ಮಗುವಿನ ಎದೆಗೂಡಿನ ಪಕ್ಕದಲ್ಲಿದ್ದ ಎಲುಬಿನ ಬಾಲ ತೆಗೆದುಹಾಕಿದ ವೈದ್ಯರು

Public TV
1 Min Read

ಭುವನೇಶ್ವರ: ಮಗುವಿನ ಎದೆಗೂಡಿನ ಪಕ್ಕದಲ್ಲಿದ್ದ ಎಲುಬಿನ ಬಾಲವನ್ನು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಿದ್ದಾರೆ.

ಒಡಿಶಾದ ಮಗುವಿನ ಬೆನ್ನುಹುರಿಯಲ್ಲಿ ಬಾಲದ ರೀತಿ ಮೂಳೆ ಕಾಣಿಸಿಕೊಂಡಿತ್ತು. ಅದನ್ನು ವೈದ್ಯರು ಗುರುವಾರ ಗುರುತಿಸಿ ವಿಶ್ವದಲ್ಲೇ ಮೊದಲಬಾರಿಗೆ ಎದೆಗೂಡಿನ ಬಳಿ ಮೂಳೆ ಬಾಲ ಇರುವುದು ದಾಖಲಾಗಿದೆ ಎಂದು ಹೇಳಿದ್ದರು. ಈ ಹಿನ್ನೆಲೆ ಮುಂದೆ ಮಗುವಿನ ಈ ಬಾಲದಿಂದ ಸಮಸ್ಯೆಯಾಗುತ್ತೆ ಎಂದು ವೈದ್ಯರು ಪೋಷಕರಿಗೆ ತಿಳಿಸಿದ್ದಾರೆ. ಪರಿಣಾಮ ಭುವನೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಮಗುವಿನ ಮೂಳೆ ಬಾಲವನ್ನು ತೆಗೆಯಲಾಗಿದೆ.

ಶಸ್ತ್ರಚಿಕಿತ್ಸೆ ನಡೆಸಿದ ಡಾ.ಅಶೋಕ್ ಕುಮಾರ್ ಈ ಕುರಿತು ಪ್ರತಿಕ್ರಿಯಿಸಿದ್ದು, ನವಜಾತ ಶಿಶುವಿಗೆ ಬೆನ್ನುಹುರಿಯ ವೈಪರೀತ್ಯವು ಬೆನ್ನಿನ ಮೇಲ್ಭಾಗದಲ್ಲಿ ಬಾಲ ಮತ್ತು ಕೋಕ್ಸಿಜಿಯಲ್(ಟೈಲ್‍ಬೋನ್) ಪ್ರದೇಶದಲ್ಲಿ ಚರ್ಮದ ಸೈನಸ್ ಪಿಟ್ ಅನ್ನು ಹೊಂದಿತ್ತು. ವಿಶ್ವದಲ್ಲೇ ಇದೇ ಮೊದಲಬಾರಿಗೆ ಮಾನವನಲ್ಲಿ ಮೂಳೆಯ ಬಾಲ ಕಂಡುಬಂದಿರುವ ಏಕೈಕ ಪ್ರಕರಣವಾಗಿದೆ ಎಂದು ಹೇಳಿದರು. ಇದನ್ನೂ ಓದಿ:  4.50 ಕೋಟಿ ರೂ. ಹಳೆಯ ಕರೆನ್ಸಿಯೊಂದಿಗೆ ಸಿಕ್ಕಿಬಿದ್ದ 6 ಮಂದಿ ವಶ

ಪ್ರಸ್ತುತ ಒಡಿಶಾದಲ್ಲಿ ಜನಿಸಿದ ಮಗುವಿನ ಎದೆಗೂಡಿನ ಪ್ರದೇಶದಲ್ಲಿದ್ದ ಮೂಳೆ ಬಾಲವನ್ನು ವೈದ್ಯರು ತೆಗೆದುಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *