ ಈ ಸುದ್ದಿ ಸಂಪೂರ್ಣ ಸುಳ್ಳು ಎಂದಿದ್ದಾರೆ. ಇದನ್ನೂ ಓದಿ: ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳ ಕಲ್ಲಿದ್ದಲು ಕಳ್ಳತನ – ರೈಲ್ವೇ ಅಧಿಕಾರಿಗಳ ತಂಡದಿಂದ ಪರಿಶೀಲನೆ
ಒಟ್ಟಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ವದಂತಿಯಿಂದ, ಸಾಕಷ್ಟು ಜನರು ಗೊಂದಲದಲ್ಲಿದ್ದಾರೆ ಆದ್ರೆ ಸದ್ಯ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಹಿನ್ನೆಲೆ ಮೊಟ್ಟೆಗೆ ಹೆಚ್ಚಿನ ಬೇಡಿಕೆ ಬರ್ತಾಯಿದೆ. ಫಾರ್ಮ್ ಮಾಲೀಕರಿಗೆ ಬೇಡಿಕೆಗೆ ತಕ್ಕಂತೆ ಸಪ್ಲೈ ಮಾಡಲು ಸಾಧ್ಯ ವಾಗ್ತಿಲ್ಲ, ಜೊತೆಗೆ ಮೊಟ್ಟೆಯ ರೇಟ್ ಕೂಡಾ ಹೆಚ್ಚಾಗಿದೆ. ಈ ಹಿನ್ನೆಲೆ ಜನರು ಆತಂಕ ಪಡದೇ, ಮೊಟ್ಟೆ ಸೇವನೆ ಮಾಡಬಹುದು ಎಂದು ಫಾರ್ಮ್ ಮಾಲೀಕರು ಹಾಗೂ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.



