ಠಾಣೆಯಲ್ಲಿ ಪವಿತ್ರಾ ಗೌಡ ಕುಸಿದು ಬಿದ್ದಿದ್ದು ಲೋ ಬಿಪಿಯಿಂದ: ವೈದ್ಯೆ

Public TV
1 Min Read

ಬೆಂಗಳೂರು: ಕಿಡ್ನಾಪ್‌ ಹಾಗೂ ಕೊಲೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಪವಿತ್ರಾ ಗೌಡ (Pavithra Gowda) ಅವರು ಇಂದು ಲೋ ಬಿಪಿಯಿಂದಾಗಿ ಕುಸಿದು ಬಿದ್ದಿರುವುದಾಗಿ ವೈದ್ಯೆ ಸವಿತಾ ಹೇಳಿದ್ದಾರೆ.

ಪವಿತ್ರಾ ಗೌಡ ಅವರಿಗೆ ಚಿಕಿತ್ಸೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿದಿನ ರೆಗ್ಯುಲರ್ ಚೆಕಪ್ ಮಾಡಲಾಗುತ್ತದೆ. ನಾನೇ ಠಾಣೆಗೆ ಹೋಗಿ ಎಲ್ಲರನ್ನೂ ಚೆಕಪ್ ಮಾಡುತ್ತಿದ್ದೆ. ಇವರು ಬೆಳಗ್ಗೆಯಿಂದ ತಿಂಡಿ, ಊಟ ಸರಿಯಾಗಿ ಮಾಡುತ್ತಿರಲಿಲ್ಲ. ಹೀಗಾಗಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ನೀಡಲಾಯ್ತು ಎಂದರು.

ಠಾಣೆಗೆ ಹೋಗಿದ್ವಿ. ಈ ವೇಳೆ ಪವಿತ್ರಾ ಗೌಡ ಬಿಪಿ ಲೋ ಇತ್ತು. ಹೀಗಾಗಿ ಆಕೆಯನ್ನ ಇಲ್ಲಿಗೆ ಕರೆ ತಂದು ಚಿಕಿತ್ಸೆ ಕೊಟ್ಟಿದ್ದೇವೆ, ಡ್ರಿಪ್ಸ್‌ ಹಾಕಲಾಗಿತ್ತು. ಗ್ಲೂಕೋಸ್ ನೀಡಲಾಗಿದೆ. ಈಗ ಅವರ ಆರೋಗ್ಯ ಸ್ಥಿತಿ ಸುಧಾರಿಸಿದೆ. ಉಳಿದ ಆರೋಪಿಗಳ ಆರೋಗ್ಯ ಸ್ಥಿತಿ ಚೆನ್ನಾಗಿದೆ ಎಂದು ಅವರು ತಿಳಿಸಿದರು.

ಇನ್ನು ಚಿಕಿತ್ಸೆಯ ಬಳಿಕ ಪವಿತ್ರಾ ಗೌಡ ಅವರನ್ನು ಪೊಲೀಸರು ವಾಪಸ್ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆದುಕೊಂಡು‌ ಹೋಗಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ A1 ಆರೋಪಿ ಪವಿತ್ರಾ ಗೌಡ ಅಸ್ವಸ್ಥ

Share This Article