ಶೀಘ್ರವೇ 2ನೇ ಬೂಸ್ಟರ್ ಡೋಸ್? – ಕೇಂದ್ರ ಆರೋಗ್ಯ ಸಚಿವರಿಗೆ ವೈದ್ಯಾಧಿಕಾರಿಗಳ ಡಿಮಾಂಡ್

By
1 Min Read

ನವದೆಹಲಿ: ನೆರೆಯ ರಾಷ್ಟ್ರ ಚೀನಾದಲ್ಲಿ (China) ಕೋವಿಡ್-19 (Covid-19) ಪ್ರಕರಣಗಳು ಹಠಾತ್ತನೆ ಏರಿಕೆ ಕಾಣುತ್ತಿರುವುದರಿಂದ ಭಾರತದಲ್ಲಿ (India) ಮತ್ತೊಂದು ಅಲೆಯ ಭೀತಿಯನ್ನು ಹುಟ್ಟುಹಾಕಿದೆ. ಇದೀಗ ಕೇಂದ್ರ ಸರ್ಕಾರ ಕಟ್ಟುನಿಟ್ಟಾದ ಮಾರ್ಗಸೂಚಿಗಳು ಹಾಗೂ ಸಲಹೆಗಳನ್ನು ನೀಡುವ ಮೂಲಕ ಸೋಂಕು ಹರಡುವಿಕೆ ವಿರುದ್ಧ ಹೋರಾಡಲು ಸಜ್ಜಾಗಿದೆ.

ಭಾರತದಲ್ಲಿ ಕೊರೊನಾ (Corona) ಹರಡುವುದನ್ನು ತಡೆಗಟ್ಟುವ ಪ್ರಯತ್ನದಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಭಾರತೀಯ ವೈದ್ಯಕೀಯ ಸಂಘದ (IMA) ವೈದ್ಯರು ಹಾಗೂ ಆರೋಗ್ಯ ತಜ್ಞರೊಂದಿಗೆ ಸಭೆ ನಡೆಸಿದ್ದಾರೆ. ಕೋವಿಡ್ ಮತ್ತೆ ಭಾರತಕ್ಕೆ ಪ್ರವೇಶಿಸಿದರೆ ಅದರ ಹರಡುವಿಕೆಯನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಚರ್ಚೆಯ ವೇಳೆ ವೈದ್ಯಾಧಿಕಾರಿಗಳು ದೇಶದಲ್ಲಿ ಕೋವಿಡ್ ಪರಿಸ್ಥಿತಿಯನ್ನು ತಡೆಗಟ್ಟಲು ಕೋವಿಡ್-19 ಲಸಿಕೆಯ 2ನೇ ಬೂಸ್ಟರ್ ಡೋಸ್‌ಗೆ ಅನುಮತಿ ನೀಡುವಂತೆ ಮನ್ಸುಖ್ ಮಾಂಡವಿಯಾ ಅವರನ್ನು ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಕೊರೊನಾ ಭೀತಿಗೆ ಶಿಕ್ಷಣ ಇಲಾಖೆ ಅಲರ್ಟ್- ಶಾಲಾ-ಕಾಲೇಜುಗಳಲ್ಲಿ ಕೆಲ ನಿಯಮ ಜಾರಿಗೆ ಚಿಂತನೆ

ವರದಿಗಳ ಪ್ರಕಾರ, ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್ ಅನ್ನು ನೀಡಲು 1 ವರ್ಷದ ಹಿಂದೆ ಪ್ರಾರಂಭಿಸಲಾಯಿತು. ಸಮಯ ಕಳೆದಂತೆ ಲಸಿಕೆಯ ಪ್ರತಿರಕ್ಷೆ ಕ್ಷೀಣಿಸುವುದರಿಂದ ಅಪಾಯದಲ್ಲಿರುವ ಜನರಿಗೆ, ವಿಶೇಷ ವೈದ್ಯರಿಗೆ, ನರ್ಸ್‌ಗಳಿಗೆ, ಇತರ ಆಸ್ಪತ್ರೆ ಸಿಬ್ಬಂದಿಗೆ 4ನೇ ಮುನ್ನೆಚ್ಚರಿಕಾ ಲಸಿಕೆಯನ್ನು ಪಡೆಯಲು ಅನುಮತಿ ನೀಡುವಂತೆ ಸಚಿವರನ್ನು ಕೇಳಲಾಗಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ದೇಶದಲ್ಲಿ ಕೋವಿಡ್‌ನ ಹೊಸ ರೂಪಾಂತರಗಳು ಹರಡುವುದನ್ನು ತಡೆಯಲು ಜನನಿಬಿಡ ಸ್ಥಳಗಳು ಹಾಗೂ ಹಲವಾರು ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್‌ಗಳ ಬಳಕೆಯನ್ನು ಕಡ್ಡಾಯಗೊಳಿಸಬೇಕೆಂದು ವೈದ್ಯರು ಸೂಚಿಸಿದ್ದಾರೆ. ಮಾಸ್ಕ್ ಕಡ್ಡಾಯವನ್ನು ಕಟ್ಟುನಿಟ್ಟಾಗಿ ಹೇರಬೇಕು ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಇದನ್ನೂ ಓದಿ: 8 ತಿಂಗಳು ಬಂದ್ ಆಗಲಿದೆ ತಿರುಪತಿಯ ಗರ್ಭಗುಡಿ!

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *