ನಾಳೆ ಪತ್ನಿಯ ಸಹೋದರಿಯನ್ನು ಮದುವೆಯಾಗಬೇಕಿದ್ದ ವೈದ್ಯನ ಹತ್ಯೆ

1 Min Read

ಕಾರವಾರ: ಮೃತ ಪತ್ನಿಯ ಸಹೋದರಿಯನ್ನೇ ವಿವಾಹವಾಗಲು (Marriage) ಸಿದ್ದವಾಗಿದ್ದ ವೈದ್ಯನನ್ನು ಬರ್ಬರವಾಗಿ ಹತ್ಯೆ (Murder) ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಕೆಹೆಚ್‌ಬಿ ಕಾಲೋನಿಯಲ್ಲಿ ನಡೆದಿದೆ.

ಡಾ. ರಮೇಶ್ ಕಲಗುಟಕರ್ (51) ಹತ್ಯೆಯಾದ ವೈದ್ಯ. ಕಳೆದ ಎಂಟು ತಿಂಗಳ ಹಿಂದೆ ಇವರ ಪತ್ನಿ ಮೃತಪಟ್ಟಿದ್ದರು. ದಂಪತಿಯ ಇಬ್ಬರು ಗಂಡು ಮಕ್ಕಳ ಪೈಕಿ ಓರ್ವ ವೈದ್ಯನಾಗಿದ್ದರೆ ಮತ್ತೊಬ್ಬ ಎಂಜಿನಿಯರಿಂಗ್‌ ಓದುತ್ತಿದ್ದಾನೆ. ಇದನ್ನೂ ಓದಿ: ತುಮ್ಹಾರ ಫೋನ್ ನಂಬರ್ ದೇದೋ ಎಂದ ಯುವಕನಿಗೆ ಚಪ್ಪಲಿಯಿಂದ ಹೊಡೆದ ಮಹಿಳೆ

 

ತನ್ನ ಮನೆಯಲ್ಲಿ ವಾಸವಿದ್ದ ರಮೇಶ್‌ ಪತ್ನಿಯ ಸಹೋದರಿಯನ್ನೇ ಸೋಮವಾರ(ಏ.20) ವಿವಾಹವಾಗಬೇಕಿತ್ತು. ಬ್ಯಾಂಕ್‌ನಿಂದ ಮನೆಯಲ್ಲಿ ಮದುವೆಗಾಗಿ ಬಂಗಾರದ ಒಡವೆಗಳನ್ನ ತಂದಿದ್ದ ಇವರನ್ನು ಯಾರೋ ಹತ್ಯೆ ಮಾಡಿದ್ದಾರೆ.

ಸಿಪಿಐ ಶಶಿಕಾಂತ ವರ್ಮಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article