ಬೆಂಗಳೂರು: ವೈದ್ಯೆ ಕೃತಿಕಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯ ಮಹೇಂದ್ರ ರೆಡ್ಡಿ 11 ತಿಂಗಳಿಂದಲೇ ಪತ್ನಿಗೆ ಕೊಲೆಗೆ ಯತ್ನಿಸಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.
ಪ್ರಕರಣ ಸಂಬಂಧ ಮಾರತ್ತಹಳ್ಳಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಮತ್ತಷ್ಟು ಭಯಾನಕ ವಿಚಾರಗಳು ಹೊರಬರುತ್ತಿವೆ. ಪತ್ನಿ ಹತ್ಯೆಗೆ ಪತಿ ಹನ್ನೊಂದು ತಿಂಗಳಿಂದ ಪ್ರಯತ್ನ ನಡೆಸುತ್ತಿದ್ದ ಅನ್ನೋ ಆತಂಕಕಾರಿ ವಿಚಾರ ಹೊರಬಿದ್ದಿದೆ.ಇದನ್ನೂ ಓದಿ: ಮಹೇಂದ್ರ ರೆಡ್ಡಿಗೆ ಬೇರೆ ಯುವತಿ ಜೊತೆ ಸಂಬಂಧ ಶಂಕೆ – ವೈದ್ಯೆ ಕೃತಿಕಾ ಸಾವಿನ ಹಿಂದೆ ಅವಳ ನೆರಳು?
ಕ್ರಿಮಿನಲ್ ಕಿಲ್ಲರ್ ಡಾ.ಮಹೀಂದ್ರ ರೆಡ್ಡಿ ಹಲವು ಬಾರಿ ಪತ್ನಿಯ ಹತ್ಯೆ ಮಾಡಲು ಪಯತ್ನ ಮಾಡಿದ್ದ. ಮದುವೆಯಾದ ಸ್ಪಲ್ಪ ದಿನಗಳ ಅಂತರದಲ್ಲೇ ಆರೋಪಿ ಪತ್ನಿ ಹತ್ಯೆಗೆ ಪ್ರಯತ್ನ ಪಡುತ್ತಿದ್ದ ಅನ್ನೋದು ತನಿಖೆಯಲ್ಲಿ ಗೊತ್ತಾಗಿದೆ. ಹನ್ನೊಂದು ತಿಂಗಳ ಅವಧಿಯಲ್ಲಿ ಡಾ.ಕೃತಿಕಾ ರೆಡ್ಡಿ ಮೇಲೆ ಹಲವು ಬಾರಿ ಡ್ರಗ್ ಪ್ರಯೋಗ ಮಾಡಿರೋದು ತಿಳಿದುಬಂದಿದೆ. ಪಿರೇಡ್ ಸಮಯದಲ್ಲಿ ನೋವು ಬಾರದಂತೆ ಹಾಗೂ ಕೆಲ ಸಮಯದಲ್ಲಿ ಡ್ರಗ್ ಕೊಟ್ಟಿದ್ದನಂತೆ. ಈ ಬಗ್ಗೆ ಪೊಲೀಸರಿಂದ ಗೊತ್ತಾಗಿದೆ ಎಂದು ಮೃತ ಕೃತಿಕಾ ಪೋಷಕರು ಮಾಹಿತಿ ನೀಡಿದ್ದಾರೆ.
ಮದುವೆ ಆದ ಒಂದಷ್ಟು ದಿನಗಳ ಬಳಿಕ ಕೃತಿಕಾ ಮೇಲೆ ಡ್ರಗ್ಸ್ ಪ್ರಯೋಗಿಸಿದ್ದಾನೆ. ಬಳಿಕ ಒಮ್ಮೆ ಅಧಿಕವಾಗಿ ಡ್ರಗ್ ಪ್ರಯೋಗಿಸಿದ್ದಾನೆ. ಪರಿಣಾಮ ಡಾ.ಕೃತಿಕಾ ಮೃತಪಟ್ಟಿದ್ದಾರೆ ಎಂದು ಎಫ್‌ಎಸ್‌ಎಲ್ ವರದಿಯಿಂದ ತಿಳಿದು ಬಂದಿದೆ ಎನ್ನಲಾಗ್ತಿದೆ.
ಸದ್ಯ 9 ದಿನಗಳ ಕಾಲ ಆರೋಪಿ ಮಹೀಂದ್ರ ರೆಡ್ಡಿಯನ್ನು ಕಸ್ಟಡಿಗೆ ಪಡೆದಿರೋ ಮಾರತ್ತಹಳ್ಳಿ ಪೊಲೀಸರು ಹಲವು ಆಯಾಮಗಳಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಬೆಂಗಳೂರು | ಆರೋಗ್ಯ ಸಮಸ್ಯೆ ಮುಚ್ಚಿಟ್ಟು ಮದುವೆಯಾದ ಪತ್ನಿಗೆ ಇಂಜೆಕ್ಷನ್ ಕೊಟ್ಟು ಕೊಂದ ಕಿಲ್ಲರ್ ಡಾಕ್ಟರ್