ಪ್ರೀತಿಸಿ ಯುವತಿಗೆ ವಂಚನೆ, ಮೂರು ಬಾರಿ ಗರ್ಭಿಣಿ – ವೈದ್ಯ ಅರೆಸ್ಟ್

Public TV
1 Min Read

ಹಾವೇರಿ: ದಂತ ವೈದ್ಯ ಹಾಗೂ ಯುವತಿಯೊಬ್ಬಳ ನಡುವಿನ ಪ್ರೇಮ ಪ್ರಸಂಗದ ವಿಚಾರದಲ್ಲಿ ನಡೆದ ಕಲಹ ಪೊಲೀಸ್ ಠಾಣೆಯ ಮೆಟ್ಟಿಲೇರಿ, ವೈದ್ಯ ಜೈಲು ಪಾಲಾದ ಪ್ರಕರಣ ಜಿಲ್ಲೆಯ (Haveri) ರಾಣೇಬೆನ್ನೂರಿನಲ್ಲಿ (Ranebennur) ನಡೆದಿದೆ.

ನಗರದ ದಂತ ಆಸ್ಪತ್ರೆಯೊಂದರಲ್ಲಿ ಯುವತಿಯೊಬ್ಬಳು ಕೆಲಸಕ್ಕೆ ಸೇರಿದ್ದಳು. ಈ ವೇಳೆ ಯುವತಿ ಹಾಗೂ ವೈದ್ಯ ವಿಜಯ್‍ಕುಮಾರ್ ನಡುವೆ ಪ್ರೇಮಾಂಕುರವಾಗಿದೆ. ಇದು ದೈಹಿಕ ಸಂಪರ್ಕದವರೆಗೂ ಮುಂದುವರೆದಿದೆ. ಯುವತಿ ಮೂರು ಬಾರಿ ಗರ್ಭಿಣಿ ಆಗಿದ್ದಾಳೆ. ಆದರೆ ಡಾಕ್ಟರ್ ಮದುವೆಯಾಗಲು ಹಿಂದೇಟು ಹಾಕುತ್ತಿದ್ದ ಎನ್ನಲಾಗಿದೆ. ಈ ವಿಚಾರವಾಗಿ ಯುವತಿ ಪೊಲೀಸ್ (Police) ಠಾಣೆ ಮೆಟ್ಟಿಲೇರಿದ್ದಾಳೆ. ಇದನ್ನೂ ಓದಿ: ನಾನು ನನ್ನ ಕ್ಷೇತ್ರದ ಕೆಲಸಕ್ಕಾಗಿ ಯಾರ ಬಳಿ ಬೇಕಾದರೂ ಹೋಗುತ್ತೇನೆ: ಮುನಿರತ್ನ

ಪೊಲೀಸರ ಸಮ್ಮುಖದಲ್ಲಿ ಯುವತಿಯನ್ನು ತನ್ನಿಂದ ದೂರ ಮಾಡುವಂತೆ ವೈದ್ಯ ಮನವಿ ಮಾಡಿದ್ದ ಎನ್ನಲಾಗಿದೆ. ಒಂದು ಲಕ್ಷ ರೂ. ಕೊಡಲು ಮುಂದಾಗಿದ್ದ. ಅಲ್ಲದೇ ಯುವತಿಯ ವಿರುದ್ಧ ಹನಿಟ್ರ್ಯಾಪ್ ಕೇಸ್ ಕೂಡ ದಾಖಲು ಮಾಡಿದ್ದಾನೆ. ಆದರೆ ಇದಕ್ಕೆಲ್ಲಾ ಹೆದರದ ಯುವತಿ ವೈದ್ಯಕೀಯ ಪರೀಕ್ಷೆಗೆ ತಯಾರಾಗಿದ್ದಾಳೆ. ಯುವತಿ ಮಾಧ್ಯಮಗಳಿಗೆ ಹೇಳಿಕೆ ಕೊಡುತ್ತಿದ್ದಂತೆ ಎಚ್ಚೆತ್ತ ರಾಣೇಬೆನ್ನೂರು ಪೊಲೀಸರು ಅತ್ಯಾಚಾರ ಆರೋಪದ ಮೇಲೆ ವೈದ್ಯನನ್ನು ಬಂಧಿಸಿದ್ದಾರೆ.

ಇಬ್ಬರ ಮೇಲೂ ಪ್ರಕರಣ ದಾಖಲಾಗಿದೆ. ತನಿಖೆಯ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ ಎಂದು ಹಾವೇರಿ ಎಸ್‍ಪಿ ತಿಳಿಸಿದ್ದಾರೆ. ಇದನ್ನೂ ಓದಿ: ಸಣ್ಣ ಮಕ್ಕಳ ಹಾಲಿಗೆ 4, ದೊಡ್ಡ ಮಕ್ಕಳ ಕ್ವಾಟರ್‌ಗೆ 40 ರೂ. ಜಾಸ್ತಿ – ಸರ್ಕಾರದ ವಿರುದ್ಧ ಅಶೋಕ್ ಕಿಡಿ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್